ಫ್ಲೊರಿಡಾದಲ್ಲಿ ನಿವೇದಿತಾ: ರಿಯಾಲಿಟಿ ಬ್ಯೂಟಿಯ ಹಾಟ್​ ಫೋಟೋಸ್​ ವೈರಲ್​! Niveditha Gowda

ಜನಪ್ರಿಯತೆ ಕೊಟ್ಟ ಬಿಬಿಕೆ 5
ಜನಪ್ರಿಯತೆ ಕೊಟ್ಟ ಬಿಬಿಕೆ 5
Published on
Niveditha Gowda

ಜನಪ್ರಿಯತೆ ಕೊಟ್ಟ ಬಿಬಿಕೆ 5

ನಟಿ, ಮಾಡೆಲ್, ಬಿಗ್​ಬಾಸ್​ ಮಾಜಿ ಸ್ಪರ್ಧಿ​ ಹಾಗೂ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ನಿವೇದಿತಾ ಗೌಡ ಬಗ್ಗೆ ಕನ್ನಡಿಗರಿಗೆ ವಿಶೇಷವಾಗಿ ಹೇಳಬೇಕಿಲ್ಲ. ಬಿಗ್​ಬಾಸ್​ ಸೀಸನ್​ 5ರಲ್ಲಿ ಭಾಗವಹಿಸಿದ ಬಳಿಕ ಭಾರಿ ಜನಪ್ರಿಯತೆ ಗಳಿಸಿದರು.
Niveditha Gowda

ಮುಗ್ಧತೆ, ಸರಳತೆಗೆ ಜನಪ್ರಿಯತೆ

ಮೈಸೂರಿನಲ್ಲಿ 1999ರಲ್ಲಿ ಜನಿಸಿದ ನಿವೇದಿತಾಗೆ ಪ್ರಸ್ತುತ ಸುಮಾರು 26 ವರ್ಷ ವಯಸ್ಸು. ಡಬ್‌ಸ್ಮ್ಯಾಶ್ ವಿಡಿಯೋಗಳ ಮೂಲಕ ಖ್ಯಾತಿ ಪಡೆದರು. ಇದೇ ಖ್ಯಾತಿಯಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 5 (2017)ರಲ್ಲಿ ಭಾಗವಹಿಸಿ ಫೈನಲಿಸ್ಟ್ ಆದರು. ಬಿಗ್​ಬಾಸ್​ನಲ್ಲಿ ಆಕೆಯ ಮುಗ್ಧತೆ ಮತ್ತು ಸರಳತೆಗೆ ಜನಪ್ರಿಯತೆ ಸಿಕ್ಕಿತು.
Niveditha Gowda

ಪ್ರೀತಿಸಿ ಮದುವೆ ನಂತರ ವಿಚ್ಛೇದನ

ಅದೇ ಬಿಗ್​ಬಾಸ್​ ಸೀಸನ್​ನಲ್ಲಿ ಸಹ ಸ್ಪರ್ಧಿಯಾಗಿದ್ದ ರ್ಯಾಪರ್ ಮತ್ತು ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಅವರನ್ನು ಪ್ರೀತಿಸಿ, 2020ರಲ್ಲಿ ಮದುವೆಯಾದರು. ಆದರೆ 2024ರಲ್ಲಿ ಪರಸ್ಪರ ಒಪ್ಪಿಗೆಯಿಂದ ಇಬ್ಬರು ವಿಚ್ಛೇದನ ಪಡೆದರು.
Niveditha Gowda

ಮುದ್ದು ರಾಕ್ಷಸಿ ಚಿತ್ರದಲ್ಲಿ ನಟನೆ

ಮಾಡೆಲಿಂಗ್, ಜಾಹೀರಾತುಗಳು, ಸೋಶಿಯಲ್ ಮೀಡಿಯಾ ರೀಲ್ಸ್‌ಗಳ ಮೂಲಕ ಸದ್ಯ ನಿವೇದಿತಾ ಅವರು ಸಕ್ರಿಯರಾಗಿದ್ದಾರೆ. 2025ರಲ್ಲಿ ಮುದ್ದು ರಾಕ್ಷಸಿ ಚಿತ್ರದಲ್ಲಿ ಚಂದನ್ ಶೆಟ್ಟಿ ಅವರೊಂದಿಗೆ ನಟಿಸಿದರು. ಆದರೆ, ಈ ಸಿನಿಮಾ ಫ್ಲಾಪ್​ ಆಯಿತು.
Niveditha Gowda

ಇನ್‌ಸ್ಟಾಗ್ರಾಮ್‌ನಲ್ಲಿ ಸಖತ್​ ಆ್ಯಕ್ಟೀವ್

ಇನ್‌ಸ್ಟಾಗ್ರಾಮ್‌ನಲ್ಲಿ @niveditha__gowda ಹ್ಯಾಂಡಲ್‌ನಲ್ಲಿ ಲಕ್ಷಾಂತರ ಫಾಲೋವರ್ಸ್ ಹೊಂದಿದ್ದಾರೆ. ತಮ್ಮ ಇನ್​ಸ್ಟಾಗ್ರಾಂನಲ್ಲಿ ಫ್ಯಾಷನ್, ಡ್ಯಾನ್ಸ್ ರೀಲ್ಸ್ ಮತ್ತು ಪ್ರವಾಸ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಆಗಾಗ ಹಾಟ್​ ಫೋಟೋಗಳನ್ನು ಹರಿಬಿಡುವ ಮೂಲಕ ನಿವೇದಿತಾ, ನೆಟ್ಟಿಗರ ಕೆಂಗಣ್ಣಿಗೂ ಗುರಿಯಾಗುತ್ತಿರುತ್ತಾರೆ.
Niveditha Gowda

ಫ್ಲೊರಿಡಾಗೆ ನಿವೇದಿತಾ ಭೇಟಿ

ಸದ್ಯ 2026ರ ಹೊಸ ವರ್ಷವನ್ನು ಸ್ವಾಗತಿಸಲು ನಿವೇದಿತಾ ಅವರು ಫ್ಲೊರಿಡಾಗೆ ಭೇಟಿ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ನಿವೇದಿತಾ ಹಂಚಿಕೊಂಡಿದ್ದಾರೆ. ತುಂಡುಡುಗೆ ತೊಟ್ಟು ಆಕರ್ಷಕ ಭಂಗಿಗಳಲ್ಲಿ ಕ್ಯಾಮೆರಾ ಮುಂದೆ ನಿವೇದಿತಾ ಪೋಸ್​ ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net