ಕೂದಲುಗಳ ರಕ್ಷಣೆಗಾಗಿ ಈ ಪೇಸ್ಟ್​ಗಳನ್ನು ಬಳಸಿ! | Hair treatment

ಮೊಸರಿನ ಹೇರ್​ ಪ್ಯಾಕ್
ಮೊಸರಿನ ಹೇರ್​ ಪ್ಯಾಕ್
Published on
Hair treatment

ಮೊಸರಿನ ಹೇರ್​ ಪ್ಯಾಕ್

ಮೊಸರನ್ನು ನೈಸರ್ಗಿಕವಾಗಿ ಹೇರ್​ ಕಂಡೀಷನ್​ ಎಂದು ಕರೆಯಲಾಗುತ್ತದೆ. ಇದರಲ್ಲಿ ಪ್ರೋಟೀನ್, ವಿಟಮಿನ್ ಮತ್ತು ಖನಿಜಗಳು ಸಮೃದ್ಧವಾಗಿದ್ದು, ಇದು ಕೂದಲನ್ನು ಒಳಗಿನಿಂದ ಬಲಪಡಿಸುತ್ತದೆ. ಮೊಸರನ್ನು ತಲೆಗೆ ಹಚ್ಚುವುದರಿಂದ ಕೂದಲು ಒಣಗಿದ, ಒಡೆದ ಭಾಗಗಳನ್ನು ಮೃದುವಾಗಿ ಮಾಡುತ್ತದೆ.
Hair treatment

ಮೆಂತ್ಯ ಪೇಸ್ಟ್

ಮೆಂತ್ಯವು ನಿಕೋಟಿನ್​ ಆಮ್ಲ ಮತ್ತು ಲೆಸಿಥಿನ್ ನಂತಹ ಪೋಷಕಾಂಶಗಳನ್ನು ಹೊಂದಿದ್ದು, ಇದು ಕೂದಲಿನ ಬೆಳವಣಿಗೆಯ ದರವನ್ನು ದ್ವಿಗುಣಗೊಳಿಸಲು ಸಹಾಯ ಮಾಡುತ್ತದೆ. ಮೆಂತ್ಯೆ ನೆನಸಿ ಅದನ್ನು ಮಿಕ್ಸಿ ಮಾಡಿ ಪೇಸ್ಟ್​ನ್ನು ಹಚ್ಚುವುದರಿಂದ ಇದು ತಲೆಯ ತುರಿಕೆ, ಹೊಟ್ಟು, ನೆತ್ತಿಯ ಮೇಲಿನ ಸಾಂಕ್ರಾಮಿಕ ಸಮಸ್ಯೆಗಳನ್ನು ದೂರ ಮಾಡುತ್ತದೆ.
Hair treatment

ತೆಂಗಿನ ಎಣ್ಣೆ

ತೆಂಗಿನ ಎಣ್ಣೆಯನ್ನು ಕೂದಲಿನ ಸ್ನೇಹಿತ ಎಂದು ಕರೆಯಲಾಗುತ್ತದೆ. ಇದರಲ್ಲಿ ಕೊಬ್ಬಿನಾಮ್ಲಗಳು ಮತ್ತು ವಿಟಮಿನ್​ ಇ ಇದ್ದು, ಕೂದಲನ್ನು ಆಳವಾಗಿ ಪೋಷಿಸುತ್ತದೆ. ಇದು ಕೂದಲಿನ ತೇವಾಂಶವನ್ನು ಉಳಿಸುಕೊಳ್ಳುತ್ತದೆ. ಸೀಳಿದ ತುದಿಗಳ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
Hair treatment

ಕ್ಯಾಸ್ಟರ್ ಆಯಿಲ್‌

ಕ್ಯಾಸ್ಟರ್ ಆಯಿಲ್ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದರಲ್ಲಿರುವ ರಿಸಿನೋಲಿಕ್ ಆಮ್ಲವು ನೆತ್ತಿಯನ್ನು ಪೋಷಿಸುತ್ತದೆ ಜೊತೆಗೆ ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ. ಈ ಎಣ್ಣೆಯನ್ನು ಬಳಸುವುದರಿಂದ ನೆತ್ತಿ ಪೋಷಣೆ ಮಾಡಲು ಸಹಾಯ ಮಾಡುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net