ಉಡುಗೊರೆ ನೀಡಲು ಇಲ್ಲಿವೆ ಸುಂದರ ಮತ್ತು ಅರ್ಥಪೂರ್ಣ ಸಸ್ಯಗಳು! Green Gifting

ಪ್ರೀತಿ ಬೆಳೆಯಲಿ ಗಿಡದಂತೆ
ಪ್ರೀತಿ ಬೆಳೆಯಲಿ ಗಿಡದಂತೆ
Published on
Green Gifting

ಪ್ರೀತಿ ಬೆಳೆಯಲಿ ಗಿಡದಂತೆ

ಉಡುಗೊರೆ ನೀಡಲು ಗಿಡಗಳು ಅತ್ಯಂತ ಅರ್ಥಪೂರ್ಣ ಮತ್ತು ಪರಿಸರ ಸ್ನೇಹಿ ಆಯ್ಕೆಯಾಗಿವೆ. ಮನೆಯ ಒಳಗಡೆ ಸುಲಭವಾಗಿ ಬೆಳೆಸಬಹುದಾದ ಮತ್ತು ನೋಡಲು ಅಂದವಾಗಿರುವ ಈ ಗಿಡಗಳು ಉಡುಗೊರೆಗೆ ಅತ್ಯಂತ ಸೂಕ್ತವಾಗಿದೆ.
Green Gifting

ಮನಿ ಪ್ಲಾಂಟ್

ಈ ಸಸ್ಯವನ್ನು ಅದೃಷ್ಟ ಮತ್ತು ಸಮೃದ್ಧಿಯ ಸಂಕೇತ ಎಂದು ನಂಬಲಾಗಿದೆ. ಇದನ್ನು ಮಣ್ಣಿನಲ್ಲಿ ಅಥವಾ ನೀರಿನ ಬಾಟಲಿಯಲ್ಲೂ ಬೆಳೆಸಬಹುದು. ಇದಕ್ಕೆ ಅತಿ ಹೆಚ್ಚು ಸೂರ್ಯನ ಬೆಳಕಿನ ಅಗತ್ಯವಿಲ್ಲ, ಆದ್ದರಿಂದ ಮನೆಯ ಒಳಗಡೆ ಇಡಲು ಇದು ಬೆಸ್ಟ್.
Green Gifting

ಪೀಸ್ ಲಿಲಿ

ಬಿಳಿಯ ಬಣ್ಣದ ಸುಂದರ ಹೂವುಗಳನ್ನು ಬಿಡುವ ಈ ಗಿಡ ಶಾಂತಿ ಮತ್ತು ಶುದ್ಧತೆಯ ಸಂಕೇತ. ಇದು ಗಾಳಿಯಲ್ಲಿರುವ ಕಲುಷಿತ ಅಂಶಗಳನ್ನು ತೆಗೆದುಹಾಕಿ ಗಾಳಿಯನ್ನು ಶುದ್ಧೀಕರಿಸುತ್ತದೆ. ಜೊತೆಗೆ ಕಡಿಮೆ ಬೆಳಕಿನಲ್ಲೂ ಇದು ಚೆನ್ನಾಗಿ ಬೆಳೆಯುತ್ತದೆ.
Green Gifting

ಸ್ನೇಕ್ ಪ್ಲಾಂಟ್

ಇದು ನೋಡಲು ತುಂಬಾ ಸ್ಟೈಲಿಶ್ ಆಗಿರುತ್ತದೆ ಮತ್ತು ಆಧುನಿಕ ಮನೆಗಳಿಗೆ ಒಪ್ಪುತ್ತದೆ. ಇದಕ್ಕೆ ತುಂಬಾ ಕಡಿಮೆ ನೀರು ಸಾಕು ಮತ್ತು ಇದು ರಾತ್ರಿಯ ವೇಳೆಯೂ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ.
Green Gifting

ಜೇಡ್ ಪ್ಲಾಂಟ್

ಇದನ್ನು 'ಅದೃಷ್ಟದ ಗಿಡ' ಎಂದು ಕರೆಯುತ್ತಾರೆ. ಇದರ ಎಲೆಗಳು ದಪ್ಪಗಿದ್ದು ಹಸಿರಾಗಿರುತ್ತವೆ. ಇದು ದೀರ್ಘಕಾಲ ಬಾಳಿಕೆ ಬರುವ ಗಿಡ. ಇದನ್ನು ಮೇಜಿನ ಮೇಲೆ ಅಥವಾ ಕಿಟಕಿಯ ಪಕ್ಕದಲ್ಲಿ ಇಡಬಹುದು. ಸ್ನೇಹ ಮತ್ತು ಹೊಸ ಆರಂಭಕ್ಕೆ ಇದು ಉತ್ತಮ ಉಡುಗೊರೆ.
Green Gifting

ಲಕ್ಕಿ ಬ್ಯಾಂಬೂ

ಚೀನಾ ಸಂಸ್ಕೃತಿಯ ಪ್ರಕಾರ ಇದು ಮನೆಗೆ ಧನಾತ್ಮಕ ಶಕ್ತಿಯನ್ನು ತರುತ್ತದೆ. ಇದನ್ನು ಬರಿ ನೀರಿನಲ್ಲಿ ಬೆಳೆಸಬಹುದು. ಗಾಜಿನ ಪಾತ್ರೆಯಲ್ಲಿ ಕೆಂಪು ರಿಬ್ಬನ್ ಕಟ್ಟಿ ನೀಡಿದರೆ ಉಡುಗೊರೆಯಾಗಿ ತುಂಬಾ ಆಕರ್ಷಕವಾಗಿ ಕಾಣುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net