ಮಗುವಿನೊಂದಿಗೆ ದೂರದ ಪ್ರಯಾಣ ಮಾಡುವುದು ಸ್ವಲ್ಪ ಸವಾಲಿನ ಕೆಲಸವಾದರೂ, ಸರಿಯಾದ ಮುನ್ನೆಚ್ಚರಿಕೆ ಮತ್ತು ಸಿದ್ಧತೆಗಳಿದ್ದರೆ ಅದನ್ನು ಸುಲಭ ಮತ್ತು ಆನಂದದಾಯಕವಾಗಿಸಬಹುದು.
ಅಗತ್ಯ ವಸ್ತುಗಳ ಬ್ಯಾಗ್ ಸಿದ್ಧವಿರಲಿ
ಮಗುವಿಗೆ ಬೇಕಾದ ಎಲ್ಲಾ ಅಗತ್ಯ ವಸ್ತುಗಳನ್ನು ಒಂದು ಪ್ರತ್ಯೇಕ ಬ್ಯಾಗ್‌ನಲ್ಲಿ ಇರಿಸಿ. ಅದರಲ್ಲಿ ಹೆಚ್ಚುವರಿ ಡೈಪರ್‌ಗಳು, ವೈಪ್ಸ್, ಎರಡು ಅಥವಾ ಮೂರು ಜೊತೆ ಮೃದುವಾದ ಬಟ್ಟೆಗಳನ್ನು ತೆಗೆದುಕೊಳ್ಳಿ.
ಮಗುವಿನ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡಿ
ಮಗುವಿಗೆ ಸಾಕಷ್ಟು ಹಾಲು, ಹಣ್ಣು, ಬಿಸ್ಕೆಟ್, ಹೋಮ್ ಮೇಡ್ ಆಹಾರ ತೆಗೆದುಕೊಳ್ಳಿ. ಪ್ರಯಾಣದಲ್ಲಿ ನೀರು ಹೆಚ್ಚು ಕುಡಿಸಿ. ಬಾಟಲ್, ಸಿಪ್ಪಿ, ಫೀಡಿಂಗ್ ಗಿಯರ್ ಸ್ವಚ್ಛವಾಗಿರಿಸಿ.
ಸುರಕ್ಷತೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ
ಕಾರಿನಲ್ಲಿ ಸೀಟ್ ಬೆಲ್ಟ್ ಬಳಸಿ. ವಿಮಾನ, ರೈಲುನಲ್ಲಿ ಸೀಟ್ ಬೆಲ್ಟ್ ಹಾಕಿಸಿ. ಮಗುವನ್ನು ಎಂದೂ ಒಬ್ಬಂಟಿಯಾಗಿ ಬಿಡಬೇಡಿ. ಗುರುತಿನ ಟ್ಯಾಗ್ ಹಾಕಿರಿ.
ಪ್ರಥಮ ಚಿಕಿತ್ಸಾ ಪೆಟ್ಟಿಗೆ
ಪ್ರಯಾಣದ ಸಮಯದಲ್ಲಿ ಮಗುವಿನ ಆರೋಗ್ಯದಲ್ಲಿ ಏರುಪೇರಾಗಬಹುದು. ಹಾಗಾಗಿ ವೈದ್ಯರ ಸಲಹೆಯಂತೆ ಜ್ವರ, ಶೀತ ಅಥವಾ ಹೊಟ್ಟೆನೋವಿಗೆ ಸಿರಪ್‌ಗಳು, ವಾಂತಿ ನಿರೋಧಕ ಔಷಧಿಗಳನ್ನು ಜೊತೆಗೆ ಇಟ್ಟುಕೊಂಡಿರಿ.
ಹವಾಮಾನಕ್ಕೆ ತಕ್ಕಂತೆ ಬಟ್ಟೆ
ಪ್ರಯಾಣ ಮಾಡುವ ಸ್ಥಳದ ಹವಾಮಾನ ಹೇಗಿದೆ ಎಂದು ತಿಳಿದುಕೊಳ್ಳಿ. ಎಸಿ ಇರುವ ವಾಹನ ಅಥವಾ ವಿಮಾನವಾದರೆ ಮಗುವಿಗೆ ಸ್ವಲ್ಪ ಬೆಚ್ಚಗಿನ ಬಟ್ಟೆ, ಸಾಕ್ಸ್ ಮತ್ತು ಟೋಪಿ ಹಾಕಿರಿ. ಬಿಸಿಲಿದ್ದರೆ, ಕಾಟನ್ ಬಟ್ಟೆಗಳನ್ನು ಬಳಸಿರಿ.