ಸುಡುವ ಬಿಸಿಲಲ್ಲೂ ನಿಮ್ಮನ್ನು ಫ್ರೆಶ್ ಆಗಿರಿಸುವ ಪಂಚಾಮೃತ ಆಹಾರಗಳು! Energy Foods

ಬೇಸಿಗೆಯ ಧಗೆ
ಬೇಸಿಗೆಯ ಧಗೆ
Published on
Energy Foods

ಬೇಸಿಗೆಯ ಧಗೆ

ಬೇಸಿಗೆಯ ಧಗೆಯಿಂದ ದೇಹವು ಬೇಗನೆ ಸುಸ್ತಾಗುವುದು ಸಹಜ. ಬಿಸಿಲಿನ ತಾಪದಿಂದ ಉಂಟಾಗುವ ನಿಶ್ಯಕ್ತಿಯನ್ನು ಹೋಗಲಾಡಿಸಿ, ತಕ್ಷಣ ಎನರ್ಜಿ ನೀಡುವ ಈ ಆಹಾರಗಳನ್ನು ಸೇವಿಸಿ
Energy Foods

ಎಳನೀರು

ಬೇಸಿಗೆಗೆ ಎಳನೀರಿಗಿಂತ ಮಿಗಿಲಾದ ಪಾನೀಯವಿಲ್ಲ. ಇದರಲ್ಲಿರುವ ಎಲೆಕ್ಟ್ರೋಲೈಟ್‌ಗಳು ದೇಹದ ನೀರಿನಂಶವನ್ನು ಸಮತೋಲನದಲ್ಲಿಡುತ್ತವೆ ಮತ್ತು ನಿರ್ಜಲೀಕರಣವನ್ನು ತಡೆಗಟ್ಟಿ ತಕ್ಷಣ ಚೈತನ್ಯ ನೀಡುತ್ತವೆ.
Energy Foods

ಕಲ್ಲಂಗಡಿ ಹಣ್ಣು

ಶೇ. 90ಕ್ಕಿಂತ ಹೆಚ್ಚು ನೀರಿನಂಶ ಹೊಂದಿರುವ ಕಲ್ಲಂಗಡಿ ಹಣ್ಣು ದೇಹವನ್ನು ತಂಪಾಗಿರಿಸುತ್ತದೆ. ಇದರಲ್ಲಿರುವ ನೈಸರ್ಗಿಕ ಸಕ್ಕರೆ ಮತ್ತು ವಿಟಮಿನ್ ಸಿ ಸುಸ್ತನ್ನು ಕಡಿಮೆ ಮಾಡಿ ಲವಲವಿಕೆಯಿಂದ ಇರುವಂತೆ ಮಾಡುತ್ತದೆ.
Energy Foods

ಮೊಸರು

ಮಜ್ಜಿಗೆಯು ದೇಹದ ಉಷ್ಣತೆಯನ್ನು ಕಡಿಮೆ ಮಾಡುವ ಅದ್ಭುತ ಪಾನೀಯ. ಒಂದು ಲೋಟ ಮಜ್ಜಿಗೆಗೆ ಸ್ವಲ್ಪ ಜೀರಿಗೆ ಪುಡಿ ಮತ್ತು ಉಪ್ಪು ಹಾಕಿ ಕುಡಿದರೆ ಜೀರ್ಣಕ್ರಿಯೆ ಸುಧಾರಿಸುವುದಲ್ಲದೆ, ದಿನವಿಡೀ ಎನರ್ಜಿ ಸಿಗುತ್ತದೆ.
Energy Foods

ಬಾಳೆಹಣ್ಣು

ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಮತ್ತು ನೈಸರ್ಗಿಕ ಕಾರ್ಬೋಹೈಡ್ರೇಟ್‌ಗಳು ಸಮೃದ್ಧವಾಗಿವೆ. ಬಿಸಿಲಿನಿಂದ ಸುಸ್ತಾಗಿ ಮನೆಗೆ ಬಂದಾಗ ಒಂದು ಬಾಳೆಹಣ್ಣು ಸೇವಿಸಿದರೆ ಕಳೆದುಹೋದ ಶಕ್ತಿ ತಕ್ಷಣ ಮರಳಿ ಬರುತ್ತದೆ.
Energy Foods

ಸೌತೆಕಾಯಿ

ಸೌತೆಕಾಯಿಯು ದೇಹವನ್ನು ಒಳಗಿನಿಂದ ತಂಪಾಗಿಸುತ್ತದೆ. ಇದರಲ್ಲಿರುವ ಮಿನರಲ್ಸ್ ಮತ್ತು ನೀರಿನಂಶವು ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಆಯಾಸವನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net