ಸುಕ್ಕು ಚರ್ಮಕ್ಕೆ ಬೈ ಬೈ ಹೇಳಿ ! ಈ ಸಹಜ ತೈಲಗಳು ನಿಮ್ಮನ್ನು 10 ವರ್ಷ ಹಿಂದಕ್ಕೆ ಕರೆದೊಯ್ಯುತ್ತವೆ..Beauty secrete

ಅಲೋವೆರಾ ಜೆಲ್
ಅಲೋವೆರಾ ಜೆಲ್
Published on
Beauty secrete

ಅಲೋವೆರಾ ಜೆಲ್

ಅಲೋವೆರಾ ಜೆಲ್​ ಚರ್ಮಕ್ಕೆ ಅಗತ್ಯವಿರುವ ಜೀವಸತ್ವಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ನೀಡುತ್ತವೆ. ಆದರಿಂದ ಅಲೋವೆರಾ ಜೆಲ್​ನನ್ನು ನೇರವಾಗಿ ಮುಖಕ್ಕೆ ಹಚ್ಚಿ 15-20 ನಿಮಿಷ ಬಿಟ್ಟು ತಣ್ಣೀರಿನಲ್ಲಿ ತೊಳೆಯುವುದರಿಂದ ಚರ್ಮವನ್ನು ತೇವಗೊಳಿಸುತ್ತದೆ. ಇದು ಮುಖದ ಉರಿಯೂತವನ್ನು ಕಡಿಮೆ ಮಾಡಿ. ಚರ್ಮಕ್ಕೆ ಹೊಳಪನ್ನು ನೀಡಲು ಸಹಾಯ ಮಾಡುತ್ತದೆ.
Beauty secrete

ಮೊಸರು

ಮೊಸರಿನಲ್ಲಿ ಲ್ಯಾಕ್ಟಿಕ್ ಆಮ್ಲವಿದ್ದು, ಇದು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಿ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಆದರಿಂದ ಮೊಸರನ್ನು ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಿರಿ. ಇದು ಚರ್ಮವನ್ನು ಪೋಷಿಸುವುದರ ಜೊತೆಗೆ ಹೊಳೆಯುವಂತೆ ಮಾಡುತ್ತದೆ. ಪ್ರತಿನಿತ್ಯ ಇದನ್ನು ಬಳಸುವುದರಿಂದ ಚರ್ಮವು ತೇವಾಂಶವನ್ನು ಉಳಿಸಿಕೊಳ್ಳುತ್ತದೆ.
Beauty secrete

ಮುಲ್ತಾನಿ ಮಿಟ್ಟಿ

ಮುಲ್ತಾನಿ ಮಿಟ್ಟಿ ಚರ್ಮವನ್ನು ಬಿಗಿಗೊಳಿಸಲು ಬಳಸುವಂತಹ ಸೌಂದರ್ಯವರ್ಧಕವಾಗಿದೆ. ಇದರಲ್ಲಿರುವ ಖನಿಜಗಳು ಚರ್ಮದ ಪೋಷಣೆ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ಈ ಪುಡಿಯನ್ನು ಗುಲಾಬಿ ನೀರಿನೊಂದಿಗೆ ಹಚ್ಚಿ ಸುಮಾರು 20 ನಿಮಿಷಗಳ ಕಾಲ ಬಿಟ್ಟು ತಣ್ಣೀರಿನಿಂದ ತೊಳೆಯಿರಿ. ಇದು ಚರ್ಮದಲ್ಲಿರುವ ರಂಧ್ರವನ್ನು ಸ್ವಚ್ಛವಾಗಿರುವಂತೆ ಮಾಡುತ್ತದೆ. ಹಾಗೆಯೇ ಚರ್ಮವನ್ನು ಕಾಂತಿಯುತವಾಗಿ
Beauty secrete

ಸೌತೆಕಾಯಿ ಮತ್ತು ಟೊಮೆಟೊ

ಸೌತೆಕಾಯಿಯಲ್ಲಿ ಬಹಳಷ್ಟು ನೀರು ಇರುವುದರಿಂದ ಚರ್ಮವು ತೇವಾಂಶದಿಂದ ಕೂಡಿರುತ್ತದೆ. ಹಾಗಾಗಿ ಸೌತೆಕಾಯಿಯನ್ನು ಮಿಕ್ಸಿ ಮಾಡಿ ಅದರ ರಸವನ್ನು ಚರ್ಮಕ್ಕೆ ಸಿಂಪಡಿಸಿ 20 ನಿಮಿಷಗಳ ಕಾಲ ಬಿಟ್ಟು ತೊಳೆಯಿರಿ. ಇದು ಸೂರ್ಯನ ಕಿರಣಗಳಿಂದ ರಕ್ಷಿಸುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net