ಈ ಟ್ರಿಕ್ಸ್ ಫಾಲೋ ಮಾಡಿದರೆ ಬೇಸಿಗೆಯಲ್ಲಿ ಮನೆ ಕೂಲ್ ಕೂಲ್​! Summer Cooling Tips

ಬೇಸಿಗೆಯ ವಾತಾವರಣ
ಬೇಸಿಗೆಯ ವಾತಾವರಣ
Published on
Summer Cooling Tips

ಬೇಸಿಗೆಯ ವಾತಾವರಣ

ಬೇಸಿಗೆಯ ತೀವ್ರತರವಾದ ಬಿಸಿಲಿನಲ್ಲಿ ಮನೆಯ ಒಳಗಿನ ಪರಿಸ್ಥಿತಿ ತೀರಾ ಹೈರಾಣಾಗಿಸುತ್ತದೆ. ಕಾಂಕ್ರೀಟ್ ಗೋಡೆಗಳು ಮತ್ತು ತಾರಸಿ ದಿನವಿಡೀ ಶಾಖವನ್ನು ಹೀರಿಕೊಂಡು, ರಾತ್ರಿಯಾದರೂ ಮನೆಯನ್ನು ಒಲೆಯಿಂದ ಉರಿಯುವಂತೆ ಬಿಸಿ ಮಾಡಿಡುತ್ತವೆ. ನಿಮ್ಮ ಮನೆಯ ಒಳಗಿನ ವಾತಾವರಣವನ್ನು ಕೂಲ್ ಆಗಿಡಲು ಇವುಗಳನ್ನು ಬಳಸಿ.
Summer Cooling Tips

ಮಣ್ಣಿನ ಪಾತ್ರೆ ಮತ್ತು ಮಡಕೆಗಳು

ಮಣ್ಣಿಗೆ ನೈಸರ್ಗಿಕವಾಗಿ ಶಾಖವನ್ನು ಹೀರಿಕೊಳ್ಳುವ ಗುಣವಿದೆ. ಲಿವಿಂಗ್ ರೂಮ್‌ನಲ್ಲಿ ಅಗಲವಾದ ಮಣ್ಣಿನ ಪಾತ್ರೆಯಲ್ಲಿ ನೀರು ತುಂಬಿಸಿ ಹೂವುಗಳನ್ನು ಇಡುವುದರಿಂದ ಗಾಳಿಯಲ್ಲಿ ತೇವಾಂಶ ಹೆಚ್ಚಿ ಕೋಣೆ ತಂಪಾಗುತ್ತದೆ.
Summer Cooling Tips

ಸೆಣಬಿನ ಪರದೆಗಳು

ಕಿಟಕಿಗಳಿಗೆ ಪ್ಲಾಸ್ಟಿಕ್ ಪರದೆಗಳ ಬದಲಾಗಿ ನೈಸರ್ಗಿಕ ಖಸ್ ಅಥವಾ ಸೆಣಬಿನ ಪರದೆಗಳನ್ನು ಬಳಸಿ. ಮಧ್ಯಾಹ್ನ ಇವುಗಳ ಮೇಲೆ ಸ್ವಲ್ಪ ನೀರು ಚಿಮುಕಿಸಿದರೆ, ಹೊರಗಿನ ಬಿಸಿ ಗಾಳಿಯು ತಂಪಾದ ಮತ್ತು ಸುಗಂಧಭರಿತ ಗಾಳಿಯಾಗಿ ಮನೆಯೊಳಗೆ ಬರುತ್ತದೆ.
Summer Cooling Tips

ಹತ್ತಿ ಬೆಡ್‌ಶೀಟ್‌ಗಳು

ಬೇಸಿಗೆಯಲ್ಲಿ ಕೇವಲ ತಿಳಿ ಬಣ್ಣದ 100% ಹತ್ತಿ ಬಟ್ಟೆಯ ಬೆಡ್‌ಶೀಟ್ ಮತ್ತು ಸೋಫಾ ಕವರ್‌ಗಳನ್ನು ಬಳಸಿ. ಇವು ಶಾಖವನ್ನು ಹಿಡಿದಿಟ್ಟುಕೊಳ್ಳದೆ ಬೆಳಕನ್ನು ಪ್ರತಿಫಲಿಸುತ್ತವೆ.
Summer Cooling Tips

ಇಂಡೋರ್​ ಸಸ್ಯಗಳು

ಅಲೋವೆರಾ, ಸ್ನೇಕ್ ಪ್ಲಾಂಟ್ ಮತ್ತು ಅರೆಕಾ ಪಾಮ್‌ನಂತಹ ಗಿಡಗಳು 'ಟ್ರಾನ್ಸ್‌ಪಿರೇಶನ್' ಪ್ರಕ್ರಿಯೆಯ ಮೂಲಕ ಸುತ್ತಮುತ್ತಲಿನ ತಾಪಮಾನವನ್ನು ಕಡಿಮೆ ಮಾಡಿ, ಗಾಳಿಯನ್ನು ಶುದ್ಧೀಕರಿಸುತ್ತವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net