ಇದು ಪ್ರಕೃತಿ ನೀಡಿದ ಅತ್ಯುತ್ತಮ ಎಲೆಕ್ಟ್ರೋಲೈಟ್ ಪಾನೀಯ. ಇದರಲ್ಲಿರುವ ಪೊಟ್ಯಾಸಿಯಮ್ ಮತ್ತು ಖನಿಜಾಂಶಗಳು ದೇಹದ ಉಷ್ಣತೆಯನ್ನು ತಕ್ಷಣ ಕಡಿಮೆ ಮಾಡಿ, ಚೈತನ್ಯ ನೀಡುತ್ತವೆ.
ಮಜ್ಜಿಗೆ
ಒಂದು ಲೋಟ ಮಜ್ಜಿಗೆಗೆ ಸ್ವಲ್ಪ ಜೀರಿಗೆ ಪುಡಿ, ಶುಂಠಿ ಮತ್ತು ಕರಿಬೇವು ಹಾಕಿ ಕುಡಿದರೆ ದೇಹಕ್ಕೆ ತಂಪು. ಇದು ಜೀರ್ಣಕ್ರಿಯೆಗೂ ತುಂಬಾ ಒಳ್ಳೆಯದು ಮತ್ತು ದೇಹದ ಉಷ್ಣತೆಯನ್ನು ಸಮತೋಲನದಲ್ಲಿಡುತ್ತದೆ.
ನಿಂಬೆ ಪಾನಕ
ವಿಟಮಿನ್ ಸಿ ಸಮೃದ್ಧವಾಗಿರುವ ಲಿಂಬೆ ಪಾನಕವು ಬಿಸಿಲಿನಿಂದ ಉಂಟಾಗುವ ಆಯಾಸವನ್ನು ದೂರ ಮಾಡುತ್ತದೆ. ಇದಕ್ಕೆ ಸಕ್ಕರೆ ಬದಲಿಗೆ ಸ್ವಲ್ಪ ಉಪ್ಪು ಮತ್ತು ಜೇನುತುಪ್ಪ ಸೇರಿಸಿದರೆ ಇನ್ನೂ ಉತ್ತಮ.
ಬೆಲ್ಲದ ಪಾನಕ
ಬೇಸಿಗೆಯಲ್ಲಿ ಬೆಲ್ಲದ ಪಾನಕ ಕುಡಿಯುವುದು ಹಳೆಯ ಕಾಲದ ಪದ್ಧತಿ. ಇದು ದೇಹಕ್ಕೆ ಕಬ್ಬಿಣದಂಶ ನೀಡುವುದಲ್ಲದೆ, ತಕ್ಷಣದ ಶಕ್ತಿ ನೀಡುತ್ತದೆ. ಇದಕ್ಕೆ ಸ್ವಲ್ಪ ಏಲಕ್ಕಿ ಪುಡಿ ಸೇರಿಸಿದರೆ ರುಚಿ ಮತ್ತು ತಂಪು ಹೆಚ್ಚು.
ಕಲ್ಲಂಗಡಿ ಹಣ್ಣಿನ ಜ್ಯೂಸ್
ಈ ಹಣ್ಣುಗಳಲ್ಲಿ ಶೇ. 90ಕ್ಕೂ ಹೆಚ್ಚು ನೀರಿನಾಂಶವಿರುತ್ತದೆ. ಇವು ಬಿಸಿಲಿನಲ್ಲಿ ದೇಹದ ನೀರಿನ ಮಟ್ಟವನ್ನು ಕಾಪಾಡಲು ಸಹಾಯ ಮಾಡುತ್ತವೆ ಮತ್ತು ಚರ್ಮದ ಆರೋಗ್ಯಕ್ಕೂ ಒಳ್ಳೆಯದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News