ಹಸಿರು ಸೀರೆಯಲ್ಲಿ ಅಭಿಮಾನಿಗಳ ಮನಸ್ಸು ಗೆದ್ದ ಮೃನಾಲ್: ಸೀತಾ ಮಹಾಲಕ್ಷ್ಮೀ ಫೋಟೋಗಳು ವೈರಲ್​! Mrunal Thakur

ಸೀತಾ ಮಹಾಲಕ್ಷ್ಮೀ ನಯಾ ಲುಕ್​
ಸೀತಾ ಮಹಾಲಕ್ಷ್ಮೀ ನಯಾ ಲುಕ್​
Published on
Mrunal Thakur

ಸೀತಾ ಮಹಾಲಕ್ಷ್ಮೀ ನಯಾ ಲುಕ್​

ಮೃನಾಲ್ ಠಾಕೂರ್... ಈ ಹೆಸರು ಕೇತ್ತಿದ್ದಂತೆಯೇ 'ಸೀತಾ ರಾಮಂ' ಸಿನಿಮಾ ನೆನಪಿಗೆ ಬರುತ್ತದೆ. ಈ ಸಿನಿಮಾ ಮೂಲಕ ಸೀತಾ ಮಹಾಲಕ್ಷ್ಮೀಯಾಗಿ ಸಾಂಪ್ರದಾಯಿಕ ಪಾತ್ರದಲ್ಲಿ ಎಲ್ಲರ ಮನಸ್ಸು ಗೆದ್ದಿರುವ ಮೃನಾಲ್, ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ.
Mrunal Thakur

ಹೊಸ ವದಂತಿ

ಸಿಸಿನಿಮಾದ ನಡುವೆ ಮೃನಾಲ್​ ಕುರಿತ ಡೇಟಿಂಗ್​ ವದಂತಿಗಳು ಆಗಾಗ ಹರಡುತ್ತಲೇ ಇರುತ್ತವೆ. ಈ ಹಿಂದೆ ನಟ ಧನುಷ್ ಜತೆ ಮೃನಾಲ್​ ಹೆಸರು ಕೇಳಿಬಂದಿತ್ತು. ಇದೀಗ​ ಟೀಮ್​ ಇಂಡಿಯಾ ಸ್ಟಾರ್​ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಜತೆ ಕೇಳಿ ಬರುತ್ತಿದೆ.
Mrunal Thakur

ಮಾರ್ಮಿಕ ಮಾತು

ಡೇಟಿಂಗ್​ ವದಂತಿ ಕೇಳಿಬರುತ್ತಿದ್ದಂತೆ ಅದನ್ನು ಮೃನಾಲ್ ಠಾಕೂರ್ ತಳ್ಳಿ ಹಾಕಿದ್ದಾರೆ. ಅಲ್ಲದೆ, ಸ್ಪಷ್ಟೀಕರಣ ನೀಡುವ ಬದಲು, ತಮಾಷೆಯಾಗಿ ಹಾಗೂ ಮಾರ್ಮಿಕವಾಗಿ ಬರೆದುಕೊಂಡಿದ್ದಾರೆ.
Mrunal Thakur

ವದಂತಿ ಅಂದ್ರೆ ಇಷ್ಟ

ಅವರು ಮಾತನಾಡುತ್ತಾರೆ, ನಾವು ನಗುತ್ತೇವೆ. ಈ ಎಲ್ಲ ವದಂತಿಗಳು ಕೇವಲ ಪ್ರಚಾರದ ಗಿಮಿಕ್​ಗಳಷ್ಟೇ. ನನಗೆ ಪ್ರಚಾರದ ವಿಷಯಗಳೆಂದರೆ ತುಂಬಾ ಇಷ್ಟ ಎನ್ನುವ ಮೂಲಕ ಮೃನಾಲ್ ವದಂತಿಗೆ ತೆರೆಎಳೆಯುವ ಪ್ರಯತ್ನ ಮಾಡಿದ್ದಾರೆ.​
Mrunal Thakur

ಸೀರೆಯಲ್ಲಿ ಕಂಗೊಳಿಸಿದ ಮೃನಾಲ್

ಇದರ ನಡುವೆ ಸೀತಾ ರಾಮಂ ಬೆಡಗಿ ಹೊಸ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಹಸಿರು ಬಣ್ಣದ ಸೀರೆ ಹಾಗೂ ಸ್ಲೀವ್​ಲೆಸ್​ ರವಿಕೆ ಧರಿಸಿ ಮೃನಾಲ್​ ಮುದ್ದಾಗಿ ಕಾಣುತ್ತಿದ್ದಾರೆ.
Mrunal Thakur

ಮುಂದಿನ ಸಿನಿಮಾಗಳು ಯಾವುವು?

ಇನ್ನೂ ಸಿನಿಮಾ ವಿಚಾರಕ್ಕೆ ಬರುವುದಾದರೆ, ಮೃನಾಲ್​ ಠಾಕೂರ್ ಅವರು ದೋ ದೀವಾನೆ ಸೆಹರ್ ಮೇ (2026), ಡಕಾಯಿತ್​​ (2026) ಹಾಗೂ ಸನ್ ಆಫ್ ಸರ್ದಾರ್ 2 (2025) ಸಿನಿಮಾಗಳಲ್ಲಿ ನಟಿಸಿದ್ದು, ಬಿಡುಗಡೆಗೆ ಸಜ್ಜಾಗುತ್ತಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net