ಕಪ್ಪುಚುಕ್ಕೆ ಈರುಳ್ಳಿ ಬಳಕೆಗೆ ಯೋಗ್ಯವೇ? ಇಲ್ಲಿದೆ ನೋಡಿ ಉತ್ತರ

ಕಪ್ಪುಚುಕ್ಕೆ ಈರುಳ್ಳಿ ಬಳಕೆಗೆ ಯೋಗ್ಯವೇ? ಇಲ್ಲಿದೆ ನೋಡಿ ಉತ್ತರ
ಕಪ್ಪುಚುಕ್ಕೆ ಈರುಳ್ಳಿ ಬಳಕೆಗೆ ಯೋಗ್ಯವೇ? ಇಲ್ಲಿದೆ ನೋಡಿ ಉತ್ತರ
Published on
Black spots onion

ಕಪ್ಪುಚುಕ್ಕೆ ಈರುಳ್ಳಿ ಬಳಕೆಗೆ ಯೋಗ್ಯವೇ? ಇಲ್ಲಿದೆ ನೋಡಿ ಉತ್ತರ

ಕತ್ತರಿಸಬೇಕಾದರೆ ಕಣ್ಣೀರು ತರಿಸುವ ಈರುಳ್ಳಿ, ಕೆಲವೊಮ್ಮೆ ಎಚ್ಚರ ತಪ್ಪಿದ್ರೆ ನೋವಿನ ಕಣ್ಣೀರಿಗೂ ಕಾರಣವಾಗಬಹುದು. ಹೌದು, ಈರುಳ್ಳಿ ಸಿಪ್ಪೆಯ ಮೇಲೆ ಕಾಣಿಸಿಕೊಳ್ಳುವ ಕಪ್ಪು ಚುಕ್ಕೆಗಳ ಬಗ್ಗೆ ನಿಮಗೆ ಗೊತ್ತಿರದ ಒಂದಷ್ಟು ಸಂಗತಿಗಳು ಇಲ್ಲಿವೆ ನೋಡಿ.
Black spots onion

ತಿಂದರೆ ಏನೆಲ್ಲ ಸಮಸ್ಯೆ?

ಅಸಲಿಗೆ ಇದು ಕೇವಲ ಕಲೆಯಲ್ಲ. ಇದೊಂದು ಶಿಲೀಂಧ್ರ (Fungus). ಇದು ದೇಹದೊಳಗೆ ಪ್ರವೇಶಿಸಿದರೆ ಅಲರ್ಜಿಯಂತ ಸಮಸ್ಯೆಗಳಿಗೆ ಕಾರಣವಾಗುತ್ತದೆ. ನಿಮ್ಮ ಮನೆಯಲ್ಲಿ ಸಂಗ್ರಹಿಸಿಡಲಾದ ಈರುಳ್ಳಿಯನ್ನು ಪರಿಶೀಲಿಸದೆ ತಿನ್ನುವುದು ಕೆಲವೊಮ್ಮೆ ಹಾನಿಕಾರಕ ಎಂಬುದು ನಿಮಗೆ ನೆನಪಿರಲಿ.
Black spots onion

ನಿಮ್ಮ ಗಮನಕ್ಕೆ

ಚುಕ್ಕೆಯಿರುವ ಸಿಪ್ಪೆಯ ಪದರವನ್ನು ತೆಗೆದ ಬಳಿಕ ಒಳಗಿನ ಬಿಳಿ ಭಾಗವು ಕಪ್ಪಾಗಿದ್ದರೆ, ಆ ಈರುಳ್ಳಿ ತಿನ್ನಲು ಯೋಗ್ಯವಲ್ಲ ಎಂಬುದು ನಿಮ್ಮ ಗಮನದಲ್ಲಿರಲಿ. ಅಂದರೆ, ಸಿಪ್ಪೆ ತೆಗೆದ ಬಳಿಕ ಈರುಳ್ಳಿ ಏನಾದರೂ ಕೊಳೆತ ಅಥವಾ ನೀರಿನಂಶದಿಂದ ಕೂಡಿದ್ದರೆ ಅದನ್ನು ಬಿಸಾಡಿ.
Black spots onion

ಬಳಕೆಯಲ್ಲಿ ಇರಲಿ ಎಚ್ಚರ

ಕಪ್ಪು ಕಲೆಗಳಿರುವ ಈರುಳ್ಳಿಯನ್ನು ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಜನರು, ಮಕ್ಕಳು ಮತ್ತು ವೃದ್ಧರು ತಿನ್ನಬಾರದು. ಆಸ್ತಮಾ, ಕ್ಷಯ ಮತ್ತು ಎಚ್‌ಐವಿ ರೋಗಿಗಳು ಈ ಶಿಲೀಂಧ್ರವಿರುವ ಈರುಳ್ಳಿಯನ್ನು ಸೇವಿಸುವುದನ್ನು ತಪ್ಪಿಸಬೇಕು. ಮಧುಮೇಹ ಇರುವವರಿಗೆ ಇವು ತೊಂದರೆಯೇ. ಆಸ್ತಮಾ ರೋಗಿಗಳಲ್ಲಿ, ಈ ಶಿಲೀಂಧ್ರವು ಅಲರ್ಜಿಯ ದಾಳಿಗೆ ಕಾರಣವಾಗಬಹುದು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net