ನಿನ್ನೆ (ಜನವರಿ 22, 2026) ಆಯೋಜಿಸಲಾಗಿದ್ದ ಆರ್‌ಸಿಬಿ 'ಗಾಲಾ ನೈಟ್' ಕಾರ್ಯಕ್ರಮದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡದ ಆಟಗಾರ್ತಿಯರು ಅತ್ಯಂತ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಸ್ಮೃತಿ ಲುಕ್ಗೆ ಫ್ಯಾನ್ಸ್ ಫಿದಾ
ಆರ್‌ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಅವರು ಗಾಲಾ ನೈಟ್ ಕಾರ್ಯಕ್ರಮದಲ್ಲಿ ಕಪ್ಪು ಬಣ್ಣದ ಟ್ರೆಂಡಿ ಡ್ರೆಸ್ನಲ್ಲಿ ಎಲ್ಲರ ಗಮನ ಸೆಳೆದರು.
ಲಾರೆನ್ ಲುಕ್ಗೆ ಕ್ಲೀನ್ ಬೋಲ್ಡ್
ತಮ್ಮ ವೇಗದ ಬೌಲಿಂಗ್ ದಾಳಿಯಿಂದ ಎದುರಾಳಿ ತಂಡದ ಬ್ಯಾಟ್ಸ್ವುಮನ್ಗಳಲ್ಲಿ ನಡುಕ ಹುಟ್ಟಿಸಿರುವ ಆರ್‌ಸಿಬಿ ಸ್ಪೀಡ್ ಸ್ಟಾರ್ ಲಾರೆನ್ ಬೆಲ್ ಹಳದಿ ಬಣ್ಣದ ಉಡುಪಿನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡರು.
ಮೋಡಿ ಮಾಡಿದ ಗೌತಮಿ ನಗು
ಗೌತಮಿ ನಾಯಕ್ ಕರ್ನಾಟಕ ಮೂಲದ ಉದಯೋನ್ಮುಖ ಆಲ್-ರೌಂಡರ್ ಆಟಗಾರ್ತಿಯಾಗಿದ್ದಾರೆ. ಇತ್ತೀಚೆಗೆ ನಡೆದ ತಂಡದ 'ಗಾಲಾ ನೈಟ್' ಕಾರ್ಯಕ್ರಮದಲ್ಲಿ ಅವರು ಕಪ್ಪು ಬಣ್ಣದ ಸಾಂಪ್ರದಾಯಿಕ ಉಡುಪಿನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದರು.
ನಾಚಿದ ನಾಡಿನ್
ತಮ್ಮ ಬೌಲಿಂಗ್ ಮತ್ತು ಸ್ಫೋಟಕ ಬ್ಯಾಟಿಂಗ್ನಿಂದ ಎದುರಾಳಿ ತಂಡಕ್ಕೆ ಮುಳ್ಳಾಗಿರುವ ಆರ್‌ಸಿಬಿ ಆಲ್ರೌಂಡರ್ ನಾಡಿನ್ ಡಿ ಕ್ಲರ್ಕ್ ಸಾಂಪ್ರಾದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡರು.
ಜಾರ್ಜಿಯಾ ವಿಸ್ಮಯ
ಆರ್‌ಸಿಬಿ ಮಹಿಳಾ ತಂಡದ ಬ್ಯಾಟಿಂಗ್ ಶಕ್ತಿಯಾಗಿರುವ ಜಾರ್ಜಿಯಾ ವೋಲ್ ಅವರು ಕೆಂಪು ಬಣ್ಣದ ದಿರಿಸಿನಲ್ಲಿ ಗಾಲಾ ನೈಟ್ನಲ್ಲಿ ಎಲ್ಲ ಕಣ್ಣು ಕುಕ್ಕಿದರು.
ಗ್ರೇಸ್ ಹ್ಯಾರಿಸ್ ಕಮಾಲ್
ತಮ್ಮ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕವೇ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸಿರುವ ಆರ್‌ಸಿಬಿ ಹೆಣ್ಣು ಹುಲಿ ಗ್ರೇಸ್ ಹ್ಯಾರಿಸ್ ಕಪ್ಪು ಬಣ್ಣದ ದಿರಿಸಿನಲ್ಲಿ ಕಂಗೊಳಿಸಿದರು.
ಹಾಟ್ ರಿಚಾ
ತಮ್ಮ ವಿಕೆಟ್ ಕೀಪಿಂಗ್ ಕೌಶಲ್ಯ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಆರ್‌ಸಿಬಿ ಪಾಲಿಗೆ ಆಧಾತವಾಗಿರುವ ಸ್ಫೋಟಕ ಆಟಗಾರ್ತಿ ರಿಚಾ ಘೋಷ್ ಕಡು ನೀಲಿ ಬಣ್ಣದ ಲಾಂಗ್ ಡ್ರೆಸ್ನಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡರು.
ಟಗರು ಪುಟ್ಟಿ ಶ್ರೇಯಾಂಕಾ
ಸ್ಪಿನ್ ಬೌಲಿಂಗ್ನಲ್ಲಿ ಆರ್ಸಿಬಿಗೆ ಪ್ರಮುಖ ಅಸ್ತ್ರವಾಗಿರುವ ಹಾಗೂ ನಿರ್ಣಾಯಕ ಸಮಯದಲ್ಲಿ ವಿಕೆಟ್ ಕಬಳಿಸುವ ಕನ್ನಡತಿ ಶ್ರೇಯಾಂಕಾ ಪಾಟೀಲ್ ಬಾಡಿ ಫಿಟ್ ಉಡುಗೆಯಲ್ಲಿ ಸಖತ್ ಹಾಟ್ ಆಗಿ ಪೋಸ್ ನೀಡಿದರು.
ಮನ ಗೆದ್ದ ರಾಧಾ
ಆರ್‌ಸಿಬಿ ತಂಡಕ್ಕೆ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಮೂಲಕ ಬಲ ತುಂಬುತ್ತಿರುವ ರಾಧಾ ಯಾದವ್ ಪ್ಯಾಂಟ್-ಟಾಪ್ನಲ್ಲಿ ಮಿಂಚಿದರು.
ಅರುಂಧತಿ ಸ್ಟೈಲಿಶ್ ಲುಕ್
ತಮ್ಮ ಬ್ಯಾಟಿಂಗ್ ಮತ್ತು ವೇಗದ ಬೌಲಿಂಗ್ನಿಂದ ಆರ್ಸಿಬಿಯ ಪ್ರಮುಖ ಅಸ್ತ್ರವಾಗಿರುವ ಅರುಂಧತಿ ರೆಡ್ಡಿ ಸ್ಟೈಲಿಶ್ ಲುಕ್ನಲ್ಲಿ ಮಿಂಚಿದರು.
ಹ್ಯಾರಿಸ್-ಸ್ಮೃತಿ ಮಿಂಚು
ತಂಡದ ನಾಯಕಿ ಸ್ಮೃತಿ ಮಂಧಾನ ಹಾಗೂ ಸ್ಟಾರ್ ಆಟಗಾರ್ತಿ ಗ್ರೇಸ್ ಹ್ಯಾರಿಸ್ ಅವರು ಕಪ್ಪು ಬಣ್ಣದ ದಿರಿಸಿನಲ್ಲಿ ಕ್ಯಾಮೆರಾಗೆ ಒಟ್ಟಿಗೆ ಪೋಸ್ ನೀಡಿದರು.
ಲಾರೆನ್-ಸ್ಮೃತಿ ಜೋಡಿ
ಗಾಲಾ ನೈಟ್ ಕಾರ್ಯಕ್ರಮದಲ್ಲಿ ತಂಡದ ನಾಯಕಿ ಸ್ಮೃತಿ ಮಂಧಾನ ಜತೆ ಕ್ಯಾಮೆರಾಗೆ ಪೋಸ್ ನೀಡಿದ ವೇಗದ ಬೌಲರ್ ಲಾರೆನ್ ಬೆಲ್.
ಸಖತ್ ಅಂಡ್ ಸ್ಟೈಲಿಶ್
ತಂಡದ ಸದಸ್ಯರೆಲ್ಲರೂ ಒಟ್ಟಾಗಿ ಹಾಡುಗಳಿಗೆ ಹೆಜ್ಜೆ ಹಾಕುತ್ತಾ, ಕ್ರಿಕೆಟ್ ಒತ್ತಡದಿಂದ ಹೊರಬಂದು ಪರಸ್ಪರ ಸ್ನೇಹದ ಕ್ಷಣಗಳನ್ನು ಆನಂದಿಸಿದರು.
ಸಖತ್ ಎಂಜಾಯ್ ಮಾಡುತ್ತಿರುವ ಆರ್‌ಸಿಬಿ ವನಿತೆಯರು
ಈ ಗಾಲಾ ನೈಟ್ ಕಾರ್ಯಕ್ರಮವು ಕೇವಲ ಸಂಭ್ರಮಕ್ಕೆ ಮಾತ್ರ ಸೀಮಿತವಾಗದೆ, ಸತತ ಐದು ಪಂದ್ಯಗಳನ್ನು ಗೆದ್ದು ಪ್ಲೇ-ಆಫ್‌ಗೆ ಪ್ರವೇಶಿಸಿರುವ ತಂಡದ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ.
ಈ ಬಾರಿಯೂ ಕಪ್ ನಮ್ಮದೇ
ಆಟಗಾರ್ತಿಯರ ಈ ಸಂಭ್ರಮವು ಮೈದಾನದಲ್ಲಿ ಅವರ ನಡುವಿನ ಬಾಂಧವ್ಯ ಎಷ್ಟು ಗಟ್ಟಿಯಾಗಿದೆ ಎಂಬುದನ್ನು ಸಾಬೀತುಪಡಿಸಿತು. ಮುಂದಿನ ಪಂದ್ಯಗಳಿಗೂ ಮುನ್ನ ಆಟಗಾರ್ತಿಯರು ಈ ರೀತಿ ಒಟ್ಟಾಗಿ ಸಮಯ ಕಳೆದಿದ್ದು, ಅಭಿಮಾನಿಗಳಲ್ಲಿ 'ಈ ಬಾರಿಯೂ ಕಪ್ ನಮ್ಮದೇ' ಎಂಬ ನಿರೀಕ್ಷೆಯನ್ನು ಮೂಡಿಸಿದೆ.