ಹೃದಯದ ಆರೋಗ್ಯಕ್ಕೆ ವರದಾನ ಈರುಳ್ಳಿ ಎಲೆ! | Spring Onion

ರೋಗನಿರೋಧಕ ಶಕ್ತಿ ಹೆಚ್ಚಳ
ರೋಗನಿರೋಧಕ ಶಕ್ತಿ ಹೆಚ್ಚಳ
Published on
Health Benefits Of Spring Onion

ರೋಗನಿರೋಧಕ ಶಕ್ತಿ ಹೆಚ್ಚಳ

ಸ್ಪ್ರಿಂಗ್ ಆನಿಯನ್‌ನಲ್ಲಿ ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್‌ಗಳು ಹೇರಳವಾಗಿವೆ. ಇವು ದೇಹದ ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸಿ, ಶೀತ, ಕೆಮ್ಮು ಹಾಗೂ ಇತರ ಕಾಲೋಚಿತ ಸಾಂಕ್ರಾಮಿಕ ರೋಗಗಳಿಂದ ನಮ್ಮನ್ನು ರಕ್ಷಿಸುತ್ತವೆ.
Health Benefits Of Spring Onion

ಜೀರ್ಣಕ್ರಿಯೆಗೆ ಅತ್ಯುತ್ತಮ

ಇದರಲ್ಲಿ ಅಧಿಕ ಪ್ರಮಾಣದ ನಾರಿನಂಶ ಇದೆ. ಇದು ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ ಮತ್ತು ಮಲಬದ್ಧತೆಯಂತಹ ಸಮಸ್ಯೆಯನ್ನು ನಿವಾರಿಸುತ್ತದೆ. ಜೊತೆಗೆ ಕರಳು ಅಥವಾ ಜಠರದ ಆರೋಗ್ಯವನ್ನು ಕಾಪಾಡಲು ನೆರವಾಗುತ್ತದೆ.
Health Benefits Of Spring Onion

ಹೃದಯದ ಆರೋಗ್ಯಕ್ಕೆ ಉತ್ತಮ

ಸ್ಪ್ರಿಂಗ್ ಆನಿಯನ್‌ನಲ್ಲಿರುವ ವಿಟಮಿನ್ ಸಿ ಹಾಗೂ 'ಅಲಿಸಿನ್' ಎಂಬ ಸಂಯುಕ್ತವು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಿ, ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ತಪ್ಪಿಸುತ್ತದೆ.
Health Benefits Of Spring Onion

ಮೂಳೆಗಳನ್ನು ಬಲಪಡಿಸುತ್ತದೆ

ಇದರಲ್ಲಿ ವಿಟಮಿನ್ ಕೆ ಹೆಚ್ಚಾಗಿರುತ್ತದೆ. ಇದು ಮೂಳೆಗಳ ಸಾಂದ್ರತೆಯನ್ನು ಹೆಚ್ಚಿಸಲು ಹಾಗೂ ಮೂಳೆಗಳು ದುರ್ಬಲಗೊಳ್ಳುವುದನ್ನು ತಡೆಯಲು ಅತ್ಯಗತ್ಯ. ನಿಯಮಿತವಾಗಿ ಸ್ಪ್ರಿಂಗ್ ಆನಿಯನ್ ಸೇವಿಸುವುದರಿಂದ ಮೂಳೆಗಳು ಗಟ್ಟಿಯಾಗುತ್ತವೆ.
Health Benefits Of Spring Onion

ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣ

ಮಧುಮೇಹಿಗಳಿಗೆ ಸ್ಪ್ರಿಂಗ್ ಆನಿಯನ್ ದೇಹಕ್ಕೆ ಅತ್ಯಂತ ಲಾಭದಾಯಕ. ಇದರಲ್ಲಿರುವ ಸಲ್ಫರ್ ಸಂಯುಕ್ತಗಳು ಇನ್ಸುಲಿನ್ ಉತ್ಪಾದನೆಯನ್ನು ಉತ್ತೇಜಿಸಲು ಮತ್ತು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತವೆ.
Health Benefits Of Spring Onion

ಕಣ್ಣಿನ ಆರೋಗ್ಯ ಹಾಗೂ ದೃಷ್ಟಿ ಸುಧಾರಣೆ

ಇದರಲ್ಲಿರುವ ವಿಟಮಿನ್ ಎ ಹಾಗೂ ಕ್ಯಾರೋಟಿನಾಯ್ಡ್‌ಗಳು ಕಣ್ಣಿನ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದು ಕಣ್ಣಿನ ದೃಷ್ಟಿಶಕ್ತಿಯನ್ನು ಹೆಚ್ಚಿಸಲು ಹಾಗೂ ವಯಸ್ಸಾದಂತೆ ಬರುವ ಕಣ್ಣಿನ ಪೊರೆ ಅಥವಾ ದೃಷ್ಟಿ ಮಾಂದ್ಯತೆ ಸಮಸ್ಯೆಯನ್ನು ತಡೆಯಲು ನೆರವಾಗುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net