ಬಾಯಿ ವಾಸನೆ ಸಮಸ್ಯೆಗೆ ಗುಡ್ ಬೈ ಹೇಳಲು ಇಲ್ಲಿದೆ ಸುಲಭ ಪರಿಹಾರ! Oral Hygiene

ಬಾಯಿ ವಾಸನೆ
ಬಾಯಿ ವಾಸನೆ
Published on
Oral Hygiene

ಬಾಯಿ ವಾಸನೆ

ಬಾಯಿ ವಾಸನೆ ಮುಖ್ಯವಾಗಿ ಬಾಯಿಯ ಅಸ್ವಚ್ಛತೆ, ಹಲ್ಲಿನ ಕುಳಿ ಮತ್ತು ನಾಲಿಗೆಯ ಮೇಲೆ ಸಂಗ್ರಹವಾಗುವ ಬ್ಯಾಕ್ಟೀರಿಯಾಗಳಿಂದ ಉಂಟಾಗುತ್ತದೆ. ನೀರು ಕಡಿಮೆ ಕುಡಿಯುವುದು, ಅಜೀರ್ಣ ಅಥವಾ ಈರುಳ್ಳಿ-ಬೆಳ್ಳುಳ್ಳಿ ಸೇವನೆಯೂ ಇದಕ್ಕೆ ಕಾರಣವಾಗಬಹುದು.
Oral Hygiene

ಬೆಚ್ಚಗಿನ ಉಪ್ಪುನೀರಿನ ಮುಕ್ಕಳಿಸುವಿಕೆ

ಅರ್ಧ ಚಮಚ ಉಪ್ಪನ್ನು ಒಂದು ಲೋಟ ಉಗುರುಬೆಚ್ಚಗಿನ ನೀರಿಗೆ ಬೆರೆಸಿ ದಿನಕ್ಕೆ ಎರಡು ಬಾರಿ ಮುಕ್ಕಳಿಸಿ. ಇದು ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ಮತ್ತು ದುರ್ವಾಸನೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
Oral Hygiene

ಲವಂಗದ ಬಳಕೆ

ಒಂದು ಅಥವಾ ಎರಡು ಲವಂಗಗಳನ್ನು ಬಾಯಿಯಲ್ಲಿಟ್ಟುಕೊಂಡು ಅದರ ರಸವನ್ನು ಹೀರುವುದರಿಂದ ಬಾಯಿಯ ವಾಸನೆ ತಕ್ಷಣವೇ ಕಡಿಮೆಯಾಗುತ್ತದೆ. ಲವಂಗದಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಬಾಯಿಯ ಆರೋಗ್ಯಕ್ಕೆ ಉತ್ತಮ.
Oral Hygiene

ಸೋಂಪು ಕಾಳುಗಳು

ಸೋಂಪು ಕಾಳುಗಳು ನೈಸರ್ಗಿಕ ಮೌತ್ ಫ್ರೆಶ್‌ನರ್ ಆಗಿ ಕೆಲಸ ಮಾಡುತ್ತವೆ. ಊಟದ ನಂತರ ಸ್ವಲ್ಪ ಸೋಂಪು ಕಾಳುಗಳನ್ನು ಅಗಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುವುದಲ್ಲದೆ, ಬಾಯಿಯ ವಾಸನೆಯೂ ದೂರವಾಗುತ್ತದೆ.
Oral Hygiene

ಏಲಕ್ಕಿ ಮತ್ತು ದಾಲ್ಚಿನ್ನಿ

ಏಲಕ್ಕಿಯ ಘಮವು ಬಾಯಿಯ ವಾಸನೆಯನ್ನು ಹೋಗಲಾಡಿಸಲು ಬಹಳ ಪರಿಣಾಮಕಾರಿ. ಅಂತೆಯೇ ದಾಲ್ಚಿನ್ನಿಯಲ್ಲಿರುವ ಸಿನಾಮಿಕ್ ಆಲ್ಡಿಹೈಡ್ ಬಾಯಿಯ ಬ್ಯಾಕ್ಟೀರಿಯಾಗಳನ್ನು ನಾಶಪಡಿಸಿ ತಾಜಾತನ ನೀಡುತ್ತದೆ.
Oral Hygiene

ಹೆಚ್ಚು ನೀರು ಕುಡಿಯುವುದು

ಬಾಯಿ ಒಣಗುವುದರಿಂದ ಬ್ಯಾಕ್ಟೀರಿಯಾಗಳು ಹೆಚ್ಚಾಗಿ ಬೆಳೆಯುತ್ತವೆ, ಇದು ದುರ್ವಾಸನೆಗೆ ಕಾರಣವಾಗುತ್ತದೆ. ದಿನವಿಡೀ ಸಾಕಷ್ಟು ನೀರು ಕುಡಿಯುವುದರಿಂದ ಬಾಯಿ ತೇವವಾಗಿರುತ್ತದೆ ಮತ್ತು ಲಾಲಾರಸವು ಬ್ಯಾಕ್ಟೀರಿಯಾಗಳನ್ನು ತೊಳೆದು ಹಾಕಲು ಸಹಾಯ ಮಾಡುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net