ಅಮೀರ್ ಖಾನ್ ಅಭಿನಯದ ಈ ಚಿತ್ರ ಬಾಲಿವುಡ್‌ನ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿದೆ. ಚೀನಾದಲ್ಲಿ ಈ ಸಿನಿಮಾ ಭರ್ಜರಿ ಪ್ರದರ್ಶನ ಕಂಡಿದ್ದರಿಂದ ಇದರ ಒಟ್ಟು ಕಲೆಕ್ಷನ್ ಸುಮಾರು 2,000 ಕೋಟಿಯಾಗಿದೆ.
ಧುರಂಧರ್ ಭಾಗ 2
ಮಾರ್ಚ್ 19, 2026 ರಲ್ಲಿ ಬಿಡುಗಡೆಯಾದ ಈ ಸಿನಿಮಾ ಇಲ್ಲಿವರೆಗೆ ಸುಮಾರು 1,727 ಕೋಟಿ ಕಲೆಕ್ಷನ್ ಮಾಡಿದ್ದು, ಈಗಲೂ ಈ ಸಿನಿಮಾದ ನಾಗಾಲೋಟ ಮುಂದುವರೆದಿದೆ.
ಧುರಂಧರ್ ಭಾಗ 1
ಡಿಸೆಂಬರ್ 5, 2025 ರಂದು ತೆರೆಕಂಡ ಈ ಸಿನಿಮಾದಲ್ಲಿ ರಣವೀರ್ ಸಿಂಗ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರೆ, ಆದಿತ್ಯ ಧರ್ ಈ ಸಿನಿಮಾದ ನಿರ್ದೇಶಕರಾಗಿದ್ದಾರೆ. ಈ ಸಿನಿಮಾ ಸುಮಾರು 1,307 ಕೋಟಿ ಗಳಿಸಿದೆ ಎಂದು ವಿವಿಧ ಮಾಧ್ಯಮಗಳು ವರದಿ ಮಾಡಿವೆ.
ಜವಾನ್ (Jawan - 2023)
ಶಾರುಖ್ ಖಾನ್ ಮತ್ತು ಅಟ್ಲೀ ಕಾಂಬಿನೇಶನ್‌ನ ಈ ಆಕ್ಷನ್ ಸಿನಿಮಾ ಬಾಲಿವುಡ್‌ನ ಹಲವು ದಾಖಲೆಗಳನ್ನು ಪುಡಿಪುಡಿ ಮಾಡಿತು. ಈ ಸಿನಿಮಾ ಸುಮಾರು 1,148 ಕೋಟಿ ಕಲೆಕ್ಷನ್ ಮಾಡಿತು.
ಪಠಾಣ್ (Pathaan - 2023)
ಶಾರುಖ್ ಖಾನ್ ಅವರ ಭರ್ಜರಿ ಕಂಬ್ಯಾಕ್ ಸಿನಿಮಾ ಇದಾಗಿದ್ದು, ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಸಾವಿರ ಕೋಟಿ ಕ್ಲಬ್ ಸೇರಿತ್ತು. ಈ ಸಿನಿಮಾ ಸುಮಾರು 1,050 ಕೋಟಿ ಗಳಿಸಿದೆ ಎಂದು ಹೇಳಲಾಗುತ್ತದೆ.