ನೇರಳೆ ಹಣ್ಣು ಸೇವಿಸಿದ ತಕ್ಷಣ ಈ ಆಹಾರಗಳನ್ನು ತಿಂದರೆ ಅಪಾಯ! Jamun Precautions

ನೇರಳೆ ಹಣ್ಣು
ನೇರಳೆ ಹಣ್ಣು
Published on
Jamun Precautions

ನೇರಳೆ ಹಣ್ಣು

ನೇರಳೆ ಹಣ್ಣು ಆರೋಗ್ಯಕ್ಕೆ ಅತ್ಯಂತ ಗುಣಕಾರಿ. ವಿಶೇಷವಾಗಿ ಮಧುಮೇಹಿಗಳಿಗೆ ಇದು ವರಪ್ರಸಾದ. ಆದರೆ, ಇದನ್ನು ತಿಂದ ತಕ್ಷಣ ಕೆಲವು ಆಹಾರಗಳನ್ನು ಸೇವಿಸುವುದರಿಂದ ಜೀರ್ಣಕ್ರಿಯೆಗೆ ತೊಂದರೆಯಾಗಿ ಆರೋಗ್ಯ ಹಾಳಾಗಬಹುದು. ಅಂತಹ 5 ಆಹಾರಗಳು ಇಲ್ಲಿವೆ:
Jamun Precautions

ಹಾಲು ಮತ್ತು ಹಾಲಿನ ಉತ್ಪನ್ನಗಳು

ನೇರಳೆ ಹಣ್ಣು ತಿಂದ ತಕ್ಷಣ ಹಾಲು, ಮೊಸರು ಅಥವಾ ಮಜ್ಜಿಗೆ ಕುಡಿಯಬಾರದು. ನೇರಳೆಯಲ್ಲಿರುವ ಆಮ್ಲೀಯತೆ ಮತ್ತು ಹಾಲಿನ ಪ್ರೋಟೀನ್ ಒಂದಕ್ಕೊಂದು ಸೇರಿದಾಗ ಹೊಟ್ಟೆಯಲ್ಲಿ ಗ್ಯಾಸ್, ಆಸಿಡಿಟಿ, ಹೊಟ್ಟೆ ಉರಿ ಹಾಗೂ ವಾಂತಿ ಉಂಟಾಗಬಹುದು.
Jamun Precautions

ಉಪ್ಪಿನಕಾಯಿ

ನೇರಳೆ ಹಣ್ಣು ತಿಂದ ತಕ್ಷಣ ಉಪ್ಪಿನಕಾಯಿ ತಿನ್ನುವುದು ತುಂಬಾ ಅಪಾಯಕಾರಿ. ಇವೆರಡೂ ಸೇರಿ ಹೊಟ್ಟೆಯಲ್ಲಿ ತೀವ್ರವಾದ ಆಮ್ಲೀಯತೆಯನ್ನು ಉಂಟುಮಾಡುತ್ತವೆ. ಇದರಿಂದ ಹೊಟ್ಟೆ ನೋವು ಮತ್ತು ಜೀರ್ಣಾಂಗವ್ಯೂಹದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
Jamun Precautions

ಅರಿಶಿನ

ನೇರಳೆ ತಿಂದ ತಕ್ಷಣ ಅರಿಶಿನ ಬಳಸಿದ ಆಹಾರಗಳನ್ನು ತಿಂದರೆ ದೇಹದಲ್ಲಿ ರಾಸಾಯನಿಕ ಕ್ರಿಯೆಯಾಗಿ ಹೊಟ್ಟೆಯಲ್ಲಿ ಉರಿ ಹಾಗೂ ಅಲರ್ಜಿ ಉಂಟಾಗುವ ಸಾಧ್ಯತೆ ಇರುತ್ತದೆ. ಕನಿಷ್ಠ 1 ಗಂಟೆಯ ನಂತರ ಅರಿಶಿನಯುಕ್ತ ಆಹಾರ ಸೇವಿಸುವುದು ಒಳಿತು.
Jamun Precautions

ನೀರು

ನೇರಳೆ ಹಣ್ಣು ತಿಂದ ತಕ್ಷಣ ನೀರು ಕುಡಿಯುವ ಅಭ್ಯಾಸ ಅನೇಕರಿಗಿರುತ್ತದೆ. ಆದರೆ ಹೀಗೆ ಮಾಡುವುದರಿಂದ ಜೀರ್ಣಕ್ರಿಯೆ ಮಂದಗತಿಯಾಗಿ ಬೇಧಿ, ವಾಂತಿ ಅಥವಾ ಗಂಟಲಿನ ಕಫ ಹೆಚ್ಚಾಗಬಹುದು. ಹಣ್ಣು ತಿಂದ 30 ನಿಮಿಷಗಳ ನಂತರವಷ್ಟೇ ನೀರು ಕುಡಿಯಬೇಕು.
Jamun Precautions

ಮೂಲಂಗಿ

ನೇರಳೆ ಮತ್ತು ಮೂಲಂಗಿ ಪರಸ್ಪರ ವಿರುದ್ಧ ಗುಣಗಳನ್ನು ಹೊಂದಿವೆ. ಇವೆರಡನ್ನೂ ಒಟ್ಟಿಗೆ ಅಥವಾ ಒಂದರ ಬೆನ್ನಲ್ಲೇ ಮತ್ತೊಂದನ್ನು ತಿಂದರೆ ಹೊಟ್ಟೆಯಲ್ಲಿ ವಿಷಕಾರಿ ಅಂಶಗಳು ಸೃಷ್ಟಿಯಾಗಿ ಚರ್ಮದ ಸಮಸ್ಯೆಗಳು ಅಥವಾ ತೀವ್ರ ಅಜೀರ್ಣ ಉಂಟಾಗಬಹುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net