ಬ್ಯಾಕ್‌ಲೆಸ್ ಬ್ಲೌಸ್​ ತೊಟ್ಟು ಬೋಲ್ಡ್​ ಆಗಿ ಬಂದ ಸೌತ್​ ಬ್ಯೂಟಿ: ಕೀರ್ತಿ ಲುಕ್​ಗೆ ಫ್ಯಾನ್ಸ್​ ಫಿದಾ! Keerthy Suresh

ಕೀರ್ತಿ ಸುರೇಶ್​ ಪರಿಚಯ ಬೇಕಿಲ್ಲ
ಕೀರ್ತಿ ಸುರೇಶ್​ ಪರಿಚಯ ಬೇಕಿಲ್ಲ
Published on
Keerthy Suresh

ಕೀರ್ತಿ ಸುರೇಶ್​ ಪರಿಚಯ ಬೇಕಿಲ್ಲ

ನಟಿ ಕೀರ್ತಿ ಸುರೇಶ್ ತಮಿಳು ಚಿತ್ರರಂಗದ ಸ್ಟಾರ್​ ನಟಿಯರಲ್ಲಿ ಒಬ್ಬರು. ತೆಲುಗು ಮತ್ತು ಹಿಂದಿ ಭಾಷೆಯಲ್ಲೂ ನಟಿಸಿದ್ದಾರೆ. ವಿಜಯ್​, ಸೂರ್ಯ, ವಿಕ್ರಮ್​, ಶಿವಕಾರ್ತಿಕೇಯನ್​,​ ನಾನಿ, ಮಹೇಶ್​ ಬಾಬು ಸೇರಿದಂತೆ ಸ್ಟಾರ್​ ನಟರ ಜತೆ ತೆರೆ ಹಂಚಿಕೊಂಡಿದ್ದಾರೆ.
Keerthy Suresh

ಕನ್ನಡ ಪ್ರೇಕ್ಷಕರು ಫಿದಾ

ಕನ್ನಡದಲ್ಲಿ ಒಂದೇ ಒಂದು ಸಿನಿಮಾದಲ್ಲಿ ನಟಿಸದಿದ್ದರೂ ಪ್ಯಾನ್​ ಇಂಡಿಯಾ ಪರಿಕಲ್ಪನೆ ಬಳಿಕ ಕೀರ್ತಿ ಸುರೇಶ್​ ನಟನೆಯ ಡಬ್ಬಿಂಗ್​ ಚಿತ್ರಗಳೂ ಕನ್ನಡದಲ್ಲೂ ಸದ್ದು ಮಾಡಿದ್ದು, ಆಕೆಯ ನಟನೆ ಮತ್ತು ಸೌಂದರ್ಯಕ್ಕೆ ಕನ್ನಡ ಪ್ರೇಕ್ಷಕರು ಸಹ ಫಿದಾ ಆಗಿದ್ದಾರೆ.
Keerthy Suresh

ಸಖತ್​ ಬೋಲ್ಡ್​

ತಮ್ಮ ವೃತ್ತಿಜೀವನದ ಆರಂಭದಲ್ಲಿ ಡಿಗ್ಲಾಮರಸ್​ ಆಗಿ ಕಾಣಿಸಿಕೊಂಡಿದ್ದ ಈ ಸುಂದರಿ, ಬಾಲಿವುಡ್​ಗೆ ಕಾಲಿಡುತ್ತಿದ್ದಂತೆ ಸಂಪೂರ್ಣ ಬದಲಾದರು. ವರುಣ್​ ಧವನ್​ ನಟನೆಯ ಬಾಬಿ ಜಾನ್ ಚಿತ್ರದಲ್ಲಿ ಸಖತ್​ ಬೋಲ್ಡ್​ ಆಗಿ ಕಾಣಿಸಿಕೊಳ್ಳುವ ಮೂಲಕ ತನ್ನ ಗ್ಲಾಮರ್ ಗಡಿಗಳನ್ನು ಅಳಿಸಿಹಾಕಿದರು.
Keerthy Suresh

ಮದುವೆ ಮತ್ತು ವೃತ್ತಿ ಜೀವನ

ಇದರ ನಡುವೆ ತಮ್ಮ ಬಹುಕಾಲದ ಗೆಳೆಯ ಆಂಟೋನಿ ಥಟ್ಟಿಲ್​ ಅವರನ್ನು ಮದುವೆಯಾಗಿಯೂ ಕೀರ್ತಿ ಸುದ್ದಿಯಾದರು. ಸದ್ಯ ದಾಂಪತ್ಯ ಜೀವನದ ಜೊತೆಗೆ ವೃತ್ತಿ ಜೀವನವನ್ನೂ ಕೀರ್ತಿ ನಡೆಸುತ್ತಿದ್ದಾರೆ.
Keerthy Suresh

ಸಾಂಪ್ರದಾಯಿಕ ಉಡುಗೆ

ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯರಾಗಿರುವ ಕೀರ್ತಿ ಸುರೇಶ್​ ಆಗಾಗ ತಮ್ಮ ಬೋಲ್ಡ್​ ಫೋಟೋಗಳನ್ನು ಹರಿಬಿಡುವ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಸಾಂಪ್ರದಾಯಿಕ ಉಡುಗೆಯಲ್ಲಿ ಕ್ಯಾಮೆರಾಗೆ ಪೋಸ್​ ನೀಡಿರುವ ಕೀರ್ತಿ, ತಮ್ಮ ಇನ್​ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
Keerthy Suresh

ಬ್ಯಾಕ್‌ಲೆಸ್ ಬ್ಲೌಸ್ ಬ್ಯೂಟಿ

ಬ್ಯಾಕ್‌ಲೆಸ್ ಬ್ಲೌಸ್ ಹಾಗೂ ಹಳದಿ ಬಣ್ಣದ ಲಾಂಗ್​ ಸ್ಕರ್ಟ್​ನೊಂದಿಗೆ ಮ್ಯಾಚಿಂಗ್​ ದುಪಟ್ಟಾ ಹಾಕಿಕೊಂಡು ಕ್ಯಾಮೆರಾಗೆ ಪೋಸ್​ ನೀಡಿದ್ದಾರೆ. ಲೆಹೆಂಗಾ ಮತ್ತು ಶೂಗಳು ಹಾಗೂ ನನ್ನದೇ ಆದ ಅನುಭವ ಎಂದು ಬರೆದುಕೊಂಡಿದ್ದಾರೆ. ವಿವಿಧ ಭಂಗಿಯಲ್ಲಿ ಕ್ಯಾಮೆರಾ ಕಣ್ಣಿಗೆ ಸೆರೆಸಿಕ್ಕಿರುವ ಸೌತ್​ ಬ್ಯೂಟಿಯ ಹಾಟ್​ ಅವತಾರ ಕಂಡು ಅಭಿಮಾನಿಗಳು ಕಣ್ಣರಳಿಸಿದ್ದಾರೆ.
Keerthy Suresh

ಅಭಿಮಾನಿಗಳು ಫಿದಾ

ನಿನ್ನೆಯಷ್ಟೇ ಇನ್​​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿರುವ ಈ ಫೋಟೋಗಳಿಗೆ ಈವರೆಗೆ 2 ಲಕ್ಷಕ್ಕೂ ಅಧಿಕ ಲೈಕ್​​ಗಳು ಬಂದಿವೆ. ಕೀರ್ತಿಯ ಸೌಂದರ್ಯಕ್ಕೆ ಮಾರು ಹೋಗಿರುವ ಅಭಿಮಾನಿಗಳು ತರಹೇವಾರಿ ಕಾಮೆಂಟ್​ಗಳನ್ನು ಹರಿಬಿಡುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net