ಪದೇ ಪದೇ ತಲೆಸುತ್ತಾ? ತಕ್ಷಣ ಶಮನಕ್ಕೆ ಇಲ್ಲಿದೆ ಸರಳ ಟಿಪ್ಸ್! Dizziness Remedies

ತಲೆಸುತ್ತು
ತಲೆಸುತ್ತು
Published on
Dizziness Remedies

ತಲೆಸುತ್ತು

ತಲೆಸುತ್ತು ಸಾಮಾನ್ಯ ಎನಿಸಿದರೂ, ಪದೇ ಪದೇ ಕಾಣಿಸಿಕೊಂಡರೆ ದೇಹ ನೀಡುವ ಅಪಾಯದ ಮುನ್ಸೂಚನೆಯಾಗಿರಬಹುದು. ಇದನ್ನು ನಿರ್ಲಕ್ಷಿಸದೆ ತಕ್ಷಣ ಶಮನಗೊಳಿಸಲು ಮತ್ತು ತಡೆಗಟ್ಟಲು ಈ 5 ಸರಳ ಹಾಗೂ ಪರಿಣಾಮಕಾರಿ ಸಲಹೆಗಳನ್ನು ಅನುಸರಿಸಿ:
Dizziness Remedies

ಸಾಕಷ್ಟು ನೀರು ಕುಡಿಯಿರಿ

ದೇಹದಲ್ಲಿ ನಿರ್ಜಲೀಕರಣ ಉಂಟಾದಾಗ ರಕ್ತದೊತ್ತಡ ಕಡಿಮೆಯಾಗಿ ತಲೆಸುತ್ತು ಬರಬಹುದು. ದಿನಕ್ಕೆ ಕನಿಷ್ಠ 8-10 ಲೋಟ ನೀರು ಮತ್ತು ಎಳೆನೀರು, ಮಜ್ಜಿಗೆಯಂತಹ ದ್ರವಾಹಾರ ಸೇವಿಸಿ.
Dizziness Remedies

ದಿಢೀರ್ ಚಲನೆ ಬೇಡ

ಕುಳಿತಲ್ಲಿಂದ ಅಥವಾ ಮಲಗಿದಲ್ಲಿಂದ ತಕ್ಷಣವೇ ಥಟ್ಟನೆ ಏಳಬೇಡಿ. ಕೆಲ ಸೆಕೆಂಡುಗಳ ಕಾಲ ತಡೆಯಿಟ್ಟು, ನಿಧಾನವಾಗಿ ಏಳುವುದು ರಕ್ತಸಂಚಾರ ಸಮತೋಲನದಲ್ಲಿರಲು ನೆರವಾಗುತ್ತದೆ.
Dizziness Remedies

ಸಮತೋಲಿತ ಆಹಾರ ಮತ್ತು ಸಕ್ಕರೆ ಪ್ರಮಾಣ

ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆಯಾದಾಗ ತಲೆತಿರುಗುವುದು ಸಹಜ. ಸಮಯಕ್ಕೆ ಸರಿಯಾಗಿ ಪೌಷ್ಟಿಕ ಆಹಾರ ಸೇವಿಸಿ. ಹಣ್ಣುಗಳು, ಒಣಹಣ್ಣುಗಳನ್ನು ದಿನನಿತ್ಯದ ಆಹಾರದಲ್ಲಿ ಸೇರಿಸಿ.
Dizziness Remedies

ಶುಂಟಿ ಮತ್ತು ನಿಂಬೆ ರಸ

ತಲೆಸುತ್ತು ಬಂದಂತೆ ಭಾಸವಾದಾಗ ಸಣ್ಣ ತುಂಡು ಹಸಿ ಶುಂಟಿ ಜಗಿಯುವುದು ಅಥವಾ ಉಪ್ಪು-ಸಕ್ಕರೆ ಬೆರೆಸಿದ ನಿಂಬೆ ಪಾನಕ ಕುಡಿಯುವುದು ತಕ್ಷಣದ ಶಮನ ನೀಡುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net