ಚಳಿಗಾಲದ ಆರೋಗ್ಯಕ್ಕೆ ಒಳ್ಳೆಯ ಪಾನೀಯಗಳು! Good drinks

ಬೆಸ್ಟ್ ಪಾನೀಯಗಳು
ಬೆಸ್ಟ್ ಪಾನೀಯಗಳು
Published on
Good drinks

ಬೆಸ್ಟ್ ಪಾನೀಯಗಳು

ಈ ಪಾನೀಯಗಳು ದೇಹಕ್ಕೆ ತೇವಾಂಶ ನೀಡುವುದರ ಜೊತೆಗೆ ವಿಟಮಿನ್‌ಗಳು, ಆಂಟಿ-ಆಕ್ಸಿಡೆಂಟ್‌ಗಳು, ಪ್ರೋಬಯಾಟಿಕ್ಸ್ ಮತ್ತು ಇತರ ಪೋಷಕಾಂಶಗಳನ್ನು ಒದಗಿಸುತ್ತವೆ. ಸಾಮಾನ್ಯವಾಗಿ ಸಕ್ಕರೆ ಇಲ್ಲದೆ ಅಥವಾ ಕಡಿಮೆಯಾಗಿ ಕುಡಿಯುವುದು ಉತ್ತಮ.
Good drinks

ನೀರು

ಪ್ರತಿದಿನ 3-4 ಲೀಟರ್​ ನೀರು ಕುಡಿಯುವುದರಿಂದ ಇದು ಆರೋಗ್ಯಕ್ಕೆ ಅತ್ಯುತ್ತಮವಾಗಿದೆ. ಇದು ದೇಹದ ಎಲ್ಲಾ ಕಾರ್ಯಗಳಿಗೆ ಅಗತ್ಯವಾಗಿದ್ದು, ಡಿಹೈಡ್ರೇಶನ್ ತಡೆಯುತ್ತದೆ ಜೊತೆಗೆ ಜೀರ್ಣಕ್ರಿಯೆ ಸುಧಾರಿಸುತ್ತದೆ. ಮೂತ್ರಪಿಂಡಗಳನ್ನು ಆರೋಗ್ಯವಾಗಿಡುತ್ತದೆ.
Good drinks

ನಿಂಬೆ ನೀರು

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರಿನಲ್ಲಿ ನಿಂಬೆ ರಸ, ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ಇದು ವಿಟಮಿನ್ C ಹೆಚ್ಚಿಸುವುದರ ಜೊತೆಗೆ ಜೀರ್ಣಕ್ರಿಯೆ ಉತ್ತೇಜಿಸುತ್ತದೆ. ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ ಮತ್ತು ಚರ್ಮಕ್ಕೆ ಒಳ್ಳೆಯದು.
Good drinks

ಹಸಿರು ಚಹಾ

ಇದರಲ್ಲಿ ಆಂಟಿ-ಆಕ್ಸಿಡೆಂಟ್‌ಗಳು ಸಮೃದ್ಧವಾಗಿದ್ದು, ಹೃದಯ ಆರೋಗ್ಯ, ಚಯಾಪಚಯ ಹೆಚ್ಚಿಸುವಿಕೆ, ಕ್ಯಾನ್ಸರ್ ತಡೆಗಟ್ಟುವ ಸಾಧ್ಯತೆ ಇದೆ. ಜೊತೆಗೆ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
Good drinks

ಮಜ್ಜಿಗೆ

ಪ್ರೋಬಯಾಟಿಕ್ಸ್ ಇರುವುದರಿಂದ ಸ್ನಾಯು ಆರೋಗ್ಯಕ್ಕೆ ಅತ್ಯುತ್ತಮವಾಗಿದೆ. ಜೀರ್ಣಕ್ರಿಯೆ ಸುಧಾರಿಸುತ್ತದೆ, ದೇಹವನ್ನು ತಂಪಾಗಿರಿಸುತ್ತದೆ, ಪ್ರೋಟೀನ್ ಮತ್ತು ಕ್ಯಾಲ್ಸಿಯಂ ನೀಡುತ್ತದೆ. ಉಪ್ಪು, ಜೀರಿಗೆ, ಕೊತ್ತಂಬರಿ ಸೇರಿಸಿ ಕುಡಿದರೆ ರುಚಿಯಾಗಿರುತ್ತದೆ.
Good drinks

ತೆಂಗಿನ ನೀರು

ನೈಸರ್ಗಿಕ ಎಲೆಕ್ಟ್ರೋಲೈಟ್‌ಗಳು ಇರುವುದರಿಂದ ಹೈಡ್ರೇಶನ್‌ಗೆ ಅತ್ಯುತ್ತಮವಾಗಿರುತ್ತದೆ. ಇದು ರಕ್ತದೊತ್ತಡ ನಿಯಂತ್ರಣ, ದೇಹದ ತೇವಾಂಶ, ಮೂತ್ರಪಿಂಡ ಆರೋಗ್ಯಕ್ಕೆ ಒಳ್ಳೆಯದು. ವ್ಯಾಯಾಮದ ನಂತರ ಅಥವಾ ಬೆಚ್ಚಗಿನ ದಿನಗಳಲ್ಲಿ ಕುಡಿಯಿರಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net