ನಿಮ್ಮ ಫೋನ್ ಚಾರ್ಜರ್ ಬೆಂಕಿಯಂತೆ ಬಿಸಿಯಾಗುತ್ತಿದೆಯೇ? ಇಲ್ಲಿದೆ ಕಾರಣಗಳು Charger Heating

ಚಾರ್ಜರ್​ ಬಿಸಿಯಾಗಲು ಕಾರಣ
ಚಾರ್ಜರ್​ ಬಿಸಿಯಾಗಲು ಕಾರಣ
Published on
Charger Heating

ಚಾರ್ಜರ್​ ಬಿಸಿಯಾಗಲು ಕಾರಣ

ಸ್ಮಾರ್ಟ್‌ಫೋನ್ ಅಥವಾ ಲ್ಯಾಪ್‌ಟಾಪ್ ಚಾರ್ಜ್ ಮಾಡುವಾಗ ಚಾರ್ಜರ್ ಸ್ವಲ್ಪ ಬಿಸಿಯಾಗುವುದು ಸಾಮಾನ್ಯ. ಆದರೆ ಅತಿಯಾಗಿ ಬಿಸಿಯಾಗುತ್ತಿದ್ದರೆ ಅದು ಅಪಾಯದ ಮುನ್ಸೂಚನೆಯಾಗಿರಬಹುದು.
Charger Heating

ಅಸಲಿ ಚಾರ್ಜರ್ ಬಳಸದಿರುವುದು

ಕಡಿಮೆ ಬೆಲೆಗೆ ಸಿಗುವ ಅಥವಾ ಲೋಕಲ್ ಕಂಪನಿಯ ಚಾರ್ಜರ್‌ಗಳನ್ನು ಬಳಸುವುದು ದೊಡ್ಡ ತಪ್ಪು. ಇವುಗಳಲ್ಲಿ ಗುಣಮಟ್ಟದ ಎಲೆಕ್ಟ್ರಾನಿಕ್ ಘಟಕಗಳು ಇರುವುದಿಲ್ಲ. ಇದರಿಂದಾಗಿ ವಿದ್ಯುತ್ ಹರಿವನ್ನು ಸರಿಯಾಗಿ ನಿಯಂತ್ರಿಸಲು ಸಾಧ್ಯವಾಗದೆ ಚಾರ್ಜರ್ ಬೇಗನೇ ಬಿಸಿಯಾಗುತ್ತದೆ.
Charger Heating

ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನ

ಇಂದಿನ ದಿನಗಳಲ್ಲಿ ಬರುವ 'ಫಾಸ್ಟ್ ಚಾರ್ಜರ್‌ಗಳು' ಅತಿ ಕಡಿಮೆ ಸಮಯದಲ್ಲಿ ಹೆಚ್ಚು ವಿದ್ಯುತ್ ಅನ್ನು ಬ್ಯಾಟರಿಗೆ ವರ್ಗಾಯಿಸುತ್ತವೆ. ಈ ಪ್ರಕ್ರಿಯೆಯಲ್ಲಿ ಹೆಚ್ಚಿನ ಶಾಖ ಉತ್ಪತ್ತಿಯಾಗುವುದು ಸಹಜ. ಇದರಿಂದ ಚಾರ್ಜರ್ ಮತ್ತು ಫೋನ್ ಎರಡೂ ಬೆಚ್ಚಗಾಗುತ್ತವೆ.
Charger Heating

ವಾತಾವರಣದ ಉಷ್ಣತೆ ಮತ್ತು ಗಾಳಿಯ ಕೊರತೆ

ಬೇಸಿಗೆಯ ಸಮಯದಲ್ಲಿ ಅಥವಾ ಸರಿಯಾಗಿ ಗಾಳಿ ಆಡದ ಜಾಗದಲ್ಲಿ ಫೋನ್ ಚಾರ್ಜ್ ಹಾಕಿದರೆ ಶಾಖವು ಹೊರಹೋಗಲು ದಾರಿಯಿರುವುದಿಲ್ಲ. ಹೀಗಾದಾಗ ಚಾರ್ಜರ್ ಮಾತ್ರವಲ್ಲದೆ ಫೋನ್ ಕೂಡ ಅತಿಯಾಗಿ ಕಾಯುತ್ತದೆ.
Charger Heating

ಫೋನ್ ಬಳಸುತ್ತಾ ಚಾರ್ಜ್ ಮಾಡುವುದು

ಫೋನ್ ಚಾರ್ಜ್ ಆಗುತ್ತಿರುವಾಗಲೇ ಗೇಮ್ ಆಡುವುದು ಅಥವಾ ವಿಡಿಯೋ ನೋಡುವುದರಿಂದ ಬ್ಯಾಟರಿ ಮೇಲೆ ಅತಿಯಾದ ಒತ್ತಡ ಬೀಳುತ್ತದೆ. ಇದು ಚಾರ್ಜರ್‌ನಿಂದ ಹೆಚ್ಚಿನ ವಿದ್ಯುತ್ ಅನ್ನು ಬೇಡುತ್ತದೆ, ಇದರಿಂದ ಚಾರ್ಜರ್ ಬಿಸಿಯಾಗುತ್ತದೆ.
Charger Heating

ಚಾರ್ಜರ್ ಅಥವಾ ಕೇಬಲ್‌ನಲ್ಲಿನ ದೋಷ

ಒಂದು ವೇಳೆ ನಿಮ್ಮ ಚಾರ್ಜಿಂಗ್ ಕೇಬಲ್ ಹರಿದಿದ್ದರೆ ಅಥವಾ ಅಡಾಪ್ಟರ್ ಒಳಭಾಗದಲ್ಲಿ ಏನಾದರೂ ದೋಷವಿದ್ದರೆ ವಿದ್ಯುತ್ ಹರಿವಿನಲ್ಲಿ ಅಡಚಣೆಯಾಗುತ್ತದೆ. ಇದು ಚಾರ್ಜರ್ ಅತಿಯಾಗಿ ಬಿಸಿಯಾಗಲು ಮತ್ತು ಶಾರ್ಟ್ ಸರ್ಕ್ಯೂಟ್ ಉಂಟಾಗಲು ಕಾರಣವಾಗಬಹುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net