ರಾತ್ರಿಯ ರಾಣಿಯಂತೆ ಕಂಗೊಳಿಸುವ ಅಣಬೆಗಳ ಜಾದೂ ಬಗ್ಗೆ ಗೊತ್ತಾ ? ಇಲ್ಲಿದೆ ನೋಡಿ ಅಚ್ಚರಿಯ ಮಾಹಿತಿ... Glowing Mushrooms

ಪ್ರಕೃತಿಯ ಮಡಿಲಲ್ಲಿ ಅಡಗಿರುವ ಅಚ್ಚರಿಗಳಿಗೆ ಎಂದಿಗೂ ಕೊನೆಯಿಲ್ಲ, ಅದರಲ್ಲಿಯೂ ಕತ್ತಲಲ್ಲಿ ಸ್ವಯಂ ಬೆಳಗುವ ಹೊಳೆಯುವ ಅಣಬೆಗಳು ಪ್ರಪಂಚದ ವಿಸ್ಮಯಕಾರಿ ಸೌಂದರ್ಯಕ್ಕೆ ಉತ್ತಮ ಉದಾಹರಣೆಯಾಗಿವೆ. ತೇವಾಂಶಭರಿತ ಕಾಡುಗಳಲ್ಲಿ ನಿಗೂಢವಾಗಿ ಬೆಳೆಯುವ ಈ ಜೀವಿಗಳು, ವಿಶೇಷ ರಾಸಾಯನಿಕ ಕ್ರಿಯೆಯ ಮೂಲಕ ರಾತ್ರಿಯ ಕತ್ತಲಲ್ಲಿ ಹಸಿರು ಬೆಳಕನ್ನು ಚೆಲ್ಲುತ್ತವೆ. ಸಾಮಾನ್ಯ ಮರಗಳ ಕೊಳೆತ ಕಾಂಡಗಳ ಮೇಲೆ ಗುಂಪು ಗುಂಪಾಗಿ ಕಂಗೊಳಿಸುವ ಈ ಪುಟ್ಟ ಅಣಬೆಗಳ ಲೋಕವು ಮಂತ್ರಮುಗ್ಧಗೊಳಿಸುವಂತಿದೆ. ವಿಜ್ಞಾನಿಗಳನ್ನೂ ಹುಬ್ಬೇರಿಸುವಂತೆ ಮಾಡಿರುವ ಈ ಜೀವಜ್ಯೋತಿಗಳು ಪ್ರಕೃತಿಯ ಅತ್ಯಂತ ಅಪರೂಪದ ಹಾಗೂ ರಮಣೀಯ ದೃಶ್ಯಗಳಲ್ಲಿ ಒಂದಾಗಿವೆ. Glowing Mushrooms
ಕಂಗೊಳಿಸುವ ಅಣಬೆಗಳ ಜಾದೂ ಬಗ್ಗೆ ಗೊತ್ತಾ ?
ಕಂಗೊಳಿಸುವ ಅಣಬೆಗಳ ಜಾದೂ ಬಗ್ಗೆ ಗೊತ್ತಾ ?WEB
Published on: 

ಕತ್ತಲಿನಲ್ಲಿ ಹಸಿರು ಬೆಳಕು ಚೆಲ್ಲುವ ಅಣಬೆ- Mycena chlorophos

Mycena chlorophos
Mycena chlorophosWEB

ಈ ಅಣಬೆ ನೋಡಲು ಸಾಮಾನ್ಯವಾಗಿ ಕಂಡರೂ ಕತ್ತಲಿನಲ್ಲಿ ಹಸಿರು ಬಣ್ಣದ ಬೆಳಕನ್ನು ಹೊರಸೂಸುತ್ತದೆ. ವಿಶೇಷವಾಗಿ ತೇವಾಂಶ ಹೆಚ್ಚಿರುವ ಕಾಡು ಪ್ರದೇಶಗಳಲ್ಲಿ ಇವು ಬೆಳೆಯುತ್ತವೆ. ಇದರ ಟೋಪಿ ಮತ್ತು ಕಾಂಡದ ಭಾಗದಲ್ಲಿ ಹೊಳಪು ಕಾಣಿಸಿಕೊಳ್ಳಬಹುದು. ಜೀವಕೋಶಗಳಲ್ಲಿನ ವಿಶೇಷ ರಾಸಾಯನಿಕ ಕ್ರಿಯೆಯಿಂದ ಈ ಬೆಳಕು ಉತ್ಪತ್ತಿಯಾಗುತ್ತದೆ. ಪ್ರಕೃತಿಯಲ್ಲಿನ ಅತ್ಯಂತ ಆಕರ್ಷಕ ಹೊಳೆಯುವ ಅಣಬೆಗಳಲ್ಲಿ ಇದೂ ಒಂದು.

ದೆವ್ವದ ಅಣಬೆ- Gost mashroom

Gost mashroom
Gost mashroomWEB

ಹೆಸರಿನಂತೆಯೇ ಈ ಅಣಬೆ ಕೂಡ ನೋಡಲು ವಿಚಿತ್ರವಾಗಿರುತ್ತದೆ. ಆಸ್ಟ್ರೇಲಿಯಾದಲ್ಲಿ ಕಂಡುಬರುವ ಈ ಅಣಬೆಯ ವೈಜ್ಞಾನಿಕ ಹೆಸರು ಓಂಫಲೋಟಸ್ ನಿಡಿಫಾರ್ಮಿಸ್. ಇದರ ಬಿಳಿ ಅಥವಾ ಕ್ರೀಮ್ ಬಣ್ಣದ ಟೋಪಿ ಕತ್ತಲಿನಲ್ಲಿ ಹಸಿರು ಹೊಳಪನ್ನು ನೀಡುತ್ತದೆ. ಮರಗಳ ಕಾಂಡ ಮತ್ತು ಕೊಳೆತ ಮರದ ತುಂಡುಗಳ ಮೇಲೆ ಇದು ಬೆಳೆಯುತ್ತದೆ. ಇದರ ಆಕರ್ಷಕ ನೋಟದ ಹೊರತಾಗಿಯೂ ಇದು ವಿಷಕಾರಿಯಾಗಿದ್ದು, ಸೇವನೆಗೆ ಯೋಗ್ಯವಲ್ಲ

ಸಣ್ಣ ಅಣಬೆಯ ದೊಡ್ಡ ಬೆಳಕಿನ ರಹಸ್ಯ-panellus stipticus

panellus stipticus
panellus stipticusWEB

ಗಾತ್ರದಲ್ಲಿ ಚಿಕ್ಕದಾಗಿರುವ ಈ ಅಣಬೆ ತನ್ನ ಬೆಳಕು ಉತ್ಪಾದಿಸುವ ಸಾಮರ್ಥ್ಯದಿಂದ ಗಮನ ಸೆಳೆಯುತ್ತದೆ. ಸಾಮಾನ್ಯವಾಗಿ ಸತ್ತ ಮರದ ತುಂಡುಗಳು ಮತ್ತು ಕೊಳೆತ ಕಟ್ಟಿಗೆಯ ಮೇಲೆ ಗುಂಪು ಗುಂಪಾಗಿ ಬೆಳೆಯುತ್ತದೆ. ಇದರ ಬೆಳಕು ಹಸಿರು ಮಿಶ್ರಿತ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ಎಲ್ಲ ಪ್ರದೇಶಗಳಲ್ಲಿನ ಈ ಅಣಬೆಗಳು ಒಂದೇ ರೀತಿಯಲ್ಲಿ ಹೊಳೆಯುವುದಿಲ್ಲ. ಕತ್ತಲಿನಲ್ಲಿ ಇವುಗಳ ಹೊಳಪನ್ನು ಗಮನಿಸುವುದು ಪ್ರಕೃತಿಯ ಅದ್ಭುತ ಅನುಭವವಾಗಿದೆ.

ಗುಂಪಾಗಿ ಬೆಳೆಯುವ ಹೊಳೆಯುವ ಅಣಬೆ-Filoboletus manipularis

Filoboletus manipularis
Filoboletus manipularisWEB

ಈ ಅಣಬೆ ಉಷ್ಣವಲಯದ ಕಾಡುಗಳಲ್ಲಿ ಕಂಡುಬರುವ ವಿಶೇಷ ಪ್ರಭೇದವಾಗಿದೆ. ಸಾಮಾನ್ಯವಾಗಿ ಕೊಳೆತ ಮರದ ಕಾಂಡಗಳ ಮೇಲೆ ಗುಂಪು ಗುಂಪಾಗಿ ಬೆಳೆಯುತ್ತದೆ. ಇದರ ಕೆಲವು ಭಾಗಗಳು ಕತ್ತಲಿನಲ್ಲಿ ಹಸಿರು ಬಣ್ಣದ ಬೆಳಕನ್ನು ಹೊರಸೂಸುತ್ತವೆ. ತೇವಾಂಶವಿರುವ ಕಾಡು ಪರಿಸರ ಇವುಗಳ ಬೆಳವಣಿಗೆಗೆ ಅನುಕೂಲಕರವಾಗಿದೆ. ಒಂದೇ ಮರದ ತುಂಡಿನ ಮೇಲೆ ಹಲವು ಅಣಬೆಗಳು ಹೊಳೆಯುವ ದೃಶ್ಯ ನೋಡುಗರಲ್ಲಿ ಅಚ್ಚರಿ ಮೂಡಿಸುತ್ತದೆ.

ಸದಾ ಹೊಳೆಯುವ ಪುಟ್ಟ ಅಣಬೆ- Mycena luxaeterna

Mycena luxaeterna
Mycena luxaeternaWEB

ಮೈಸೀನಾ ಲಕ್ಸ್-ಎಟರ್ನಾ ಎಂಬುದು ಬ್ರೆಜಿಲ್‌ನ ಮಳೆಕಾಡುಗಳಲ್ಲಿ ಕಂಡುಬರುವ ಒಂದು ಅಪರೂಪದ ಮತ್ತು ವಿಸ್ಮಯಕಾರಿ ಅಣಬೆ ತಳಿಯಾಗಿದೆ. ಈ ಅಣಬೆಯ ವಿಶೇಷತೆಯೆಂದರೆ ಇದು ಕತ್ತಲಿನಲ್ಲಿ ನಿರಂತರವಾಗಿ ಹಸಿರು ಮಿಶ್ರಿತ ಹಳದಿ ಬಣ್ಣದ ಬೆಳಕನ್ನು ಹೊರಸೂಸುತ್ತದೆ, ಈ ಪ್ರಕ್ರಿಯೆಯನ್ನು ಜೀವಜ್ಯೋತಿ ಎಂದು ಕರೆಯುತ್ತಾರೆ. ಇದರ ಹೆಸರು 'ಲಕ್ಸ್-ಎಟರ್ನಾ' ಎಂದರೆ ಲ್ಯಾಟಿನ್ ಭಾಷೆಯಲ್ಲಿ ಶಾಶ್ವತ ಬೆಳಕು ಎಂದರ್ಥ,. ಈ ಅಣಬೆಯು ತಿನ್ನಲು ಯೋಗ್ಯವಲ್ಲ ಮತ್ತು ಇದರ ಜೀವಜ್ಯೋತಿ ಗುಣವು ವಿಜ್ಞಾನಿಗಳಿಗೆ ಅಧ್ಯಯನದ ಪ್ರಮುಖ ವಿಷಯವಾಗಿದೆ.