ಕೂದಲಿನ ಬೆಳವಣಿಗೆಗೆ ಸಹಾಯ ಮಾಡುವ ಎಣ್ಣೆಗಳು! Hair Care

ಕೂದಲಿನ ಆರೈಕೆ
ಕೂದಲಿನ ಆರೈಕೆ
Published on
Hair Care

ಕೂದಲಿನ ಆರೈಕೆ

ದಟ್ಟವಾದ, ಆರೋಗ್ಯಕರ ಮತ್ತು ಹೊಳೆಯುವ ಕೂದಲನ್ನು ಪಡೆಯಲು ನೈಸರ್ಗಿಕ ಎಣ್ಣೆಗಳ ಬಳಕೆ ಅತ್ಯಂತ ಸಹಕಾರಿ. ಕೂದಲಿನ ವಿವಿಧ ಸಮಸ್ಯೆಗಳನ್ನು ನಿವಾರಿಸಿ, ಬುಡದಿಂದಲೇ ಪೋಷಣೆ ನೀಡುವ ಅತ್ಯುತ್ತಮ ಎಣ್ಣೆಗಳು ಇಲ್ಲಿವೆ.
Hair Care

ತೆಂಗಿನ ಎಣ್ಣೆ

ಭಾರತೀಯ ಮನೆಗಳಲ್ಲಿ ಶತಮಾನಗಳಿಂದಲೂ ಬಳಕೆಯಲ್ಲಿರುವ ಇದು ಕೂದಲಿಗೆ ಅತ್ಯುತ್ತಮ ನೈಸರ್ಗಿಕ ಮಾಯಿಶ್ಚರೈಸರ್. ಇದರಲ್ಲಿರುವ ಲಾರಿಕ್ ಆಮ್ಲವು ಕೂದಲಿನ ಬೇರುಗಳ ಆಳಕ್ಕೆ ಇಳಿದು ಪೋಷಣೆ ನೀಡುತ್ತದೆ ಮತ್ತು ಪ್ರೋಟೀನ್ ನಷ್ಟವನ್ನು ತಡೆಯುತ್ತದೆ.
Hair Care

ಹರಳೆಣ್ಣೆ

ಇದು ಕೂದಲಿನ ಸಾಂದ್ರತೆಯನ್ನು ಹೆಚ್ಚಿಸಲು ರಾಮಬಾಣ. ಇದರಲ್ಲಿರುವ ರಿಸಿಡೋಲಿಕ್ ಆಮ್ಲ ಮತ್ತು ಒಮೆಗಾ-6 ಕೊಬ್ಬಿನಾಮ್ಲಗಳು ತಲೆಯ ರಕ್ತ ಪರಿಚಲನೆಯನ್ನು ಉತ್ತಮಗೊಳಿಸಿ, ಹೊಸ ಕೂದಲು ಬೆಳೆಯಲು ಮತ್ತು ಕೂದಲು ದಪ್ಪಗಾಗಲು ಸಹಾಯ ಮಾಡುತ್ತದೆ.
Hair Care

ಬಾದಾಮಿ ಎಣ್ಣೆ

ವಿಟಮಿನ್ ಇ, ಮೆಗ್ನೀಸಿಯಂ ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿರುವ ಬಾದಾಮಿ ಎಣ್ಣೆಯು ಒಣ ಹಾಗೂ ಹಾನಿಗೊಳಗಾದ ಕೂದಲನ್ನು ಸರಿಪಡಿಸುತ್ತದೆ. ಇದು ಕೂದಲಿಗೆ ನೈಸರ್ಗಿಕ ಹೊಳಪನ್ನು ನೀಡಿ, ರೇಷ್ಮೆಯಂತೆ ಮೃದುವಾಗಿಸುತ್ತದೆ.
Hair Care

ಆಲಿವ್ ಎಣ್ಣೆ

ಇದು ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಇ ಅನ್ನು ಹೊಂದಿದ್ದು, ಕೂದಲಿನ ಸ್ಥಿತಿಸ್ಥಾಪಕತ್ವವನ್ನು ಕಾಪಾಡುತ್ತದೆ. ಕವಲೊಡೆಯುವ ಕೂದಲು ಮತ್ತು ಕೂದಲು ಉದುರುವಿಕೆಯನ್ನು ನಿಯಂತ್ರಿಸಲು ಇದು ಸಹಕಾರಿ.
Hair Care

ಆಮ್ಲಾ ಎಣ್ಣೆ

ವಿಟಮಿನ್ ಸಿ ಯಿಂದ ಸಮೃದ್ಧವಾಗಿರುವ ನೆಲ್ಲಿಕಾಯಿ ಎಣ್ಣೆಯು ಕೂದಲಿನ ನೈಸರ್ಗಿಕ ಕಪ್ಪಗಿನ ಬಣ್ಣವನ್ನು ಕಾಪಾಡುತ್ತದೆ ಮತ್ತು ಅಕಾಲಿಕ ನರೆಗೂದಲನ್ನು ತಡೆಯುತ್ತದೆ. ಇದು ತಲೆಹೊಟ್ಟು ನಿವಾರಣೆಗೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net