ಅಲೊವೆರಾ ಜೆಲ್ ಇದು ನೈಸರ್ಗಿಕವಾದ ಮನೆಮದ್ದು. ಇದರಲ್ಲಿ ಆಂಟಿ-ಇನ್‌ಫ್ಲಮೇಟರಿ, ಆಂಟಿ ಆಕ್ಸಿಡೆಂಟ್ ಗುಣಗಳನ್ನು ಹೊಂದಿರುತ್ತದೆ. ಇವುಗಳನ್ನು ಸನ್‌ಬರ್ನ್ ಆದಂತಹ ಜಾಗಕ್ಕೆ ಹಚ್ಚುವುದರಿಂದ ಇದು ಉರಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ತಂಪು ನೀರು
ಬಿಸಿಲಿಗೆ ಹೋಗಿ ಬಂದ ತಕ್ಷಣ ನಿಮಗೇನಾದರೂ, ಸನ್‌ಬರ್ನ್ ಉಂಟಾಗಿದ್ದರೆ ಆ ಭಾಗಕ್ಕೆ ತಂಪು ನೀರು ಅಥವಾ ಮಂಜುಗಡ್ಡೆಯನ್ನು ಇಟ್ಟು ನಿಧಾನವಾಗಿ 10-15 ನಿಮಿಷ ಮಸಾಜ್ ಮಾಡಿ. ಇದು ರಕ್ತನಾಳಗಳನ್ನು ಶಾಂತಗೊಳಿಸುತ್ತದೆ.
ಓಟ್‌ಮೀಲ್ ಸ್ನಾನ
ಕೊಲಾಯ್ಡಲ್ ಓಟ್ಸ್ ನ್ನು ಸ್ನಾನಕ್ಕೆ ಬಳಸುವುದರಿಂದ ಇದು ತ್ವಚೆಯನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಹಾಗಾಗಿ 1 ಕಪ್ ಓಟ್ಸ್ಮೀಲ್ನ್ನು ತಂಪು ನೀರಿನಲ್ಲಿ ಬೆರೆಸಿ 20 ನಿಮಿಷಗಳ ಕಾಲ ಬಿಟ್ಟು ನಂತರ ಸ್ನಾನ ಮಾಡಿ. ಇದು ಸುಟ್ಟ ಜಾಗಗಳನ್ನು ಸರಿಪಡಿಸುವಂತಹ ಕೆಲಸವನ್ನು ಮಾಡುತ್ತದೆ.
ಕ್ಯಾಮೊಮೈಲ್ ಚಹಾ
ಕ್ಯಾಮೊಮೈಲ್ ಚಹಾ ಸನ್‌ಬರ್ನ್‌ಗೆ ಶಾಂತಕಾರಿ ಎಂದು ತಿಳಿಯಲಾಗಿದೆ. 2-3 ಚಹಾ ಬ್ಯಾಗ್‌ಗಳನ್ನು ತಂಪು ನೀರಿನಲ್ಲಿ 10 ನಿಮಿಷಗಳು ನೆನಸಿ ತಂಪುಗೊಂಡ ನಂತರ ಸನ್‌ಬರ್ನ್ ಆದ ಜಾಗಕ್ಕೆ ಹಚ್ಚಿರಿ ಇದು ಉರಿಯನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ಗಳು ಕೆಂಪಾದ ಭಾಗವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಜೇನುತುಪ್ಪ
ಜೇನುತುಪ್ಪ ಆಂಟಿ- ಬ್ಯಾಕ್ಟೀರಿಯಾ ಮತ್ತು ಮಾಯಿಶ್ಚರೈಸ್ ಗುಣಗಳನ್ನು ಹೊಂದಿದೆ. ಇದು ಸನ್‌ಬರ್ನ್‌ಗೆ ಉಪಯುಕ್ತವಾದ ಔಷಧವಾಗಿದೆ. ಹಾಗಾಗಿ ದಿನಕ್ಕೆ 2-3 ಬಾರಿ ಮುಖಕ್ಕೆ ಹಚ್ಚುವುದರಿಂದ ಇದು ಸುಟ್ಟ ಗಾಯಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News