ಬ್ಯಾಕ್​ ಲೆಸ್​ ಅವತಾರದಲ್ಲಿ ಕೃತಿ: ಗೂಗ್ಲಿ ಬೆಡಗಿಯ ಮೈಮಾಟಕ್ಕೆ ಮರುಳಾದ ಫ್ಯಾನ್ಸ್! Kriti Kharbanda

ಕೃತಿ ಕನ್ನಡಿಗರಿಗೂ ಪರಿಚಯ
ಕೃತಿ ಕನ್ನಡಿಗರಿಗೂ ಪರಿಚಯ
Published on
Kriti Kharbanda

ಕೃತಿ ಕನ್ನಡಿಗರಿಗೂ ಪರಿಚಯ

ಕೃತಿ ಕರಬಂಧ ಬಗ್ಗೆ ಕನ್ನಡಿಗರಿಗೆ ವಿಶೇಷವಾಗಿ ಪರಿಚಯಿಸುವ ಅಗತ್ಯವಿಲ್ಲ. ದಿವಂಗತ ಚಿರಂಜೀವಿ ಸರ್ಜಾ, ನಟ ಯಶ್​, ಉಪೇಂದ್ರ, ಲವ್ಲಿ ಸ್ಟಾರ್ ಪ್ರೇಮ್ ಹಾಗೂ ದುನಿಯಾ ವಿಜಯ್​ ಸೇರಿದಂತೆ ಸ್ಟಾರ್​ ಹೀರೋಗಳ ಜತೆ ನಟಿಸಿದ್ದಾರೆ.
Kriti Kharbanda

ಗ್ಲಾಮರ್​ನಿಂದ ಮೋಡಿ

ಕೃತಿ ತಮ್ಮ ಗ್ಲಾಮರ್‌ನಿಂದಲೇ ಪ್ರೇಕ್ಷಕರನ್ನು ಮೆಚ್ಚಿಸಿದರು. ಗ್ಲಾಮರ್​ ಮಾತ್ರವಲ್ಲದೆ, ನಟನೆಯಿಂದಲೂ ಮೋಡಿ ಮಾಡಿದರು. ಗೂಗ್ಲಿ ಚಿತ್ರದಲ್ಲಿ ಅವರ ನಟನೆ ಎಲ್ಲರ ಗಮನ ಸೆಳೆಯಿತು.
Kriti Kharbanda

ಅವಕಾಶಗಳ ಕೊರತೆ

ಸ್ಯಾಂಡಲ್​ವುಡ್​ನಲ್ಲಿ ಅವಕಾಶಗಳ ಕೊರತೆಯಿಂದಾಗಿ, ಕೃತಿ ಅವರು ಬಾಲಿವುಡ್‌ಗೆ ಜಂಪ್​ ಆದರು. ಬಾಲಿವುಡ್‌ನಲ್ಲಿ ಸರಣಿ ಚಿತ್ರಗಳಲ್ಲಿ ನಟಿಸಿದರು. ಆದರೆ, ಯಾವುದು ನಿರೀಕ್ಷಿತ ಯಶಸ್ಸು ಗಳಿಸಲಿಲ್ಲ.
Kriti Kharbanda

ಕಳೆದ ವರ್ಷ ಮದುವೆ

ಕಳೆದ ವರ್ಷ ನಟ ಪುಲ್ಕಿತ್ ಸಾಮ್ರಾಟ್ ಅವರನ್ನು ಮದುವೆಯಾದರು. ಇದು ಲವ್​ ಮ್ಯಾರೇಜ್​. ಇದಾದ ನಂತರ, ಕೃತಿ ಅವರು ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಳ್ಳಲಿಲ್ಲ. ಇದೀಗ ಕುಟುಂಬ ಜೀವನದಲ್ಲಿ ಕೃತಿ ನಿರತರಾಗಿದ್ದಾರೆ.
Kriti Kharbanda

ಹಾಟ್​ ಫೋಟೋ

ಇನ್ನು ಸಿನಿಮಾಗಳ ಹೊರತಾಗಿ, ಕೃತಿ ಅವರು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುತ್ತಾರೆ. ಹಾಗಾಗ ಹಾಟ್​ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇದೀಗ ತಮ್ಮ ಇತ್ತೀಚಿನ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಪಡ್ಡೆ ಹುಡುಗರ ಮೈ ಬಿಸಿಯೇರಿಸಿದ್ದಾರೆ.
Kriti Kharbanda

ಬ್ಯಾಕ್​ ಲೆಸ್​ ಕೃತಿ

ಇತ್ತೀಚೆಗೆ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಬೋಲ್ಡ್​ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಚಿನ್ನದ ಬಣ್ಣದ ಉದ್ದನೆಯ ಉಡುಪಿನಲ್ಲಿ ಬ್ಯಾಕ್​ ಲೆಸ್​ ಆಗಿ ಕಾಣಿಸಿಕೊಂಡಿದ್ದಾರೆ. ಮದುವೆಯಾದರೂ ಇನ್ನೂ ತಮ್ಮ ಫಿಟ್​ನೆಸ್​ ಕಾಯ್ದುಕೊಂಡಿದ್ದು, ಕೃತಿಯ ಮೈಮಾಟಕ್ಕೆ ಫ್ಯಾನ್ಸ್​ ಫಿದಾ ಆಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net