ಮಳೆಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ತಪ್ಪಿಸಬೇಕಾದ ಆಹಾರಗಳು! Monsoon Health

ಮಳೆಗಾಲದಲ್ಲಿ ಆಹಾರ ಸೇವನೆ
ಮಳೆಗಾಲದಲ್ಲಿ ಆಹಾರ ಸೇವನೆ
Published on
Monsoon Health

ಮಳೆಗಾಲದಲ್ಲಿ ಆಹಾರ ಸೇವನೆ

ಮಳೆಗಾಲವು ತಂಪಾದ ವಾತಾವರಣ ತಂದರೂ, ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳ ಸಂತಾನೋತ್ಪತ್ತಿಗೆ ಸೂಕ್ತ ಸಮಯವಾಗಿದೆ. ಈ ಋತುವಿನಲ್ಲಿ ಜೀರ್ಣಕ್ರಿಯೆ ಮಂದವಾಗುವುದರಿಂದ, ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಕೆಲವು ಆಹಾರಗಳಿಂದ ದೂರವಿರುವುದು ಒಳ್ಳೆಯದು.
Monsoon Health

ಬೀದಿಬದಿ ಸಿಗುವ ಕರಿದ ತಿಂಡಿಗಳು

ಮಳೆ ಬಿದ್ದಾಗ ಸಮೋಸ, ಬಜ್ಜಿಯಂತಹ ಕರಿದ ತಿಂಡಿಗಳನ್ನು ತಿನ್ನಲು ಮನಸ್ಸಾಗುತ್ತದೆ. ಆದರೆ, ಮಳೆಗಾಲದಲ್ಲಿ ಜೀರ್ಣಕ್ರಿಯೆ ನಿಧಾನವಾಗುವುದರಿಂದ ಅತಿಯಾದ ಎಣ್ಣೆಯುಕ್ತ ಆಹಾರಗಳು ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್ ಮತ್ತು ಜೀರ್ಣಾಂಗವ್ಯೂಹದ ಸಮಸ್ಯೆಗಳಿಗೆ ಕಾರಣವಾಗುತ್ತವೆ.
Monsoon Health

ಹಸಿ ಸೊಪ್ಪು-ತರಕಾರಿಗಳು

ಪಾಲಕ್, ಎಲೆಕೋಸು ಮುಂತಾದ ಹಸಿ ತರಕಾರಿಗಳಲ್ಲಿ ಮಳೆಗಾಲದಲ್ಲಿ ತೇವಾಂಶ ಹೆಚ್ಚಿದ್ದು, ಸೂಕ್ಷ್ಮಾಣುಜೀವಿಗಳು ಮತ್ತು ಹುಳುಗಳು ಅಡಗಿರುವ ಸಾಧ್ಯತೆ ಹೆಚ್ಚು. ಇವುಗಳನ್ನು ಹಸಿಯಾಗಿ ತಿನ್ನದೆ, ಚೆನ್ನಾಗಿ ತೊಳೆದು ಬೇಯಿಸಿ ಸೇವಿಸಬೇಕು.
Monsoon Health

ಕತ್ತರಿಸಿಟ್ಟ ಹಣ್ಣುಗಳು

ರಸ್ತೆಬದಿಯಲ್ಲಿ ತೆರೆದಿಟ್ಟು ಮಾರಾಟ ಮಾಡುವ ಕತ್ತರಿಸಿದ ಹಣ್ಣುಗಳು ಮತ್ತು ಸಲಾಡ್‌ಗಳನ್ನು ತಿನ್ನಬೇಡಿ. ಗಾಳಿಯಲ್ಲಿರುವ ಬ್ಯಾಕ್ಟೀರಿಯಾಗಳು ಇವುಗಳಿಗೆ ಬೇಗನೆ ಅಂಟಿಕೊಂಡು ಫುಡ್ ಪಾಯ್ಸನಿಂಗ್ ಮತ್ತು ಅತಿಸಾರಕ್ಕೆ ದಾರಿ ಮಾಡಿಕೊಡುತ್ತವೆ.
Monsoon Health

ಸಮುದ್ರಾಹಾರ

ಮಳೆಗಾಲವು ಮೀನು ಮತ್ತು ಇತರ ಸಮುದ್ರ ಜೀವಿಗಳ ಸಂತಾನೋತ್ಪತ್ತಿಯ ಸಮಯ. ಈ ಸಮಯದಲ್ಲಿ ಸಿಗುವ ಸಮುದ್ರಾಹಾರಗಳು ಬೇಗನೆ ಹಾಳಾಗುತ್ತವೆ ಮತ್ತು ವಾಂತಿ, ಹೊಟ್ಟೆನೋವಿನಂತಹ ಅಲರ್ಜಿಗಳನ್ನು ಉಂಟುಮಾಡಬಹುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net