ಮೊಳಕೆ ಕಟ್ಟಿದ ಕಾಳು ಅಥವಾ ಮೊಳಕೆ ಕಾಳುಗಳನ್ನು ಸೇವಿಸುವುದರಿಂದ ನಮ್ಮ ದೇಹಕ್ಕೆ ಆಗುವ ಲಾಭಗಳು ಒಂದೆರೆಡಲ್ಲ. ಮುಖದ ಕಾಂತಿ, ಶುಗರ್ ಕಂಟ್ರೋಲ್ ಸೇರಿ ಹಲವು ಪ್ರಯೋಜನಗಳಿವೆ.
50ರಲ್ಲೂ 30ರಂತೆ ಕಾಣಬಹುದು
ದಿನನಿತ್ಯ ಮೊಳಕೆ ಕಾಳು ಸೇವನೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ವಯಸ್ಸಾಗುವುದನ್ನು ತಡೆಗಟ್ಟುತ್ತದೆ. ಇವು ಆ್ಯಂಟಿಆಕ್ಸಿಡೆಂಟ್‌ಗಳು ಮತ್ತು ವಿಟಮಿನ್ ಸಿ ಅಂಶದಲ್ಲಿ ಸಮೃದ್ಧವಾಗಿದೆ. ಇದು ಫ್ರೀ ರಾಡಿಕಲ್‌ಗಳ ವಿರುದ್ಧ ಹೋರಾಡುತ್ತದೆ ಮತ್ತು ರೋಗನಿರೋಧಕ ಕೋಶಗಳನ್ನು ಇನ್ನಷ್ಟು ಬಲಪಡಿಸುತ್ತದೆ.
ಜೀರ್ಣಕ್ರಿಯೆಗೆ ಸಹಕಾರಿ
ಫೈಬರ್ ಮತ್ತು ಜೀರ್ಣಕಾರಿ ಕಿಣ್ವಗಳಲ್ಲಿ ಅಧಿಕವಾಗಿದ್ದು, ಕರುಳಿನ ಆರೋಗ್ಯವನ್ನು ಉತ್ತೇಜಿಸುತ್ತದೆ ಮತ್ತು ಮಲಬದ್ಧತೆಯನ್ನು ತಡೆಗಟ್ಟುತ್ತದೆ
ಹೃದಯದ ಆರೋಗ್ಯಕ್ಕೆ ಉತ್ತಮ
ಇದರಲ್ಲಿರುವ ಫೈಬರ್, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಅಂಶಗಳು, ಕೆಟ್ಟ ಕೊಲೆಸ್ಟ್ರಾಲ್ (LDL) ಅನ್ನು ಕಡಿತಗೊಳಿಸುವಲ್ಲಿ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಸಹಕಾರಿ.
ತೂಕ ಸಮೋತಲನಕ್ಕೆ ಸಹಕಾರಿ
ಕಡಿಮೆ ಕ್ಯಾಲೋರಿಗಳು, ಫೈಬರ್ ಮತ್ತು ಪ್ರೋಟೀನ್‌ನಲ್ಲಿ ಅಧಿಕವಾಗಿರುವ ಮೊಳಕೆ ಕಾಳು, ನಿಮಗೆ ಹೊಟ್ಟೆ ತುಂಬಿತು ಎಂಬಂತೆ ಮಾಡುತ್ತದೆ. ಇದು ದೇಹದ ತೂಕವನ್ನು ಬ್ಯಾಲೆನ್ಸ್ ಮಾಡಲು ಉತ್ತಮ ಆಹಾರ.
ನಿಶಕ್ತಿಯಿಂದ ಬಳಲುವವರಿಗೆ ಬೆಸ್ಟ್
ಮೊಳಕೆ ಕಾಳುಗಳಲ್ಲಿ ಪ್ರೋಟೀನ್, ಫೈಬರ್ ಮತ್ತು ಪೋಷಕಾಂಶಗಳ ಉತ್ತಮ ಮಿಶ್ರಣವು ನಿಶಕ್ತಿಯಿಂದ ಬಳಲುವವರಿಗೆ ಶಕ್ತಿಯನ್ನು ತುಂಬುತ್ತದೆ.
ಚರ್ಮ ಮತ್ತು ಕೂದಲಿಗೆ ಒಳಿತು
ಆ್ಯಂಟಿಆಕ್ಸಿಡೆಂಟ್‌ಗಳು, ವಿಟಮಿನ್ ಸಿ ಮತ್ತು ಇ ಚರ್ಮದ ಆರೋಗ್ಯವನ್ನು ವೃದ್ಧಿಸುತ್ತದೆ. ಇನ್ನು ಕಬ್ಬಿಣಾಂಶ ಮತ್ತು ವಿಟಮಿನ್ ಎ ಕೂದಲಿನ ಬೆಳವಣಿಗೆಗೆ ಸಹಕಾರಿಯಾಗಿದೆ.