ಚಿನ್ನ ಮುಟ್ಟಿದ್ರೆ ಶಾಕ್! ಭಾರವಾದ ಬೆಳ್ಳಿ

ಹೀಗಿದೆ ನೋಡಿ ದರ ಹೆಚ್ಚಳದ ಹಾದಿ
ಹೀಗಿದೆ ನೋಡಿ ದರ ಹೆಚ್ಚಳದ ಹಾದಿ
Published on
gold and silver

ಹೀಗಿದೆ ನೋಡಿ ದರ ಹೆಚ್ಚಳದ ಹಾದಿ

ಚಿನ್ನದ ಬೆಲೆ ಏರಿಕೆಯ ನಾಗಾಲೋಟ ಮುಂದುವರಿದಿದೆ. ಸೋಮವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಂಗಾರದ ಬೆಲೆ 4 ಸಾವಿರ ರೂಪಾಯಿ ಏರಿಕೆ ಆಗುವ ಮೂಲಕ ಪ್ರತಿ 10 ಗ್ರಾಂ. ಚಿನ್ನದ ದರ ಗರಿಷ್ಠ 1,37,600 ರೂ.ಗೆ ತಲುಪಿದೆ.
gold and silver

1.50 ಲಕ್ಷ ರೂ. ಸನಿಹ

ಸೋಮವಾರದ ಅಂತ್ಯಕ್ಕೆ ದೆಹಲಿ ಮಾರುಕಟ್ಟೆಯಲ್ಲಿ 99.9 ಶುದ್ಧತೆಯ ಚಿನ್ನದ ದರ 1,33,600 ರೂ. ತಲುಪಿತ್ತು. ಅ.17ರಂದು ಪ್ರತಿ ಗಾಂ ಚಿನ್ನದ ಬೆಲೆ 3.200 ರೂ. ಹೆಚ್ಚಳವಾಗಿ 10 ಗ್ರಾಂಗೆ 1,34,800 ರೂ. ಮುಟ್ಟಿತ್ತು. 1.50 ಲಕ್ಷ ರೂ. ಸನಿಹ: ಕ್ರಿಸ್ವುಸ್ ಹಾಗೂ ಹೊಸ ವರ್ಷದ ಹಿನ್ನೆಲೆಯಲ್ಲಿ ಭಾರತದಲ್ಲಿ ಚಿನ್ನಕ್ಕೆ ಭಾರಿ ಬೇಡಿಕೆ ಇದೆ.
gold and silver

ದರ ಹೆಚ್ಚಳದ ಹಾದಿ

1. 5 ವರ್ಷ ಅವಧಿಯಲ್ಲಿ ಶೇ.60 ಹೆಚ್ಚಳ 2. 2025ರಲ್ಲಿ ಶೇ.39 ಏರಿಕೆ ಕಂಡ ಚಿನ್ನ 3. 2024ರಲ್ಲಿ ಶೇ.27ರಷ್ಟು ದರ ಏರಿಕೆ
gold and silver

ದಾಖಲೆ ಮೇಲೆ ದಾಖಲೆ

2025 ಜನವರಿ- ಅಕ್ಟೋಬರ್ ಅವಧಿ, ಫೆಬ್ರವರಿ- 85,300 (10 ಗ್ರಾಂ ದರ), ಮಾರ್ಚ್- 87,500 ರೂ.ಗೆ ಹೆಚ್ಚಳ, ಏಪ್ರಿಲ್ - 98,000 ರೂ. ಮುಟ್ಟಿದ ಚಿನ್ನ, ಜೂನ್- 1 ಲಕ್ಷ ರೂ.ಗಡಿ ದಾಟಿ ದಾಖಲೆ, ಆಗಸ್ಟ್- 1,05,170 ರೂ.ಗೆ ಹೆಚ್ಚಳ, ಅಕ್ಟೋಬರ್- 1,32,770 ರೂ.ಗೆ ಏರಿಕೆ, 15 ಡಿಸೆಂಬರ್ - 1,37,600 ರೂಪಾಯಿ
gold and silver

ಚಿನ್ನದ ಬೆಲೆ ಏರಿಕೆ ಏಕೆ?

ಭೌಗೋಳಿಕ ರಾಜಕೀಯದ ಉದ್ವಿಗ್ನತೆ ಜಾಗತಿಕ ಬೆಳವಣಿಗೆ ಮೇಲಿನ ಅನಿಶ್ಚಿತತೆ, ಕುಸಿತ ಕಾಣುತ್ತಿರುವ ಡಾಲರ್ ಮೌಲ್ಯ, ಕೇಂದ್ರ ಬ್ಯಾಂಕ್ಗಳಿಂದ ಖರೀದಿ ಹೆಚ್ಚಳ, ಭಾರತದಲ್ಲಿ ಬೇಡಿಕೆ ಹೆಚ್ಚುತ್ತಿರುವುದು, ಬಡ್ಡಿ ದರ ಕಡಿತದಿಂದ ಚಿನ್ನ ಆಕರ್ಷಣೆ, ಬಂಗಾರದ ಪೂರೈಕೆಯಲ್ಲಿನ ಕೊರತೆ
gold and silver

ಜಾಗತಿಕ ಉದ್ವಿಗ್ನತೆ ಕಾರಣ

ಚಿನ್ನ-ಬೆಳ್ಳಿ ದರ ತೀವ್ರ ಏರಿಕೆಯಾಗುತ್ತಿರುವುದಕ್ಕೆ ಜಾಗತಿಕ ರಾಜಕೀಯ ಉದ್ವಿಗ್ನತೆಯ ಹೆಚ್ಚಳ ಮತ್ತು ಜಾಗತಿಕ ಬೆಳವಣಿಗೆ ಕುರಿತ ಅನಿಶ್ಚಿತತೆಯೇ ಕಾರಣವೆಂದು ಹಣಕಾಸು ಸಚಿವಾಲಯ ಪ್ರತಿಪಾದಿಸಿದೆ. ಹೀಗಾಗಿ ವರ್ಷಾಂತ್ಯದ ಹೊತ್ತಿಗೆ ಚಿನ್ನದ ದರ 1.50 ಲಕ್ಷ ರೂ. ಸನಿಹ ಬಂದರೂ ಅಚ್ಚರಿ ಇಲ್ಲ ಎಂದು ಹೇಳಲಾಗುತ್ತಿದೆ.
gold and silver

ಬೆಳ್ಳಿಯೂ ಭಾರ

2024 ಡಿ.31ರಂದು ಬೆಳ್ಳಿ ಬೆಲೆ ಕೆಜಿಗೆ 89,700 ರೂ. ಗಳಿತ್ತು. ಇದೀಗ ಬೆಳ್ಳಿ ದರ 1,09,800 ರೂ. ಮುಟ್ಟಿದೆ. ಬಂಗಾರ ಮತ್ತು ಬೆಳ್ಳಿಯಂಥ ಅಮೂಲ್ಯ ಲೋಹಗಳ ದೇಶೀಯ ಧಾರಣೆಯನ್ನು ಅವುಗಳ ಪ್ರಸ್ತುತ ಅಂತಾ ರಾಷ್ಟ್ರೀಯ ದರಗಳು, ಡಾಲರ್ ವಿರುದ್ಧ ರೂಪಾಯಿ ವಿನಿಮಯ ಮೌಲ್ಯ ಮತ್ತು ಅನ್ವಯವಾಗುವಂಥ ತೆರಿಗೆ, ಸುಂಕ ನಿರ್ಣಯಿಸುತ್ತವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net