ಕಪ್ಪು ಬಣ್ಣದ ದಿರಿಸಿನಲ್ಲಿ ಸೌಂದರ್ಯ "ರಾಶಿ"

ಹಾಟ್​ ಬ್ಯೂಟಿ ರಾಶಿ
ಹಾಟ್​ ಬ್ಯೂಟಿ ರಾಶಿ
Published on
Raashi Khanna

ಹಾಟ್​ ಬ್ಯೂಟಿ ರಾಶಿ

ನಟಿ ರಾಶಿ ಖನ್ನಾ ಸೌತ್​ ಸಿನಿಮಾ ರಂಗದ ಬಹು ಬೇಡಿಕೆ ನಟಿಯಲ್ಲಿ ಒಬ್ಬರು. ಸ್ಟಾರ್​ ನಟರ ಜತೆ ನಟಿಸಿ ಸೈ ಎನಿಸಿಕೊಂಡಿರುವ ರಾಶಿ, ನಿಜಕ್ಕೂ ಸೌಂದರ್ಯದ ರಾಶಿಯೇ.
Raashi Khanna

ದೆಹಲಿ ಬ್ಯೂಟಿ

ರಾಶಿ ಖನ್ನಾ ಅವರು ನವೆಂಬರ್ 30, 1990 ರಂದು ದೆಹಲಿಯಲ್ಲಿ ಜನಿಸಿದರು. ಇವರು ದೆಹಲಿಯ ಲೇಡಿ ಶ್ರೀ ರಾಮ್ ಮಹಿಳಾ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದಿದ್ದಾರೆ.
Raashi Khanna

ಬಾಲಿವುಡ್​ನಿಂದ ಜರ್ನಿ ಆರಂಭ

ಇವರು 2013 ರಲ್ಲಿ ತೆರೆಕಂಡ ಹಿಂದಿ ಚಿತ್ರ 'ಮದ್ರಾಸ್ ಕೆಫೆ' ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ 2014 ರಲ್ಲಿ 'ಊಹಲು ಗುಸಗುಸಲಾಡೆ' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪ್ರವೇಶಿಸಿದರು.
Raashi Khanna

ಬಹುಭಾಷಾ ನಟಿ

ನಟಿ ರಾಶಿ ಕೇವಲ ಹಿಂದಿಗೆ ಸೀಮಿತವಾಗಲಿಲ್ಲ. ಇವರು ಮುಖ್ಯವಾಗಿ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಸಕ್ರಿಯರಾಗಿದ್ದಾರೆ. 'ಸುಪ್ರೀಮ್', 'ಜೈ ಲವ ಕುಶ', 'ತೊಲಿ ಪ್ರೇಮ', 'ತಿರುಚಿತ್ರಂಬಲಂ' ಮತ್ತು 'ಅರನ್ಮನೈ 4' ಇವರ ಕೆಲವು ಯಶಸ್ವಿ ಚಿತ್ರಗಳು.
Raashi Khanna

ಗಾಯನ ಪ್ರತಿಭೆ

ನಟನೆಯ ಜೊತೆಗೆ ರಾಶಿ ಖನ್ನಾ ಅವರು ಉತ್ತಮ ಗಾಯಕಿ ಕೂಡ ಹೌದು. ಇವರು 'ಜೋರು' ಎಂಬ ತೆಲುಗು ಚಿತ್ರದಲ್ಲಿ ಹಾಡುವ ಮೂಲಕ ಹಿನ್ನೆಲೆ ಗಾಯಕಿಯಾಗಿ ಗುರುತಿಸಿಕೊಂಡರು.
Raashi Khanna

ಪ್ರಶಸ್ತಿಗಳು

ತಮ್ಮ ಮೊದಲ ತೆಲುಗು ಚಿತ್ರ 'ಊಹಲು ಗುಸಗುಸಲಾಡೆ' ಗಾಗಿ ಇವರು ಅತ್ಯುತ್ತಮ ಚೊಚ್ಚಲ ನಟಿ ಎಂಬ SIIMA ಪ್ರಶಸ್ತಿಯನ್ನು ಪಡೆದಿದ್ದಾರೆ.
Raashi Khanna

ವೆಬ್ ಸರಣಿಗಳು

ಬೆಳ್ಳಿ ಪರದೆಯಲ್ಲದೆ, ಒಟಿಟಿ (OTT) ಪ್ಲಾಟ್‌ಫಾರ್ಮ್‌ಗಳಲ್ಲೂ ಇವರು ಮಿಂಚುತ್ತಿದ್ದಾರೆ. 'ರುದ್ರ' ಮತ್ತು 'ಫರ್ಜಿ'ಯಂತಹ ಜನಪ್ರಿಯ ವೆಬ್ ಸರಣಿಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.
Raashi Khanna

ಹಾಟ್​ ಫೋಟೋ ಹರಿಬಿಟ್ಟ ರಾಶಿ

ಜಾಲತಾಣದಲ್ಲಿ ಸಕ್ರಿಯರಾಗಿರುವ ರಾಶಿ ಖನ್ನಾ ಇದೀಗ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಾಟ್​ ಫೋಟೋಗಳನ್ನು ಹರಿಬಿಟ್ಟಿದ್ದಾರೆ. ಕಪ್ಪು ಬಣ್ಣದ ದಿರಿಸಿನಲ್ಲಿ ಕ್ಯಾಮೆರಾಗೆ ಮಾದಕವಾಗಿ ಪೋಸ್​ ನೀಡಿದ್ದಾರೆ. ವೈರಲ್​ ಆಗುತ್ತಿರುವ ಅವರ ಫೋಟೋಗಳನ್ನು ನೋಡಿ, ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ನೀವು ನಿಜಕ್ಕೂ ಸೌಂದರ್ಯದ ರಾಶಿ ಎಂದು ಹೊಗಳುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net