ಮೀನಿನ ಮುಳ್ಳು ಗಂಟಲಲ್ಲಿ ಸಿಲುಕಿಕೊಂಡರೆ ತಕ್ಷಣ ಹೀಗೆ ಮಾಡಿ! Fish Bone

ಗಂಟಲಲ್ಲಿ ಮೀನಿನ ಮುಳ್ಳು
ಗಂಟಲಲ್ಲಿ ಮೀನಿನ ಮುಳ್ಳು
Published on
Fish Bone

ಗಂಟಲಲ್ಲಿ ಮೀನಿನ ಮುಳ್ಳು

ಊಟ ಮಾಡುವಾಗ ಆಕಸ್ಮಿಕವಾಗಿ ಗಂಟಲಿನಲ್ಲಿ ಮೀನಿನ ಮುಳ್ಳು ಸಿಲುಕಿಕೊಂಡರೆ ಗಾಬರಿಯಾಗುವುದು ಬೇಡ. ತಕ್ಷಣವೇ ಈ ಸರಳ ಮನೆಮದ್ದುಗಳನ್ನು ಪ್ರಯತ್ನಿಸಿ.
Fish Bone

ಬಾಳೆಹಣ್ಣು ತಿನ್ನುವುದು

ಒಂದು ದೊಡ್ಡ ತುಂಡು ಬಾಳೆಹಣ್ಣನ್ನು ಅಗಿಯದೆ ಹಾಗೇ ನುಂಗಿ. ಬಾಳೆಹಣ್ಣಿನ ಜಿಗುಟುತನಕ್ಕೆ ಮುಳ್ಳು ಅಂಟಿಕೊಂಡು, ಅದು ಹೊಟ್ಟೆಯೊಳಗೆ ಸುಲಭವಾಗಿ ಜಾರಿ ಹೋಗುತ್ತದೆ.
Fish Bone

ಒಣ ಅನ್ನದ ಉಂಡೆ

ಸ್ವಲ್ಪ ಬಿಳಿ ಅನ್ನವನ್ನು ತಗೆದುಕೊಂಡು ಸಣ್ಣ ಉಂಡೆಯನ್ನಾಗಿ ಮಾಡಿ. ಇದನ್ನು ಅಗಿಯದೆ ನೇರವಾಗಿ ನುಂಗಿ. ಅನ್ನದ ತೂಕ ಮತ್ತು ಒತ್ತಡಕ್ಕೆ ಗಂಟಲಿನಲ್ಲಿ ಸಿಲುಕಿರುವ ಮುಳ್ಳು ಕೆಳಗೆ ಇಳಿಯುತ್ತದೆ.
Fish Bone

ಉಪ್ಪು ನೀರು ಅಥವಾ ಆಲಿವ್ ಆಯಿಲ್

ಒಂದು ಲೋಟ ಉಗುರುಬೆಚ್ಚಗಿನ ನೀರಿಗೆ ಸ್ವಲ್ಪ ಉಪ್ಪು ಹಾಕಿ ಕುಡಿಯಿರಿ ಅಥವಾ ಒಂದು ಚಮಚ ಆಲಿವ್ ಆಯಿಲ್ ಸೇವಿಸಿ. ಆಲಿವ್ ಆಯಿಲ್ ಗಂಟಲಿನ ಭಾಗವನ್ನು ನಯಗೊಳಿಸಿ, ಮುಳ್ಳು ಸುಲಭವಾಗಿ ಜಾರಲು ಸಹಾಯ ಮಾಡುತ್ತದೆ.
Fish Bone

ಬ್ರೆಡ್ ಮತ್ತು ನೀರು

ಒಂದು ತುಂಡು ಬ್ರೆಡ್ ಅನ್ನು ಸ್ವಲ್ಪ ನೀರಿನಲ್ಲಿ ಅಥವಾ ಹಾಲಿನಲ್ಲಿ ಅದ್ದಿ, ಅದನ್ನು ಸಣ್ಣ ಉಂಡೆಯಂತೆ ಮಾಡಿ ನುಂಗಿ. ಇದು ಮುಳ್ಳನ್ನು ತನ್ನೊಂದಿಗೆ ಎಳೆದುಕೊಂಡು ಹೋಗುತ್ತದೆ.
Fish Bone

ನಿಂಬೆ ರಸ ಕುಡಿಯುವುದು

ನಿಂಬೆ ರಸದಲ್ಲಿರುವ ಆಮ್ಲೀಯತೆ ಅತ್ಯಂತ ಮೃದುವಾದ ಅಥವಾ ಸಣ್ಣದಾದ ಮುಳ್ಳನ್ನು ಕರಗಿಸಲು ಅಥವಾ ಸಡಿಲಗೊಳಿಸಲು ನೆರವಾಗುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net