ಕೆಂಪು ಸೀರೆಯಲ್ಲಿ ನಜ್ರಿಯಾ ಮಿಂಚು ; 'ಅಂತೆ ಸುಂದರಾನಿಕಿ' ಎಂದ ಫ್ಯಾನ್ಸ್!
2013ರಲ್ಲಿ ಅಟ್ಲೀ ನಿರ್ದೇಶನದ 'ರಾಜ ರಾಣಿ' ಸಿನಿಮಾವು ಬ್ಲಾಕ್ ಬ್ಲಸ್ಟರ್ ಹಿಟ್ ನಂತರ.. ಕಾಲಿವುಡ್ನಿಂದ ದೂರವಿದ್ದ ನಟಿ ನಜ್ರಿಯಾ ನಜೀಮ್, 12 ವರ್ಷಗಳ ಬಳಿಕ ಸೂರ್ಯ ನಟನೆಯ 'ಸೀನ್' ಸಿನಿಮಾದ ಮೂಲಕ ಕಾಲಿವುಡ್ಗೆ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ 'ಸೀನ್' ಸಿನಿಮಾದ ಪ್ರಚಾರ ಭರ್ಜರಿಯಾಗಿ ನಡೆಯುತ್ತಿದ್ದು, ನವೆಂಬರ್.6ರಂದು ಥಿಯೇಟರ್ಗೆ ಲಗ್ಗೆ ಇಡಲು ಸಜ್ಜಾಗಿದೆ.
ಸಿನಿಮಾ ಪ್ರಚಾರಕ್ಕೆಂದು ತೊಟ್ಟಿದ್ದ ಕೆಂಪು ಬಣ್ಣದ ಸೀರೆಯಲ್ಲಿ ನಜ್ರಿಯಾ ಫೋಟೋಶೂಟ್ ಮಾಡಿಸಿಕೊಂಡು ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಫ್ಯಾನ್ಸ್ ಸುಂದರವಾಗಿ ಕಾಣಲು ಇಷ್ಟೇ ಸಾಕು ಎಂದು ಕೊಂಡಾಡುತ್ತಿದ್ದಾರೆ.