ಅಶ್ವಗಂಧವು ದೇಹದಲ್ಲಿ ಮೆಲನಿನ್ ಉತ್ಪಾದನೆಯನ್ನು ಹೆಚ್ಚಿಸಿ ಒತ್ತಡವನ್ನು ಕಡಿಮೆ ಮಾಡಿ, ನಿದ್ರೆಯನ್ನು ಸುಧಾರಿಸುತ್ತದೆ. ಹಾಗೆಯೇ ಮೆದುಳನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ.
2. ಮೊಸರು
ಮೊಸರು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು, ಇದು ಕೂದಲನ್ನು ಬೇರುಗಳ ಆಳದಿಂದ ಪೋಷಿಸಲು ಸಹಾಯ ಮಾಡುತ್ತದೆ.
ಯೋಗ ಆಸನಗಳು
ಪ್ರತಿನಿತ್ಯ 30 ನಿಮಿಷಗಳ ಕಾಲ ಸರ್ವಾಂಗಾಸನ, ಅಧೋಮುಖ ಸ್ವನಾಸನದಂತಹ ಯೋಗ ಆಸನಗಳನ್ನು ಮಾಡಿ. ಇದು ನೆತ್ತಿಗೆ ಆಮ್ಲಜನಕವನ್ನು ನೀಡಿ. ಕೂದಲನ್ನು ಪೋಷಿಸಲು ಸಹಾಯ ಮಾಡುತ್ತದೆ.
ಒಮೆಗಾ-3 ಆಹಾರ
ಕೂದಲು ಕಪ್ಪಾಗಿಡಲು ಮತ್ತು ದಪ್ಪವಾಗಿಡಲು ದೇಹಕ್ಕೆ ಅಗತ್ಯವಾದ ಪೌಷ್ಟಿಕಾಂಶಗಳು ಮುಖ್ಯ. ಆಹಾರ ಸೇವಿಸುವಾಗ ಬಾದಾಮಿ, ವಾಲ್ನಟ್ಸ್, ಗೋಡಂಬಿ, ಅಗಸೆ ಬೀಜಗಳು, ಚೀಸ್, ಅಣಬೆಗಳು, ಪಾಲಕ್ ಮತ್ತು ಬ್ರೊಕೊಲಿಯನ್ನು ಸೇರಿಸಿ.
ಭೃಂಗರಾಜ್ ಮತ್ತು ಆಮ್ಲಾ ಎಣ್ಣೆ
ಭೃಂಗರಾಜ್ ಮತ್ತು ಆಮ್ಲಾ ಎಣ್ಣೆಯನ್ನು ಬೆರೆಸಿ ಮಲಗುವ ಮುನ್ನ ನೆತ್ತಿಯ ಮೇಲೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡುವುದರಿಂದ ಇದು ರಕ್ತ ಪರಿಚಲನೆಯನ್ನು ಸುಧಾರಿಸಿ ಕೂದಲು ಕಪ್ಪಗಾಗಲು ಸಹಾಯ ಮಾಡುತ್ತದೆ.