ರಾತ್ರಿ ಪೂರ್ತಿ ನಿದ್ರಿಸಿದಾಗ ನಮ್ಮ ದೇಹ ನಿರ್ಜಲೀಕರಣಕ್ಕೆ ಒಳಗಾಗಿರುತ್ತದೆ. ಎದ್ದ ತಕ್ಷಣ ಒಂದು ಲೋಟ ಉಗುರುಬೆಚ್ಚಗಿನ ನೀರು ಕುಡಿಯುವುದರಿಂದ ಮೆಟಬಾಲಿಸಂ ಹೆಚ್ಚಾಗುತ್ತದೆ ಮತ್ತು ಮೆದುಳು ಚುರುಕಾಗುತ್ತದೆ.
ನೈಸರ್ಗಿಕ ಬೆಳಕನ್ನು ಪಡೆಯಿರಿ
ಎದ್ದ 30 ನಿಮಿಷಗಳ ಒಳಗೆ ಸೂರ್ಯನ ಬೆಳಕಿಗೆ ತೆರೆದುಕೊಳ್ಳುವುದು ಬಹಳ ಮುಖ್ಯ. ಇದು ನಮ್ಮ ದೇಹದ 'ಸಿರ್ಕಾಡಿಯನ್ ರಿದಮ್' ಅಥವಾ ಜೈವಿಕ ಗಡಿಯಾರವನ್ನು ಸರಿಪಡಿಸುತ್ತದೆ. ಇದರಿಂದ ಕಾರ್ಟಿಸೋಲ್ ಹಾರ್ಮೋನ್ ಬಿಡುಗಡೆಯಾಗಿ ನಮಗೆ ಎಚ್ಚರವಾದ ಅನುಭವ ನೀಡುತ್ತದೆ.
ಲಘು ವ್ಯಾಯಾಮ
ಕೇವಲ 10 ನಿಮಿಷಗಳ ನಡಿಗೆ ಅಥವಾ ಸ್ಟ್ರೆಚಿಂಗ್ ಮಾಡುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ. ಸ್ನಾಯುಗಳಿಗೆ ಆಮ್ಲಜನಕ ಪೂರೈಕೆಯಾದಾಗ ಆಲಸ್ಯ ದೂರವಾಗಿ ನೈಸರ್ಗಿಕವಾಗಿ ಶಕ್ತಿ ಬರುತ್ತದೆ.
ಫೋನ್ ಬಳಸಬೇಡಿ
ಎದ್ದ ಮೊದಲ ಒಂದು ಗಂಟೆ ಮೊಬೈಲ್ ನೋಡಬೇಡಿ. ನೋಟಿಫಿಕೇಶನ್‌ಗಳು ಮತ್ತು ನ್ಯೂಸ್‌ಗಳು ನಿಮ್ಮ ಮೆದುಳಿಗೆ ಅನಗತ್ಯ ಒತ್ತಡವನ್ನು ನೀಡುತ್ತವೆ.
ಅಧಿಕ ಪ್ರೊಟೀನ್ ಯುಕ್ತ ಉಪಹಾರ
ಸಕ್ಕರೆ ಅಂಶ ಹೆಚ್ಚಿರುವ ಪದಾರ್ಥಗಳಿಗಿಂತ ಮೊಟ್ಟೆ, ಮೊಳಕೆ ಕಾಳು ಅಥವಾ ಪ್ರೊಟೀನ್ ಇರುವ ಆಹಾರ ಸೇವಿಸಿ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿರಿಸಿ, ದಿನವಿಡೀ ಶಕ್ತಿ ನೀಡುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News