
ಉತ್ತಮ ನಿದ್ರೆ, ಮನಸ್ಸಿನ ಶಾಂತಿಗೆ ನಾವು ಮಲಗುವ ಕೋಣೆಯಲ್ಲಿರುವ ವಸ್ತುಗಳು ಕಾರಣವಾಗುತ್ತದೆ. ಕೆಲವರು ನಡುರಾತ್ರಿ ಮೂರು ಗಂಟೆಯಾದರೂ ನಿದ್ದೆ ಬರೋದಿಲ್ಲ ಎಂದು ಇಡೀ ರಾತ್ರಿ ಫೋನ್ ನೋಡುತ್ತಾ ಮುಂಜಾನೆ ನಿದ್ದೆ ಮಾಡುತ್ತಾರೆ. ಆದರೆ, ವಾಸ್ತು ಪ್ರಕಾರ ನಿಮ್ಮ ದಿಂಬಿನ ಕೆಳಗೆ ಕೆಲವು ವಸ್ತುಗಳನ್ನಿಟ್ಟುಕೊಂಡು ಮಲಗಿದರೆ ನಿಮಗೆ ಶಾಂತಿ, ನೆಮ್ಮದಿ, ಕುಂಭಕರ್ಣನಂತ ನಿದ್ದೆ ಬರೋದಂತು ಗ್ಯಾರಂಟಿ.
ನಿದ್ರಾ ಹೀನತೆಯಿಂದಾಗಿ ಕಣ್ಣಿನ ಸುತ್ತ ಬ್ಲಾಕ್ ಹೆಡ್ಸ್ ಕಾಣಿಸಿಕೊಂಡು ಮುಖದ ಅಂದ ಹಾಳು ಮಾಡಿಕೊಳ್ಳುವ ಮುನ್ನ..ನಿಮ್ಮ ದಿಂಬಿನ ಕೆಳಗೆ ಐದರಿಂದ ಆರು ಲವಂಗ ಇಡಿ. ಆದರೆ ನೆನಪಿಡಿ ಮಾರನೇ ದಿನ ಅದನ್ನು ತೊಳೆದು ಇಡಬೇಕು. ಇದು ನಿಮ್ಮ ಸುತ್ತಲಿರುವ ನಕರಾತ್ಮಕತೆಯನ್ನು ಎಳೆದುಕೊಳ್ಳಲು ಸಹಾಯ ಮಾಡುತ್ತದೆ.
ಹಿಂದೂ ಧರ್ಮದಲ್ಲಿ ನವಿಲು ಹಾಗೂ ಅದರ ಗರಿಗೆ ಹೆಚ್ಚಿನ ಸ್ಥಾನವಿದೆ. ಇದನ್ನು ಪ್ರೀತಿ ಹಾಗೂ ಸಂತೋಷ ಆಕರ್ಷಣೆಗೆ ಬಳಕೆ ಮಾಡಲಾಗುತ್ತದೆ. ದಿಂಬಿನ ಕೆಳಗೆ ಗರಿ ಇಡುವುದರಿಂದ ದುಷ್ಟ ಶಕ್ತಿಗಳನ್ನು ನಿಮ್ಮ ಹತ್ತಿರ ಸುಳಿಯದಂತೆ ತಡೆಯುತ್ತದೆ. ನಿಮ್ಮ ಜೀವನದಲ್ಲಿ ಸಂಪತ್ತು ಮತ್ತು ಅದೃಷ್ಟ ವೃದ್ಧಿಗೆ ಇದು ಸಹಾಯ ಮಾಡುತ್ತದೆ.
ಪಲಾವ ಎಲೆ ಅಥವಾ ಬೇ ಲೀಫ್ ನಾವು ಸಾಮಾನ್ಯವಾಗಿ ಅಡುಗೆಗೆ ಹೆಚ್ಚು ಬಳಕೆ ಮಾಡುತ್ತೇವೆ. ಇದು ರಕ್ಷಣೆ ಮತ್ತು ಆರ್ಥಿಕ ಸಮೃದ್ಧಿಯ ಸಂಕೇತ. ಮನೆಯಲ್ಲಿರುವ ನಕರಾತ್ಮಕತೆಯನ್ನು ದೂರ ಮಾಡಿ ಸಕರಾತ್ಮಕತೆ ಹರಡುವುದು ಅಥವಾ ಆಕರ್ಷಿಸುತ್ತದೆ. ಹೀಗಾಗಿ ಇದನ್ನು ನಿಮ್ಮ ದಿಂಬಿನ ಕೆಳಗಿಟ್ಟು ಸುಖ ನಿದ್ರೆಗೆ ಜಾರಿ.
ಚಕ್ಕೆಯು ಸಮೃದ್ಧಿ ಮತ್ತು ಅದೃಷ್ಟದ ಸಂಕೇತ. ಮನೆಯಲ್ಲಿ ಆರ್ಥಿಕ ನಷ್ಟ ಕಂಡಾಗ, ಸಮೃದ್ಧಿ ಕುಂಠಿತಗೊಂಡಾಗ ಇದನ್ನು ಬಳಕೆ ಮಾಡಲಾಗುತ್ತದೆ. ದಿಂಬಿನ ಕೆಳಗೆ ದಾಲ್ಚಿನ್ನಿ ಇಟ್ಟುಕೊಳ್ಳುವುದು ಸರಿಯಾದ ವಿಧಾನವಾಗಿದೆ.
ನೀವು ಮಲಗುವಾಗ ನಿಮ್ಮ ದಿಂಬಿನ ಕೆಳಗೆ ಕೀಲಿ, ಗಡಿಯಾರ, ಹಳೆಯ ಬಿಲ್ಗಳು, ಹಣದ ಪರ್ಸ್, ಔಷಧಿ ಮೊಬೈಲ್ ಫೋನ್, ಪುಸ್ತಕ ಇಡುವುದನ್ನು ತಪ್ಪಿಸಿ, (ಏಜೆನ್ಸೀಸ್).