ಹಾಟ್​ ಫೋಟೋಗಳನ್ನು ಹರಿಬಿಟ್ಟು ಪಡ್ಡೆ ಹುಡುಗರ ನಿದ್ದೆಗೆಡಿಸಿದ ನಟಿ ಡಿಂಪಲ್​ ಹಯಾತಿ! Dimple Hayathi

ಟಾಲಿವುಡ್​ ಬ್ಯೂಟಿ ಹಯಾತಿ
ಟಾಲಿವುಡ್​ ಬ್ಯೂಟಿ ಹಯಾತಿ
Published on
Dimple Hayathi

ಟಾಲಿವುಡ್​ ಬ್ಯೂಟಿ ಹಯಾತಿ

ಟಾಲಿವುಡ್‌ ಹಾಟ್ ಹೀರೋಯಿನ್ ಡಿಂಪಲ್ ಹಯಾತಿ ಬಗ್ಗೆ ವಿಶೇಷ ಪರಿಚಯದ ಅಗತ್ಯವಿಲ್ಲ. ರವಿತೇಜ ಹಾಗೂ ವಿಶಾಲ್​ರಂತಹ ಸ್ಟಾರ್ ಹೀರೋಗಳ ಜತೆ ನಾಯಕಿಯಾಗಿ ನಟಿಸಿದ್ದಾರೆ.
Dimple Hayathi

ವಿಜಯವಾಡ ಅಮ್ಮಾಯಿ

1998, ಆಗಸ್ಟ್ 21ರಂದು ಆಂಧ್ರದ ವಿಜಯವಾಡದಲ್ಲಿ ಜನಿಸಿದರು. ತಂದೆ ತಮಿಳು ಮತ್ತು ತಾಯಿ ತೆಲುಗು ಮೂಲ. ಹೈದರಾಬಾದ್‌ನಲ್ಲಿ ಬೆಳೆದರು. ಮೂಲ ಹೆಸರು ಡಿಂಪಲ್ ಆಗಿದ್ದು, ಸಂಖ್ಯಾಶಾಸ್ತ್ರದಿಂದಾಗಿ "ಹಯಾತಿ" ಸೇರಿಸಿಕೊಂಡರು.
Dimple Hayathi

ಮೊದಲ ಸಿನಿಮಾ

2017ರಲ್ಲಿ ತೆರೆಕಂಡ ತೆಲುಗು ಚಿತ್ರ Gulf ಮೂಲಕ ತಮ್ಮ ನಟನಾ ವೃತ್ತಿ ಜೀವನದನ್ನು ಆರಂಭಿಸಿದರು. ಆದರೆ, ಈ ಸಿನಿಮಾ ಹೇಳಿಕೊಳ್ಳುವಷ್ಟು ಯಶಸ್ವಿಯಾಗಲಿಲ್ಲ.
Dimple Hayathi

ಪ್ರಸಿದ್ಧಿ ಪಡೆದ ಚಿತ್ರಗಳು

ತೆಲುಗು ಚಿತ್ರ ಖಿಲಾಡಿಯಲ್ಲಿ ಸ್ಟಾರ್​ ನಟ ರವಿತೇಜ ಜತೆ ನಟಿಸಿ, ಒಳ್ಳೆಯ ಹೆಸರು ಗಳಿಸಿದರು. ತಮಿಳಿನಲ್ಲಿ ನಟ ವಿಶಾಲ್​ ಅಭಿನಯದ ವೀರಮೇ ವಾಗೈ ಸೂಡುಂ ಸಿನಿಮಾದಲ್ಲಿ ನಟಿಸುವ ಮೂಲಕ ಒಳ್ಳೆಯ ಯಶಸ್ಸು ಗಳಿಸಿದರು.
Dimple Hayathi

ಗ್ಲಾಮರಸ್​ ಗೊಂಬೆ

ಹಯಾತಿ ಅವರು ಮುಖ್ಯವಾಗಿ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಕೆಲಸ ಮಾಡುತ್ತಾರೆ. ಗ್ಲಾಮರಸ್ ಪಾತ್ರಗಳು ಮತ್ತು ಐಟಂ ಸಾಂಗ್‌ಗಳಿಗೆ ಹೆಚ್ಚು ಗುರುತಿಸಿಕೊಂಡಿದ್ದಾರೆ.
Dimple Hayathi

ವೈಯಕ್ತಿಕ ಜೀವನ

ವಿಕ್ಟರ್ ಡೇವಿಡ್ ಎಂಬುವರನ್ನು ಮದುವೆಯಾಗಿದ್ದಾರೆ. ಇತ್ತೀಚೆಗೆ ಮನೆಕೆಲಸದಾಕೆಯೊಂದಿಗಿನ ಜಗಳದಿಂದಾಗಿ ಹಯಾತಿ ಸುದ್ದಿಯಾಗಿದ್ದರು.
Dimple Hayathi

ಜಾಲತಾಣದಲ್ಲಿ ಸಖತ್​ ಆ್ಯಕ್ಟೀವ್​

ಹಯಾತಿ ಅವರು ಕುಚಿಪುಡಿ ನೃತ್ಯದ ತರಬೇತಿ ಪಡೆದಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 1 ಮಿಲಿಯನ್‌ಗಿಂತ ಹೆಚ್ಚು ಫಾಲೋವರ್‌ಗಳಿದ್ದು, ಫ್ಯಾಷನ್ ಮತ್ತು ಗ್ಲಾಮರ್ ಫೋಟೋಗಳಿಗೆ ಜನಪ್ರಿಯರಾಗಿದ್ದಾರೆ.
Dimple Hayathi

ಬರೀ ಬೋಲ್ಡ್​ ಫೋಟೋಗಳು

ಹಯಾತಿ ಅವರ ಇನ್​ಸ್ಟಾದಲ್ಲಿ ಅತಿ ಹೆಚ್ಚು ಬೋಲ್ಡ್​ ಫೋಟೋಗಳೇ ತುಂಬಿವೆ. ಹೀಗಾಗಿ ಅವರ ಫೋಟೋಗಳು ಆಗಾಗ ಜಾಲತಾಣದಲ್ಲಿ ವೈರಲ್​ ಆಗುತ್ತಲೇ ಇರುತ್ತವೆ. ಅದರಲ್ಲೂ ಬಿಕಿನಿ ಫೋಟೋಗಳು ಹೆಚ್ಚು ವೈರಲ್​ ಆಗುತ್ತವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net