ಜಾಗಿಂಗ್​ ಬದಲು ಜಪಾನ್​ ಶೈಲಿಯ ನಿಕೊ ನಿಕೊ ನಡಿಗೆ... ಆರೋಗ್ಯ ವೃದ್ಧಿಗೆ ಇದು ಅತ್ಯುತ್ತಮ ಆಯ್ಕೆಯಂತೆ! Japanese style walk

ಅದೊಂದು ಬದುಕೇ ಅಲ್ಲ
ಅದೊಂದು ಬದುಕೇ ಅಲ್ಲ
Published on
Japanese style walk

ಅದೊಂದು ಬದುಕೇ ಅಲ್ಲ

ಶ್ರೀಮಂತಿಕೆ, ಗೌರವ ಹಾಗೂ ಖ್ಯಾತಿ ಎಲ್ಲ ಇದ್ದು ಆರೋಗ್ಯವೇ ಇಲ್ಲದೇ ಹೋದರೆ ಅದೊಂದು ಬದುಕೇ ಅಲ್ಲ. ಅದಕ್ಕಾಗಿ ಜನರು ಜಾಗಿಂಗ್ ಅಥವಾ ಓಟವನ್ನು ಆಯ್ಕೆ ಮಾಡುತ್ತಾರೆ.
Japanese style walk

ಜಪಾನ್‌ನ ಹೊಸ ಟ್ರೆಂಡ್​

ಆದರೆ, ಮೊಣಕಾಲು ನೋವು ಇರುವವರಿಗೆ ಅಥವಾ ವೇಗವಾಗಿ ಓಡಲು ಸಾಧ್ಯವಾಗದವರಿಗೆ ಓಟವೇ ಒಂದು ಸಮಸ್ಯೆ.ಹೀಗಾಗಿಯೇ ಜಪಾನ್‌ನ ಹೊಸ ಟ್ರೆಂಡಿ ವಿಧಾನ ಈಗ ಜಗತ್ತನ್ನು ಆಕರ್ಷಿಸುತ್ತಿದೆ.
Japanese style walk

ನಿಕೊ ನಿಕೊ ನಡಿಗೆ

ಆ ಹೊಸ ಟ್ರೆಂಡ್​ ಯಾವುದೆಂದರೆ, 'ಜಪಾನೀಸ್ ಶೈಲಿಯ ನಡಿಗೆ'. ಇದನ್ನು 'ನಿಕೊ ನಿಕೊ ನಡಿಗೆ' ಎಂದೂ ಕರೆಯುತ್ತಾರೆ. ಇದು ದೇಹಕ್ಕೆ ಉತ್ತೇಜನ ನೀಡುವ ಅತ್ಯುತ್ತಮ ಮಾರ್ಗವಾಗಿದೆ.
Japanese style walk

ವೇಗವಾಗಿ ನಡೆಯುವ ಅಗತ್ಯವಿಲ್ಲ

ಜಪಾನೀಸ್ ಶೈಲಿಯ ನಡಿಗೆ ನಿಧಾನ ನಡಿಗೆ ಮತ್ತು ವೇಗದ ನಡಿಗೆಯ ನಡುವಿನ ಸಮತೋಲಿತ ವಿಧಾನವಾಗಿದೆ. ಇದರಲ್ಲಿ, ಹೃದಯ ಬಡಿತವನ್ನು ಹೆಚ್ಚಿಸಲು ನಾವು ಸಾಕಷ್ಟು ವೇಗವಾಗಿ ನಡೆಯುವ ಅಗತ್ಯವಿಲ್ಲ.
Japanese style walk

ಮಾತನಾಡಲು ಅನುವು

ಇದರ ಮುಖ್ಯ ತತ್ವವೆಂದರೆ ನಮಗೆ ಮಾತನಾಡಲು ಅನುವು ಮಾಡಿಕೊಡುವ ವೇಗದಲ್ಲಿ ನಡೆಯುವುದು. ಹೀಗಾಗಿ ಇದನ್ನು ನಿಕೊ ನಿಕೊ ನಡಿಗೆ ಎಂದು ಕರೆಯಲಾಗುತ್ತದೆ.
Japanese style walk

ವೇಗವನ್ನು ಕಾಯ್ದುಕೊಳ್ಳಬೇಕು

ನೀವು ನಡೆಯುವಾಗ ನಿಮ್ಮೊಂದಿಗಿರುವ ವ್ಯಕ್ತಿಯೊಂದಿಗೆ ಸುಲಭವಾಗಿ ಮತ್ತು ನಗುತ್ತಾ ಮಾತನಾಡಲು ಅನುವು ಮಾಡಿಕೊಡುವ ವೇಗವನ್ನು ಕಾಯ್ದುಕೊಳ್ಳಬೇಕು. ಇದರಿಂದ ಹೃದಯದ ಆರೋಗ್ಯ ಮತ್ತು ಒಟ್ಟಾರೆ ಫಿಟ್‌ನೆಸ್‌ಗೆ ನೆರವಾಗುತ್ತದೆ.
Japanese style walk

ತೂಕ ನಿಯಂತ್ರಣ

ಜಪಾನೀಸ್ ಶೈಲಿಯ ನಡಿಗೆಯಿಂದ ಹೃದಯವನ್ನು ಆರೋಗ್ಯವಾಗಿರುತ್ತದೆ. ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಮಾನಸಿಕ ಶಾಂತಿಯನ್ನು ನೀಡುತ್ತದೆ. ಅಲ್ಲದೆ, ತೂಕ ನಿಯಂತ್ರಣವನ್ನು ಮಾಡುತ್ತದೆ.
Japanese style walk

ಗಮನಿಸಿ

ನಿಮ್ಮ ಫಿಟ್ನೆಸ್ ಮಟ್ಟವನ್ನು ಅವಲಂಬಿಸಿ ಕ್ರಮೇಣ ವೇಗ ಮತ್ತು ಸಮಯವನ್ನು ಹೆಚ್ಚಿಸುವುದು ಉತ್ತಮ. ಯಾವುದೇ ಹೊಸ ವ್ಯಾಯಾಮ ಕ್ರಮವನ್ನು ಪ್ರಾರಂಭಿಸುವ ಮೊದಲು ವೃತ್ತಿಪರ ಸಲಹೆಯನ್ನು ಪಡೆಯುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net