ನವದಂಪತಿ ಅನಿರುದ್ಧ್-ಕಾವ್ಯಾ ಫೋಟೋಶೂಟ್ Aniruddh-Kavya

ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದ ಮಾಲೀಕಿ ಕಾವ್ಯಾ ಮಾರನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಗ್ರೀಸ್​ನಲ್ಲಿ ಅದ್ಧೂರಿಯಾಗಿ ಮದುವೆಯಾದ ಈ ಜೋಡಿ, ಈಗ ಚೆನ್ನೈನಲ್ಲಿ ನವೆಂಬರ್​ 21 ರಂದು ಆರತಕ್ಷತೆ ಮಾಡಿಕೊಳ್ಳಲು ಸಜ್ಜಾಗಿದ್ದಾರೆ. ಈದೀಗ ಆರತಕ್ಷತೆ ಪೂರ್ವದಲ್ಲಿ ಕಾವ್ಯಾ ಹಾಗೂ ಅನಿರುದ್ಧ್​​ ಫ್ಯಾಮಿಲಿ ಫೋಟೊಶೂಟ್​ ನಡೆಸಿದ್ದು, ಇದರಲ್ಲಿ ತಮಿಳುನಾಡಿನ ಮಾಜಿ ಸಿಎಂ ಎಂ.ಕೆ. ಸ್ಟಾಲಿನ್​, ತಮಿಳು ಚಿತ್ರರಂಗದ ದಿಗ್ಗಜ ನಟ ರಜನಿಕಾಂತ್, ಕಾವ್ಯಾ ತಂದೆ ಕಲಾನಿಥಿ ಮಾರನ್​ ಸೇರಿದಂತೆ ಹಲವರೊಂದಿಗಿನ ಫೋಟೊಗಳನ್ನು ಅನಿರುದ್ಧ್​ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ನವದಂಪತಿ ಅನಿರುದ್ಧ್-ಕಾವ್ಯಾ ಫೋಟೋಶೂಟ್ Aniruddh-Kavya