ನಿಮ್ಮ ಬೈಕ್​ ಸ್ಟಾರ್ಟ್​ ಆಗ್ತಿಲ್ವಾ? ಹೀಗೆ ಮಾಡಿ ನೋಡಿ

ಮೆಕ್ಯಾನಿಕ್ ಬಳಿ ಹೋಗುವ ಅವಶ್ಯಕತೆ ಇರಲ್ಲ!
ಮೆಕ್ಯಾನಿಕ್ ಬಳಿ ಹೋಗುವ ಅವಶ್ಯಕತೆ ಇರಲ್ಲ!
Published on
start issue

ಮೆಕ್ಯಾನಿಕ್ ಬಳಿ ಹೋಗುವ ಅವಶ್ಯಕತೆ ಇರಲ್ಲ!

ಏನೋ ಅರ್ಜೆಂಟ್​ ಕೆಲಸವಿದೆ. ನಾನಿಗಲೇ ಹೊರಡಬೇಕು ಎಂದು ಬೈಕ್​ಗೆ ಕೀ ಹಾಕುತ್ತಿದ್ದಂತೆ ಗಾಡಿ ಸ್ಟಾರ್ಟ್ ಆಗೋದಿಲ್ಲ.​ ತಕ್ಷಣವೇ, ಪದೇ ಪದೇ ಸೆಲ್ಫ್-ಸ್ಟಾರ್ಟ್ ಬಟನ್ ಒತ್ತುವುದು ಅಥವಾ ಕಿಕರ್​ ಇದ್ದರೆ, ಅದನ್ನು ತುಳಿಯಲು ಪ್ರಯತ್ನಿಸುತ್ತೇವೆ. ವಿಶೇಷವಾಗಿ ಚಳಿಗಾಲದಲ್ಲಿ. ಇಂತಹ ಸಮಸ್ಯೆಗಳು ಸಣ್ಣಪುಟ್ಟ ದೋಷಗಳಿಂದಾಗಿ ಕಾಣಿಸಿಕೊಳ್ಳುತ್ತವೆ.
start issue

ಇಂಜಿನ್ ಕಟ್-ಆಫ್ (ಕಿಲ್) ಸ್ವಿಚ್

ಬೈಕಿನ ಬಲ ಹ್ಯಾಂಡಲ್‌ಬಾರ್‌ನಲ್ಲಿ ಕೆಂಪು ಬಣ್ಣದಲ್ಲಿ ಇಂಜಿನ್ ಕಟ್-ಆಫ್ ಸ್ವಿಚ್ ಇದೆ. ರೈಡರ್​ಗಳು ಬೈಕ್ ಆಫ್ ಮಾಡಲು ಈ ಸ್ವಿಚ್ ಅನ್ನು ಹೆಚ್ಚಾಗಿ ಬಳಸುತ್ತಾರೆ. ಆದರೆ, ಮತ್ತೆ ಆನ್ ಮಾಡಲು ಮರೆತು, ಸ್ಟಾರ್ಟ್​ ಆಗ್ತಿಲ್ಲವಲ್ಲ ಎಂದು ಕೆಲ ಕಾಲ ಪರದಾಡುತ್ತಾರೆ. ಈ ಪರಿಸ್ಥಿತಿಯಲ್ಲಿ, ಒಮ್ಮೆ ಕಿಲ್​ ಸ್ವಿಚ್​ ಅನ್ನು ಸರಿಯಾಗಿ ಪರಿಶೀಲಿಸಿ.
start issue

ಲೂಸ್​ ಸ್ಪಾರ್ಕ್ ಪ್ಲಗ್ ವೈರ್

ಸ್ಪಾರ್ಕ್ ಪ್ಲಗ್ ಇಂಜಿನ್‌ನ ಪ್ರಮುಖ ಭಾಗ. ಇದು ಬೈಕ್​ನಲ್ಲಿ ಸ್ಪಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ವೈರ್ ಏನಾದರೂ ಲೂಸ್​ ಆಗಿದ್ದರೆ ಅಥವಾ ಅದರ ಮೇಲೆ ಕೊಳಕು ಅಂಟಿದ್ದರೆ, ಸರಿಯಾದ ಸಿಗ್ನಲ್ ಇಂಜಿನ್‌ಗೆ ತಲುಪುವುದಿಲ್ಲ. ಬೈಕ್ ಸ್ಟಾರ್ಟ್ ಆಗುವುದಿಲ್ಲ. ಹೀಗಾಗಿ, ಸ್ಪಾರ್ಕ್ ಪ್ಲಗ್ ತೆಗೆದು. ಕೊಳೆಮುಕ್ತ ಬಟ್ಟೆಯಿಂದ ಸಂಪೂರ್ಣವಾಗಿ ಒರೆಸಿ, ಮತ್ತೆ ಪ್ಲಗ್​ ಮಾಡಿ. ಈಗ ಸ
start issue

ಸೆಲ್ಫ್​ ಸ್ಟಾರ್ಟ್​ ಸಮಸ್ಯೆ

ಚಳಿಗಾಲದಲ್ಲಿ ಬ್ಯಾಟರಿಗಳು ಬೇಗನೆ ಡೆಡ್​ ಆಗ್ತವೆ. ವಿಶೇಷವಾಗಿ, ಕೆಲವು ದಿನಗಳವರೆಗೆ ಬೈಕ್ ಸ್ಟಾರ್ಟ್ ಆಗದಿದ್ದರಂತು ಸೆಲ್ಫ್​ ಸ್ಟಾರ್ಟ್​ ವರ್ಕ್​ ಆಗೋದಿಲ್ಲ. ಅಲ್ಲಿಗೆ ಬ್ಯಾಟರಿ ಡೆಡ್​ ಆಗಿದೆ ಎಂಬುದು ಸ್ಪಷ್ಟ. ಈ ಸಮಯದಲ್ಲಿ, ಬೈಕ್​ನ ಸೆಂಟರ್​ ಸ್ಟ್ಯಾಂಡ್‌ನಲ್ಲಿ ನಿಲ್ಲಿಸಿ, ನಾಲ್ಕನೇ ಗೇರ್‌ಗೆ ಹಾಕಿ, ಹಿಂಬದಿ ಚಕ್ರವನ್ನು ಕೈಯಿಂದ ಜೋರಾಗಿ ತಿರುಗಿಸಿ.
start issue

ಪೆಟ್ರೋಲ್ (ತೀರ ಸಾಮಾನ್ಯ)

ಕೆಲವೊಮ್ಮೆ ನಮ್ಮ ಗಾಡಿಯಲ್ಲಿ ಇಂಧನ ಖಾಲಿಯಾಗಿದೆ ಎಂಬುದೇ ನಮಗೆ ತಿಳಿದಿರುವುದಿಲ್ಲ. ಪೆಟ್ರೋಲ್​ ಇಲ್ಲದೆ ಇಂಜಿನ್ ಕೆಲಸ ಮಾಡುವುದಿಲ್ಲ, ಇದರಿಂದಾಗಿ ಬೈಕು ಸ್ಟಾರ್ಟ್ ಮಾಡುವುದು ಅಸಾಧ್ಯ. ಇಂಧನ ಗೇಜ್ ಅನ್ನು ಮಾತ್ರ ಅವಲಂಬಿಸಬೇಡಿ. ನಿಮ್ಮ ಬೈಕು ಇದ್ದಕ್ಕಿದ್ದಂತೆ ಸ್ಟಾರ್ಟ್ ಆಗದಿದ್ದರೆ, ಇಂಧನ ಟ್ಯಾಂಕ್ ಅನ್ನು ಒಮ್ಮೆ ಪರಿಶೀಲಿಸಿ.
start issue

ಏರ್ ಫಿಲ್ಟರ್ ಇಶ್ಯೂ

ಏರ್ ಫಿಲ್ಟರ್ ಕೆಲಸವೇ ಇಂಜಿನ್​ಗೆ ಶುದ್ಧ ಗಾಳಿಯನ್ನು ಪೂರೈಕೆ ಮಾಡುವುದು. ಅಕಸ್ಮಾತ್​ ಫಿಲ್ಟರ್​ನಲ್ಲಿ ಕೊಳೆ ಕೂತರೆ, ಇಂಜಿನ್ ಸರಿಯಾದ ಪ್ರಮಾಣದ ಗಾಳಿಯನ್ನು ಪಡೆಯುವುದಿಲ್ಲ ಮತ್ತು ಬೈಕ್ ಸ್ಟಾರ್ಟ್ ಆಗೋದಿಲ್ಲ. ಇದರಿಂದ ಚಲಿಸುವಾಗ ಆಗಾಗ್ಗೆ ಜರ್ಕ್ ಸಮಸ್ಯೆಯೂ ಕಾಡುತ್ತದೆ. ಏರ್ ಫಿಲ್ಟರ್ ಪರಿಶೀಲಿಸಿ, ಅಗತ್ಯವಿದ್ದರೆ ಸ್ವಚ್ಛಗೊಳಿಸಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net