ಕೂದಲಿನ ಅಂದ ಕೆಡಿಸುವ ತಲೆಹೊಟ್ಟು ಹೋಗಲಾಡಿಸಲು ಇಲ್ಲಿದೆ ಪವರ್‌ಫುಲ್ ಮನೆಮದ್ದು | Dandruff

ತಲೆಹೊಟ್ಟಿನ ಸಮಸ್ಯೆ
ತಲೆಹೊಟ್ಟಿನ ಸಮಸ್ಯೆ
Published on
-Powerful home remedies to get rid of dandruff that ruins the beauty of your hair."

ತಲೆಹೊಟ್ಟಿನ ಸಮಸ್ಯೆ

ಚಳಿಗಾಲದಲ್ಲಿ ತಲೆಹೊಟ್ಟು ಸಾಮಾನ್ಯವಾಗಿದ್ದು, ಅದನ್ನು ತೊಡೆದುಹಾಕಲು ಅನೇಕ ರೀತಿಯ ವಿಧಾನಗಳನ್ನು ಬಳಸಲಾಗುತ್ತದೆ. ಆದರೂ ಕೂಡ ಈ ಸಮಸ್ಯೆ ಕಡಿಮೆಯಾಗಿಲ್ಲವೇ..? ಒಮ್ಮೆ ಈ ಮನೆಮದ್ದನ್ನು ಟ್ರೈ ಮಾಡಿ ನೋಡಿ.
-Powerful home remedies to get rid of dandruff that ruins the beauty of your hair."

ಆಪಲ್ ಸೈಡರ್ ವಿನೆಗರ್

ಆಪಲ್ ಸೈಡರ್ ವಿನೆಗರ್ ತಲೆಹೊಟ್ಟು ನಿವಾರಣೆಗೆ ನೈಸರ್ಗಿಕ ಔಷಧವಾಗಿದೆ. ಇದರಲ್ಲಿರುವ ಆಸಿಟಿಕ್ ಆಸಿಡ್ ಇರುವುದರಿಂದ ಶಿಲೀಂಧ್ರ ಸೋಂಕು ಮತ್ತು ಆಂಟಿ ಬ್ಯಾಕ್ಟೀರಿಯಾಗಳನ್ನು ಕಡಿಮೆ ಮಾಡುತ್ತದೆ. ಜೊತೆಗೆ ತಲೆಯ pH ಸಮತೋಲನ ಮಾಡುತ್ತದೆ.
-Powerful home remedies to get rid of dandruff that ruins the beauty of your hair."

ತೆಂಗಿನ ಎಣ್ಣೆ ಮತ್ತು ನಿಂಬೆಹಣ್ಣಿನ ಮಿಶ್ರಣ

ತೆಂಗಿನ ಎಣ್ಣೆ ಮತ್ತು ನಿಂಬೆಹಣ್ಣಿನ ಮಿಶ್ರಣವು ತಲೆಹೊಟ್ಟು ನಿವಾರಣೆಗೆ ಅತ್ಯಂತ ಜನಪ್ರಿಯ ಔಷಧವಾಗಿದೆ. ತೆಂಗಿನ ಎಣ್ಣೆ ಕೂದಲಿಗೆ ತೇವಾಂಶ ನೀಡಿದರೆ, ನಿಂಬೆ ರಸವು ಶಿಲೀಂಧ್ರವನ್ನು ನಿಯಂತ್ರಿಸುತ್ತದೆ.
-Powerful home remedies to get rid of dandruff that ruins the beauty of your hair."

ಮೆಂತ್ಯ ಪೇಸ್ಟ್​

ಮೆಂತ್ಯ ತಲೆಹೊಟ್ಟು ಸಮಸ್ಯೆಗೆ ಒಂದು ಅತ್ಯುತ್ತಮ ನೈಸರ್ಗಿಕ ಔಷಧವಾಗಿದೆ. ಇದರಲ್ಲಿ ಆಂಟಿ-ಫಂಗಲ್, ಆಂಟಿ-ಬ್ಯಾಕ್ಟೀರಿಯಲ್, ಆಂಟಿ-ಇನ್‌ಫ್ಲಮೇಟರಿ ಗುಣಗಳಿದ್ದು, ಇದರ ಬಳಕೆಯು ತಲೆಹೊಟ್ಟು ಉಂಟುಮಾಡುವ ಶಿಲೀಂದ್ರ ಬೆಳವಣಿಗೆಯನ್ನು ನಿಯಂತ್ರಿಸುತ್ತದೆ.
-Powerful home remedies to get rid of dandruff that ruins the beauty of your hair."

ನಿಂಬೆ ಮತ್ತು ಮೊಸರು

ಮೊಸರು ಮತ್ತು ನಿಂಬೆಹಣ್ಣಿನ ಮಿಶ್ರಣವು ತಲೆಹೊಟ್ಟು ತ್ವರಿತವಾಗಿ ನಿಯಂತ್ರಿಸುತ್ತದೆ. ನಿಂಬೆಹಣ್ಣಿನಲ್ಲಿ ಸಿಟ್ರಿಕ್ ಆಮ್ಲ ಇರುವುದರಿಂದ ತಲೆಯ pH ಸಮತೋಲನ ಮಾಡುತ್ತದೆ. ಇದು ಹೆಚ್ಚುವರಿ ಎಣ್ಣೆಯನ್ನು ನಿಯಂತ್ರಿಸುವುದರ ಜೊತೆಗೆ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುತ್ತದೆ.
-Powerful home remedies to get rid of dandruff that ruins the beauty of your hair."

ಬೇವಿನ ಎಲೆಗಳು

ಬೇವಿನ ಎಲೆಗಳು ನೈಸರ್ಗಿಕವಾಗಿ ತಲೆಹೊಟ್ಟು ನಿವಾರಣೆಗೆ ಸಹಾಯ ಮಾಡುತ್ತವೆ. ಇದರಲ್ಲಿ ಆಂಟಿ-ಫಂಗಲ್, ಆಂಟಿ-ಬ್ಯಾಕ್ಟೀರಿಯಲ್, ಆಂಟಿ-ಇನ್‌ಫ್ಲಮೇಟರಿ ಗುಣಗಳಿದ್ದು, ಇದು ತಲೆಹೊಟ್ಟು ಉಂಟುಮಾಡುವ ಶಿಲೀಂದ್ರದ ಬೆಳವಣಿಗೆಯನ್ನು ತಡೆಯುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net