ಮನುಷ್ಯರ ಮುಖವನ್ನೇ ಹೋಲುವ 5 ವಿಚಿತ್ರ ಹೂವುಗಳು: ಈ ಫೋಟೋಗಳನ್ನು ನೋಡಿದರೆ ಅಚ್ಚರಿಪಡೋದು ಖಚಿತ!Rare Flowers

ಪ್ರಕೃತಿಯ ಕಲ್ಪನಾ ಶಕ್ತಿಗೆ ಕೊನೆಯೇ ಇಲ್ಲ ಕೆಲವು ಹೂವುಗಳನ್ನು ನೋಡಿದರೆ ಸಾಕು, ಇದು ನಿಜವಾಗಿಯೂ ಹೂವೇ ಅಥವಾ ಯಾರಾದರೂ ಕುಂಚ ಹಿಡಿದು ಬಿಡಿಸಿದ ಚಿತ್ರವೇ? ಇಂತಹ ಹೂವುಗಳು ಭೂಮಿಯ ಮೇಲೆ ನಿಜವಾಗಿಯೂ ಇವೆಯೇ? ಎಂಬ ಅನುಮಾನ ಮೂಡುತ್ತದೆ. ಪ್ರಾಣಿ-ಪಕ್ಷಿಗಳ ಮುಖದಿಂದ ಹಿಡಿದು ಮನುಷ್ಯರ ಆಕೃತಿಯನ್ನೇ ಪ್ರತಿಬಿಂಬಿಸುವ 5 ಅತ್ಯಂತ ವಿಚಿತ್ರ ಹಾಗೂ ಅದ್ಭುತ ಹೂವುಗಳ ಜಗತ್ತು ಇದೆ , ಇವುಗಳ ಫೋಟೋ ನೋಡಿದ್ರೆ ನೀವು ಖಂಡಿತ ಶಾಕ್ ಆಗ್ತೀರಾ!Rare Flowers
ಮನುಷ್ಯರ ಮುಖವನ್ನೇ ಹೋಲುವ 5 ವಿಚಿತ್ರ ಹೂವುಗಳು
ಮನುಷ್ಯರ ಮುಖವನ್ನೇ ಹೋಲುವ 5 ವಿಚಿತ್ರ ಹೂವುಗಳುWEB
Published on: 

ಮಂಕಿ ಫೇಸ್ ಆರ್ಕಿಡ್

ಮಂಕಿ ಫೇಸ್ ಆರ್ಕಿಡ್
ಮಂಕಿ ಫೇಸ್ ಆರ್ಕಿಡ್WEB

ಈ ಹೂವಿನ ಹೆಸರೇ ಹೇಳುವಂತೆ ಇದು ಕೋತಿಯ ಮುಖವನ್ನು ಹೋಲುತ್ತದೆ. ಹೂವಿನ ಮಧ್ಯಭಾಗದಲ್ಲಿರುವ ವಿನ್ಯಾಸ ಕಣ್ಣು, ಮೂಗು ಮತ್ತು ಬಾಯಿಯಂತೆ ಕಾಣುತ್ತದೆ. ದಕ್ಷಿಣ ಅಮೆರಿಕದ ಈಕ್ವೆಡಾರ್ ಮತ್ತು ಪೆರುವಿನ ಕಾಡು ಪ್ರದೇಶಗಳಲ್ಲಿ ಕಂಡುಬರುವ ಈ ಆರ್ಕಿಡ್ ತನ್ನ ವಿಚಿತ್ರ ರೂಪದಿಂದಲೇ ಪ್ರಸಿದ್ಧಿ ಪಡೆದಿದೆ.

ನೇಕೆಡ್ ಮ್ಯಾನ್ ಆರ್ಕಿಡ್

ನೇಕೆಡ್ ಮ್ಯಾನ್ ಆರ್ಕಿಡ್
ನೇಕೆಡ್ ಮ್ಯಾನ್ ಆರ್ಕಿಡ್WEB

ಈ ಹೂವನ್ನು ನೋಡಿದರೆ ಸಣ್ಣ ಮನುಷ್ಯರ ಆಕೃತಿಗಳು ಸಾಲಾಗಿ ನಿಂತಿರುವಂತೆ ಕಾಣುತ್ತವೆ. ಇದರ ದಳಗಳು ತಲೆ, ಕೈ ಮತ್ತು ಕಾಲುಗಳ ವಿನ್ಯಾಸವನ್ನು ಹೋಲುತ್ತವೆ. ಮೆಡಿಟರೇನಿಯನ್ ಪ್ರದೇಶಗಳಲ್ಲಿ ಕಂಡುಬರುವ ಈ ಹೂವು ಪ್ರಕೃತಿಯ ವಿಶಿಷ್ಟ ಸೃಷ್ಟಿಗಳಲ್ಲಿ ಒಂದಾಗಿದೆ.

ಡ್ಯಾನ್ಸಿಂಗ್ ಗರ್ಲ್ಸ್

ಡ್ಯಾನ್ಸಿಂಗ್ ಗರ್ಲ್ಸ್
ಡ್ಯಾನ್ಸಿಂಗ್ ಗರ್ಲ್ಸ್WEB

ಈ ಪುಟ್ಟ ಹೂವುಗಳು ನೃತ್ಯ ಮಾಡುತ್ತಿರುವ ಹುಡುಗಿಯರಂತೆ ಕಾಣುತ್ತವೆ. ಬಿಳಿ ಅಥವಾ ತಿಳಿ ಗುಲಾಬಿ ಬಣ್ಣದ ದಳಗಳು ಉಡುಪಿನಂತೆ ಹರಡಿಕೊಂಡಿದ್ದು, ಮಧ್ಯಭಾಗವು ಮಾನವ ಆಕೃತಿಯನ್ನು ನೆನಪಿಸುತ್ತದೆ. ನೋಡಲು ಪುಟ್ಟ ಗೊಂಬೆಗಳಂತೆ ಕಾಣುವ ಈ ಹೂವು ನೋಡುಗರ ಗಮನ ಸೆಳೆಯುತ್ತದೆ

ಏಂಜೆಲ್ ಆರ್ಕಿಡ್

ಏಂಜೆಲ್ ಆರ್ಕಿಡ್
ಏಂಜೆಲ್ ಆರ್ಕಿಡ್WEB

ಬಿಳಿ ಬಣ್ಣದ ಈ ಹೂವು ದೇವದೂತರ ಆಕೃತಿಯನ್ನು ಹೋಲುತ್ತದೆ. ಇದರ ದಳಗಳು ಎರಡು ರೆಕ್ಕೆಗಳಂತೆ ಹರಡಿಕೊಂಡಿದ್ದು, ಮಧ್ಯಭಾಗವು ಪುಟ್ಟ ಮಾನವ ಆಕೃತಿಯಂತೆ ಕಾಣುತ್ತದೆ. ಸೂಕ್ಷ್ಮ ವಿನ್ಯಾಸ ಹೊಂದಿರುವ ಈ ಹೂವು ಪ್ರಕೃತಿಯ ಕಲಾತ್ಮಕ ಸೃಷ್ಟಿಗೆ ಉತ್ತಮ ಉದಾಹರಣೆಯಾಗಿದೆ

ಸ್ವಾಡ್ಲ್ಡ್ ಬೇಬೀಸ್ ಆರ್ಕಿಡ್

ಸ್ವಾಡ್ಲ್ಡ್ ಬೇಬೀಸ್ ಆರ್ಕಿಡ್
ಸ್ವಾಡ್ಲ್ಡ್ ಬೇಬೀಸ್ ಆರ್ಕಿಡ್WEB

ಈ ಹೂವಿನ ಒಳಭಾಗವನ್ನು ಗಮನಿಸಿದರೆ ಬಟ್ಟೆಯಲ್ಲಿ ಸುತ್ತಿಟ್ಟಿರುವ ಪುಟ್ಟ ಮಗುವಿನಂತೆ ಕಾಣುತ್ತದೆ. ಇದರ ದಳಗಳು ಮಗುವನ್ನು ಸುತ್ತುವರಿದ ಬಟ್ಟೆಯಂತೆ ರೂಪುಗೊಂಡಿವೆ. ದಕ್ಷಿಣ ಅಮೆರಿಕದ ಆಂಡಿಸ್ ಪರ್ವತ ಪ್ರದೇಶಗಳಲ್ಲಿ ಕಂಡುಬರುವ ಈ ಆರ್ಕಿಡ್ ತನ್ನ ವಿಶಿಷ್ಟ ಆಕಾರದಿಂದ ಸಸ್ಯ ಪ್ರಿಯರನ್ನು ಆಕರ್ಷಿಸುತ್ತದೆ.