ತೂಕ ಹೆಚ್ಚಿಸಿಕೊಳ್ಳಲು ಇಂದಿನಿಂದಲೇ ಆಹಾರದಲ್ಲಿ ಈ ಬದಲಾವಣೆ ಮಾಡಿಕೊಳ್ಳಿ!

ತೂಕ ಹೆಚ್ಚಿಸಿಕೊಳ್ಳಿ
ತೂಕ ಹೆಚ್ಚಿಸಿಕೊಳ್ಳಿ
Published on
Weight Gain

ತೂಕ ಹೆಚ್ಚಿಸಿಕೊಳ್ಳಿ

ಆರೋಗ್ಯಕರವಾಗಿ ಮತ್ತು ನೈಸರ್ಗಿಕವಾಗಿ ತೂಕ ಹೆಚ್ಚಿಸಿಕೊಳ್ಳಲು ಪೋಷಕಾಂಶ ಹಾಗೂ ಕ್ಯಾಲೊರಿ ಭರಿತ ಆಹಾರಗಳನ್ನು ಸೇವಿಸುವುದು ಅತ್ಯಗತ್ಯ. ನಿಮ್ಮ ತೂಕವನ್ನು ಹೆಚ್ಚಿಸಲು ಇಂದಿನಿಂದಲೇ ಈ ಆಹಾರಗಳನ್ನು ಅಳವಡಿಸಿಕೊಳ್ಳಿ.
Weight Gain

ಬಾಳೆಹಣ್ಣು ಮತ್ತು ಹಾಲು

ಬಾಳೆಹಣ್ಣಿನಲ್ಲಿ ಕಾರ್ಬೋಹೈಡ್ರೇಟ್ಸ್ ಮತ್ತು ಕ್ಯಾಲೊರಿಗಳು ಸಮೃದ್ಧವಾಗಿವೆ. ಪ್ರತಿದಿನ 2 ಬಾಳೆಹಣ್ಣುಗಳನ್ನು ಪೂರ್ಣ ಕೆನೆ ಭರಿತ ಹಾಲಿನೊಂದಿಗೆ ಅಥವಾ ಮಿಲ್ಕ್‌ಶೇಕ್ ರೂಪದಲ್ಲಿ ಸೇವಿಸುವುದರಿಂದ ದೇಹಕ್ಕೆ ತಕ್ಷಣದ ಶಕ್ತಿ ಸಿಗುತ್ತದೆ.
Weight Gain

ಒಣ ಹಣ್ಣುಗಳು ಮತ್ತು ಬೀಜಗಳು

ಬಾದಾಮಿ, ಗೋಡಂಬಿ, ಒಣದ್ರಾಕ್ಷಿ ಮತ್ತು ವಾಲ್‌ನಟ್ಸ್‌ಗಳಲ್ಲಿ ಆರೋಗ್ಯಕರ ಕೊಬ್ಬು ಹಾಗೂ ಪ್ರೊಟೀನ್ ಅಧಿಕವಾಗಿರುತ್ತದೆ. ಪ್ರತಿದಿನ ಒಂದು ಹಿಡಿಯಷ್ಟು ಒಣಹಣ್ಣುಗಳನ್ನು ಸ್ನ್ಯಾಕ್ಸ್ ರೂಪದಲ್ಲಿ ಅಥವಾ ರಾತ್ರಿ ನೆನೆಸಿಟ್ಟು ಬೆಳಗ್ಗೆ ಸೇವಿಸುವುದು ಉತ್ತಮ.
Weight Gain

ಶೇಂಗಾ ಬೀಜ ಮತ್ತು ಪೀನಟ್ ಬಟರ್

ಶೇಂಗಾ ಪ್ರೊಟೀನ್‌ನ ಅತ್ಯುತ್ತಮ ಮೂಲವಾಗಿದ್ದು, ಸ್ನಾಯುಗಳ ಬೆಳವಣಿಗೆಗೆ ಸಹಕಾರಿಯಾಗಿದೆ. ದಿನವೂ ಹುರಿದ ಶೇಂಗಾ ತಿನ್ನುವುದರಿಂದ ಅಥವಾ ಬ್ರೆಡ್ ಜೊತೆ ಪೀನಟ್ ಬಟರ್ ಬಳಸಿ ತಿನ್ನುವುದರಿಂದ ದೇಹಕ್ಕೆ ಉತ್ತಮ ಕ್ಯಾಲೊರಿ ದೊರೆಯುತ್ತದೆ.
Weight Gain

ಆಲೂಗಡ್ಡೆ ಮತ್ತು ಗೆಣಸು

ಇವುಗಳಲ್ಲಿ ಪಿಷ್ಟ ಮತ್ತು ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳು ಹೆಚ್ಚಾಗಿರುತ್ತವೆ. ಇವುಗಳನ್ನು ಬೇಯಿಸಿ ಊಟದ ಜೊತೆ ಸೇವಿಸುವುದರಿಂದ ದೇಹದಲ್ಲಿ ಗ್ಲೈಕೋಜನ್ ಸಂಗ್ರಹ ಹೆಚ್ಚಿ, ನೈಸರ್ಗಿಕವಾಗಿ ತೂಕ ಹೆಚ್ಚುತ್ತದೆ.
Weight Gain

ತುಪ್ಪ ಮತ್ತು ಬೆಣ್ಣೆ

ಸಾಂಪ್ರದಾಯಿಕವಾಗಿ ತೂಕ ಹೆಚ್ಚಿಸಲು ತುಪ್ಪ ರಾಮಬಾಣ. ಬಿಸಿ ಅನ್ನ, ಚಪಾತಿ ಅಥವಾ ದಾಲ್‌ಗೆ ಒಂದು ಚಮಚ ಶುದ್ಧ ಹಸುವಿನ ತುಪ್ಪವನ್ನು ಸೇರಿಸಿ ಉಣ್ಣುವುದರಿಂದ ಕ್ಯಾಲೊರಿ ಪ್ರಮಾಣ ಸುಲಭವಾಗಿ ಹೆಚ್ಚುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net