ಮರೆಗುಳಿತನಕ್ಕೆ ಬ್ರೇಕ್ ಹಾಕಿ: ಜ್ಞಾಪಕ ಶಕ್ತಿ ಹೆಚ್ಚಿಸಲು ಇಲ್ಲಿವೆ ಅದ್ಭುತ ಬ್ರೇನ್ ಫುಡ್ಸ್! Brain Foods

ಮೆದುಳಿನ ಶಕ್ತಿ ಎಂದರೇನು?
ಮೆದುಳಿನ ಶಕ್ತಿ ಎಂದರೇನು?
Published on
Brain Foods

ಮೆದುಳಿನ ಶಕ್ತಿ ಎಂದರೇನು?

ಮೆದುಳಿನ ಶಕ್ತಿ ಎನ್ನುವುದು ಕೇವಲ ನೆನಪಿನ ಶಕ್ತಿಯಲ್ಲ; ಇದು ನಮ್ಮ ಮೆದುಳು ಮಾಹಿತಿಯನ್ನು ಹೇಗೆ ಸಂಸ್ಕರಿಸುತ್ತದೆ, ಪ್ರತಿಕ್ರಿಯಿಸುತ್ತದೆ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಎಂಬ ಒಟ್ಟಾರೆ ಸಾಮರ್ಥ್ಯವಾಗಿದೆ.
Brain Foods

ಒಣ ದ್ರಾಕ್ಷಿ ಮತ್ತು ಒಣ ಪಲಗಳು

ಅಕ್ರೋಟ್ ನೋಡಲು ಮೆದುಳಿನ ಆಕಾರದಲ್ಲೇ ಇರುತ್ತದೆ ಮತ್ತು ಇದು ಮೆದುಳಿಗೆ ತುಂಬಾ ಒಳ್ಳೆಯದು. ಇದರಲ್ಲಿರುವ 'ಒಮೆಗಾ-3 ಫ್ಯಾಟಿ ಆಸಿಡ್'ಗಳು ಮೆದುಳಿನ ಜೀವಕೋಶಗಳನ್ನು ಬಲಪಡಿಸುತ್ತವೆ. ಬಾದಾಮಿಯಲ್ಲಿರುವ ವಿಟಮಿನ್ ಇ ಸ್ಮರಣಶಕ್ತಿ ಕುಂದದಂತೆ ಕಾಪಾಡುತ್ತದೆ.
Brain Foods

ಸೊಪ್ಪು ತರಕಾರಿಗಳು

ಪಾಲಕ್ ಮತ್ತು ಇತರ ಹಸಿರು ಸೊಪ್ಪುಗಳಲ್ಲಿ ವಿಟಮಿನ್ ಕೆ, ಲುಟೀನ್ ಮತ್ತು ಫೋಲೇಟ್ ಸಮೃದ್ಧವಾಗಿರುತ್ತದೆ. ಇವು ಮೆದುಳಿನ ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತವೆ ಮತ್ತು ಆಲೋಚನಾ ಸಾಮರ್ಥ್ಯವನ್ನು ಚುರುಕುಗೊಳಿಸುತ್ತವೆ.
Brain Foods

ಕೊಬ್ಬಿನ ಮೀನು

ನೀವು ಮಾಂಸಾಹಾರಿಯಾಗಿದ್ದರೆ ಸಾಲ್ಮನ್ ಅಥವಾ ಮ್ಯಾಕೆರೆಲ್‌ನಂತಹ ಮೀನುಗಳು ಅತ್ಯುತ್ತಮ. ಇದರಲ್ಲಿರುವ ಒಮೆಗಾ-3 ಕೊಬ್ಬಿನಾಮ್ಲವು ಮೆದುಳಿನ ಶೇ. 60ರಷ್ಟು ಭಾಗಕ್ಕೆ ಪೋಷಣೆ ನೀಡುತ್ತದೆ, ಇದು ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಲು ಸಹಕಾರಿ.
Brain Foods

ಅರಿಶಿನ

ಅರಿಶಿನದಲ್ಲಿರುವ 'ಕರ್ಕ್ಯುಮಿನ್' ಎಂಬ ಅಂಶವು ಮೆದುಳಿನ ಜೀವಕೋಶಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡುವುದಲ್ಲದೆ, ಅಲ್ಝೈಮರ್‌ನಂತಹ ಕಾಯಿಲೆಗಳಿಂದ ದೂರವಿರಲು ಸಹಾಯ ಮಾಡುತ್ತದೆ. ದಿನಾಲೂ ಹಾಲಿನಲ್ಲಿ ಅರಿಶಿನ ಬೆರೆಸಿ ಕುಡಿಯುವುದು ಒಳ್ಳೆಯದು.
Brain Foods

ಕುಂಬಳಕಾಯಿ ಬೀಜಗಳು

ಇವುಗಳಲ್ಲಿ ಸತು (Zinc), ಮೆಗ್ನೀಸಿಯಮ್, ತಾಮ್ರ ಮತ್ತು ಕಬ್ಬಿಣದ ಅಂಶಗಳು ಹೇರಳವಾಗಿವೆ. ಸತುವು ನರಗಳ ಸಂಕೇತಗಳನ್ನು ಕಳುಹಿಸಲು ಸಹಾಯ ಮಾಡಿದರೆ, ಮೆಗ್ನೀಸಿಯಮ್ ಕಲಿಕೆ ಮತ್ತು ನೆನಪಿನ ಶಕ್ತಿಗೆ ಅತ್ಯಗತ್ಯ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net