
ಸೆ.25ರಂದು ರಿಲೀಸ್ ಆಗಿದ್ದ ಪ್ರೇಮದ ಊರಲಿ ಸಿನಿಮಾವು 50 ಕೋಟಿಯನ್ನು ಗಳಿಸಿಕೊಂಡಿದೆ. ಕಡಿಮೆ ಬಜೆಟ್ನಲ್ಲಿ ನಿರ್ಮಾಣದ ಈ ಸಿನಿಮಾದ ಕತೆಗೆ ಸಿನಿ ಪ್ರೇಮಿಗಳು ಫಿದಾ ಆಗಿದ್ದಾರೆ. ಟಾಕ್ಸಿಕ್, ಬೇಲ್, ಹೆಗ್ಗಣ ಮುದ್ದು ಸಿನಿಮಾಗಳಿಗೂ ಈ ಚಿತ್ರ ಸೆಡ್ಡ ಹೊಡೆದಿದೆ.
ಹಳ್ಳಿ ಜನರ ಬದುಕು, ಹುಟ್ಟುಕೊಳ್ಳುವ ಅನುಮಾನಗಳು, ಪ್ರೀತಿ ಬಿರುಕು ಸೇರಿದಂತೆ ಸಂಬಂಧ ಸುತ್ತ ಈ ಸಿನಿಮಾದ ಕತೆಯನ್ನು ನಿರ್ದೇಶಕ ಮನೋಜ್ ಕುಮಾರ್ ಬರೆದಿದ್ದಾರೆ. ಹಳ್ಳಿಯ ಸುತ್ತಲಿನ ಪರಿಸರ, ಸಿಟಿ ಬದುಕು ಕಣ್ಣು ಕಟ್ಟುವಂತಿದೆ.
ಈ ಸಿನಿಮಾದಲ್ಲಿ ರಮಿಕಾ ಶಿವು ವಸಂತಳಾಗಿ ನಟಿಸಿದ್ದು ಮೊದಲಾರ್ಧ ರಗಡ್ ಆಗಿ ಜೀವಿಸಿದ್ದಾರೆ. ಪಾತ್ರದಲ್ಲಿ ನೈಜವಾದ ನಟನೆಯಿದ್ದು, ಹೆಚ್ಚು ಇಷ್ಟವಾಗುತ್ತಾರೆ.
ರಮಿಕಾ ಶಿವು ಹಲವು ಸೀರಿಯಲ್ಗಳಲ್ಲಿ ನಟಿಸಿ, ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನೀನಾದೆನಾ ಹೆಚ್ಚು ಖ್ಯಾತಿ ತಂದುಕೊಟ್ಟ ಸೀರಿಯಲ್. ಗಂಗಾ, ಪಾರು, ನಮ್ಮನೆ ಯುವರಾಣಿಯಲ್ಲಿಯೂ ನಟಿಸಿದ್ದಾರೆ.
ರಮಿಕಾ ಮತ್ತು ಅವರ ಸಹ ನಟ ದಿಲೀಪ್ ಶೆಟ್ಟಿ ಜೊತೆ ಸೇರಿ ಇತ್ತೀಚೆಗೆ ಹೋಟೆಲ್ ಉದ್ಯಮ ಶುರು ಮಾಡಿದ್ದರು. ದೊಡ್ಮನೆ ಹೋಟೆಲ್ ಎಂದು ಹೆಸರಿಟ್ಟಿದ್ದಾರೆ.
ದೀಲಿಪ್ ಶೆಟ್ಟಿ ಮತ್ತು ರಮಿಕಾ ಪ್ರೀತಿಸುತ್ತಿದ್ದಾರಾ ಎನ್ನುವ ಸಾಕಷ್ಟು ಪ್ರಶ್ನೆಗಳು ಅವರ ಫ್ಯಾನ್ಸ್ನಲ್ಲಿದೆ. ಆದರೆ, ಈ ಬಗ್ಗೆ ನಟಿ ಎಲ್ಲಿಯೂ ಅಧಿಕೃತ ಸ್ಪಷ್ಟನೆ ಕೊಟ್ಟಿಲ್ಲ.