ಬೇಸಿಗೆಯ ಬಿಸಿಲಿನ ಬೇಗೆಯಿಂದ ಮಕ್ಕಳನ್ನು ರಕ್ಷಿಸಲು ಮತ್ತು ಅವರ ಆರೋಗ್ಯವನ್ನು ಕಾಪಾಡುವುದು ಬಹಳ ಮುಖ್ಯವಾದ ಕೆಲಸ.
ಹೈಡ್ರೇಶನ್ ಮೊದಲ ಆದ್ಯತೆ
ಮಕ್ಕಳು ಆಟದಲ್ಲಿ ಮುಳುಗಿದಾಗ ಬಾಯಾರಿಕೆಯನ್ನು ಮರೆಯುತ್ತಾರೆ. ಪ್ರತಿ ಗಂಟೆಗೊಮ್ಮೆ ನೀರು ಕುಡಿಯುವುದನ್ನು ನೆನಪಿಸಿ. ನೀರು ಮಾತ್ರವಲ್ಲದೆ ಎಳನೀರು, ಮಜ್ಜಿಗೆ, ಅಥವಾ ಮನೆಯಲ್ಲೇ ಮಾಡಿದ ಹಣ್ಣಿನ ರಸಗಳನ್ನು ನೀಡಿ.
ನೈಸರ್ಗಿಕ ಹಣ್ಣುಗಳ ಬಳಕೆ
ಆಹಾರದಲ್ಲಿ ನೀರಿನಂಶ ಹೆಚ್ಚಿರುವ ಹಣ್ಣುಗಳಾದ ಕಲ್ಲಂಗಡಿ, ಕರ್ಬೂಜ, ಕಿತ್ತಳೆ ಮತ್ತು ಸೌತೆಕಾಯಿಯನ್ನು ಸೇರಿಸಿ. ಇದು ದೇಹಕ್ಕೆ ಅಗತ್ಯವಾದ ಎಲೆಕ್ಟ್ರೋಲೈಟ್‌ಗಳನ್ನು ಒದಗಿಸುತ್ತದೆ.
ಹತ್ತಿ ಬಟ್ಟೆಗಳ ಬಳಕೆ
ಮಕ್ಕಳಿಗೆ ತಿಳಿ ಬಣ್ಣದ, ಸಡಿಲವಾದ ಮತ್ತು ಗಾಳಿಯಾಡುವಂತಹ ಹತ್ತಿ ಬಟ್ಟೆಗಳನ್ನು ಧರಿಸಲು ನೀಡಿ. ಇದು ಬೆವರಿನಿಂದ ಉಂಟಾಗುವ ಚರ್ಮದ ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ.
ಹಗುರವಾದ ಆಹಾರ
ಬೇಸಿಗೆಯಲ್ಲಿ ಜೀರ್ಣಕ್ರಿಯೆ ನಿಧಾನವಾಗಿರುವುದರಿಂದ ಅತಿಯಾದ ಮಸಾಲೆ ಅಥವಾ ಎಣ್ಣೆಯುಕ್ತ ಆಹಾರದ ಬದಲು ಮೊಸರನ್ನ, ರಾಗಿ ಅಂಬಲಿ ಅಥವಾ ಹಬೆಯಲ್ಲಿ ಬೇಯಿಸಿದ ತಿಂಡಿಗಳನ್ನು ನೀಡಿ.
ಕೀಟಗಳಿಂದ ರಕ್ಷಣೆ
ಬೇಸಿಗೆಯಲ್ಲಿ ಸೊಳ್ಳೆ ಮತ್ತು ಇತರ ಕೀಟಗಳ ಕಾಟ ಹೆಚ್ಚಿರಬಹುದು. ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ ಮತ್ತು ಮಕ್ಕಳು ಮಲಗುವಾಗ ಸೊಳ್ಳೆ ಪರದೆ ಅಥವಾ ರೆಪೆಲೆಂಟ್‌ಗಳನ್ನು ಬಳಸಿ
ಚರ್ಮದ ಆರೈಕೆ
ಹೊರಗೆ ಹೋಗುವಾಗ ಮಕ್ಕಳ ಚರ್ಮಕ್ಕೆ ಸೂಕ್ತವಾದ ಸನ್‌ಸ್ಕ್ರೀನ್ ಹಚ್ಚಿ. ತಲೆಗೆ ಹ್ಯಾಟ್ ಅಥವಾ ಕ್ಯಾಪ್ ಧರಿಸುವುದು ಉತ್ತಮ. ಬೆವರು ಸಾಲೆ ಬರದಂತೆ ತಡೆಯಲು ಮೃದುವಾದ ಪೌಡರ್ ಅಥವಾ ಲೋಶನ್ ಬಳಸಿ.