ಮಹಿಳೆಯರಲ್ಲಿ ಹೆಚ್ಚುತ್ತಿರುವ ಬಂಜೆತನಕ್ಕೆ ಕಾರಣಗಳು ಇಲ್ಲಿವೆ! Infertility

ಬಂಜೆತನ
ಬಂಜೆತನ
Published on
Infertility

ಬಂಜೆತನ

ಇಂದಿನ ಬದಲಾದ ಜೀವನಶೈಲಿ, ಆಹಾರ ಪದ್ಧತಿ ಮತ್ತು ಮಾನಸಿಕ ಒತ್ತಡವು ದಂಪತಿಗಳ ಪಾಲಿಗೆ ಪೋಷಕತ್ವದ ಕನಸನ್ನು ನನಸಾಗಿಸಲು ಅಡ್ಡಿಯಾಗುತ್ತಿದೆ. ಅದರಲ್ಲೂ ಮಹಿಳೆಯರಲ್ಲಿಯೇ ಈ ಸಮಸ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ.
Infertility

ತಡವಾಗಿ ಗರ್ಭಧಾರಣೆ

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರು ತಮ್ಮ ವೃತ್ತಿಜೀವನದ ಬಗ್ಗೆ ಯೋಚಿಸುತ್ತಾರೆ. ಅದಕ್ಕಾಗಿ ತಡವಾಗಿ ಮದುವೆಯಾಗಿ ಮಗುವನ್ನು ಪಡೆಯಲು ದೀರ್ಘ ಸಮಯದವರೆಗೆ ವಿಳಂಬ ಮಾಡುತ್ತಾರೆ. ಈ ಕಾರಣದಿಂದಾಗಿ ಸಮಸ್ಯೆಗಳು ಹೆಚ್ಚಾಗುತ್ತದೆ.
Infertility

ಅಂಡಾಣುಗಳ ಕ್ಷೀಣತೆ

35 ವರ್ಷದ ನಂತರ ಅಂಡಾಣುಗಳ ಗುಣಮಟ್ಟ ಕ್ರಮೇಣವಾಗಿ ಕ್ಷೀಣಿಸಲು ಪ್ರಾರಂಭಿಸುತ್ತದೆ. ನೀವೇನಾದರೂ ಮಗುವನ್ನು ಹೊಂದಲು ಬಯಸಿದರೆ, 35 ವರ್ಷಕ್ಕಿಂತ ಮುಂಚೆಯೇ ಮಗುವನ್ನು ಹೊಂದಲು ನಿರ್ಧರಿಸಿ. ಇದು ಬಂಜೆತನವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
Infertility

ಹಾರ್ಮೋನ್​ಗಳ ಕೊರತೆ

ಮಹಿಳೆಯರ ದೇಹದಲ್ಲಿ ಸಾಕಷ್ಟು ಆಂಟಿ-ಮುಲ್ಲೇರಿಯನ್ ಹಾರ್ಮೋನ್​ಗಳ ಕೊರತೆ ಹೆಚ್ಚಾದಲ್ಲಿ ಅಂಡಾಶಯದ ಮೊಟ್ಟೆಗಳ ಸಂಖ್ಯೆಯಲ್ಲಿ ಇಳಿಕೆಗೆ ಕಂಡುಬರುತ್ತದೆ. ಇದು ಅನುವಂಶೀಯತೆ, ಕಳಪೆ ಜೀವನಶೈಲಿ ಮತ್ತು ಆಹಾರ ಪದ್ಧತಿಯನ್ನು ಕೂಡಾ ಆಧರಿಸಿರುತ್ತದೆ.
Infertility

ಹೆಚ್ಚಾದ ಬೊಜ್ಜು

ಬಂಜೆತನಕ್ಕೆ ಬೊಜ್ಜು ಕೂಡಾ ಒಂದು ಅಪಾಯಕಾರಿಯಾಗಿದೆ. ನಿಮ್ಮ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಅನೇಕ ಮಹಿಳೆಯರು ಈ ವಿಚಾರದ ಬಗ್ಗೆ ಗಮನಹರಿಸುವುದಿಲ್ಲ. ಆದರಿಂದ ಮಕ್ಕಳನ್ನು ಹೊಂದಲು ಕಷ್ಟವಾಗಬಹುದು.
Infertility

ಧೂಮಪಾನ ಅಪಾಯಕಾರಿ

ಅನೇಕ ಮಹಿಳೆಯರು ಧೂಮಪಾನ ಮಾಡಲು ಪ್ರಾರಂಭಿಸುತ್ತಾರೆ. ಧೂಮಪಾನ ಮಾಡಿದಾಗ ದೇಹದ ಸ್ಥಿತಿಯು ಹದಗೆಡಲು ಪ್ರಾರಂಭಿಸುತ್ತದೆ. ಇದರಿಂದ AMH ಹಾರ್ಮೊನುಗಳು ಕಡಿಮೆಯಾಗಿ, ಅಂಡಾಣುಗಳ ಗುಣಮಟ್ಟ ಹದಗೆಡುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net