ಸೌಂದರ್ಯದಿಂದ ಆರೋಗ್ಯದವರೆಗೆ: ಬೆಳ್ಳುಳ್ಳಿ ಸಿಪ್ಪೆಯ ಜಾದೂ ನೋಡಿ! Garlic Peel Benefits

ಬೆಳ್ಳುಳ್ಳಿ ಸಿಪ್ಪೆ
ಬೆಳ್ಳುಳ್ಳಿ ಸಿಪ್ಪೆ
Published on
Garlic Peel Benefits

ಬೆಳ್ಳುಳ್ಳಿ ಸಿಪ್ಪೆ

ಬೆಳ್ಳುಳ್ಳಿಯನ್ನು ಪ್ರತಿಯೊಬ್ಬರ ಅಡುಗೆಮನೆಯಲ್ಲಿ ಬಳಸಲಾಗುತ್ತದೆ, ಆದರೆ ಅದರ ಸಿಪ್ಪೆಯನ್ನು ಅನಗತ್ಯ ಎಂದು ಎಸೆದುಬಿಡಲಾಗುತ್ತದೆ. ನಿಜಕ್ಕಾದರೆ ಬೆಳ್ಳುಳ್ಳಿ ಸಿಪ್ಪೆಯಲ್ಲಿ ಅಂಟಿಆಕ್ಸಿಡೆಂಟ್‌ಗಳು ಹಾಗೂ ಔಷಧೀಯ ಗುಣಗಳು ಹೇರಳವಾಗಿದ್ದು, ಇದನ್ನು ಅನೇಕ ರೀತಿಯಲ್ಲಿ ಬಳಸಬಹುದು.
Garlic Peel Benefits

ರೋಗನಿರೋಧಕ ಶಕ್ತಿ ಹೆಚ್ಚಳ

ಬೆಳ್ಳುಳ್ಳಿ ಸಿಪ್ಪೆಯಲ್ಲಿ ವಿಟಮಿನ್ A, C ಮತ್ತು ಫ್ಲೇವನಾಯ್ಡ್‌ಗಳು ಸಮೃದ್ಧವಾಗಿವೆ. ಇದನ್ನು ನೀರಿನಲ್ಲಿ ಕುದಿಸಿ ಕಷಾಯ ಮಾಡಿ ಕುಡಿಯುವುದರಿಂದ ಶೀತ, ಕೆಮ್ಮು ಉಪಶಮನವಾಗಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
Garlic Peel Benefits

ಚರ್ಮ ಹಾಗೂ ಕೇಶ ರಕ್ಷಣೆ

ಸಿಪ್ಪೆಯನ್ನು ನೀರಿನಲ್ಲಿ ಕುದಿಸಿ, ಆ ನೀರಿನಿಂದ ಮುಖ ತೊಳೆದರೆ ಮೊಡವೆ ಮತ್ತು ಚರ್ಮದ ಅಲರ್ಜಿ ಕಡಿಮೆಯಾಗುತ್ತದೆ. ಈ ನೀರನ್ನು ತಲೆಗೂದಲಿಗೆ ಬಳಸುವುದರಿಂದ ತಲೆಹೊಟ್ಟು ಕಡಿಮೆಯಾಗುತ್ತದೆ.
Garlic Peel Benefits

ಅಡುಗೆಯ ರುಚಿ ಹೆಚ್ಚಿಸಲು

ಸೂಪ್, ರಸಂ ಅಥವಾ ತರಕಾರಿ ಸ್ಟಾಕ್ ತಯಾರಿಸುವಾಗ ಬೆಳ್ಳುಳ್ಳಿ ಸಿಪ್ಪೆಯನ್ನು ಸೇರಿಸಿ ಕುದಿಸಿ, ನಂತರ ಸೋಸುವುದರಿಂದ ಅಡುಗೆಗೆ ಉತ್ತಮ ಸುವಾಸನೆ ಹಾಗೂ ಪೋಷಕಾಂಶಗಳು ಸಿಗುತ್ತವೆ.
Garlic Peel Benefits

ಗಿಡಗಳಿಗೆ ನೈಸರ್ಗಿಕ ಗೊಬ್ಬರ

ಬೆಳ್ಳುಳ್ಳಿ ಸಿಪ್ಪೆಯನ್ನು ಗಿಡಗಳ ಮಣ್ಣಿಗೆ ಸೇರಿಸುವುದರಿಂದ ಅಥವಾ ನೀರಿನಲ್ಲಿ ನೆನೆಸಿ ಆ ನೀರನ್ನು ಗಿಡಗಳಿಗೆ ಸಿಂಪಡಿಸುವುದರಿಂದ ಕೀಟಬಾಧೆ ತಡೆಯಬಹುದು.
Garlic Peel Benefits

ಕೀಟನಾಶಕವಾಗಿ ಬಳಕೆ

ಸಿಪ್ಪೆಯ ಬಲವಾದ ವಾಸನೆಯು ಸೊಳ್ಳೆಗಳು ಮತ್ತು ಸಣ್ಣ ಕ್ರಿಮಿಕೀಟಗಳನ್ನು ದೂರವಿಡಲು ಸಹಕಾರಿಯಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net