ಫಿಟ್ನೆಸ್ ಚಾಲೆಂಜ್: ಈ ಸಣ್ಣ ಬದಲಾವಣೆಗಳಿಂದಲೇ ತೂಕ ಇಳಿಸಿಕೊಳ್ಳಿ! Fitness Challenge

ಫಿಟ್ನೆಸ್ ಚಾಲೆಂಜ್
ಫಿಟ್ನೆಸ್ ಚಾಲೆಂಜ್
Published on
Fitness Challenge

ಫಿಟ್ನೆಸ್ ಚಾಲೆಂಜ್

ಇಂದಿನ ಜಗತ್ತಿನಲ್ಲಿ, ಅನಾರೋಗ್ಯಕರ ಜೀವನಶೈಲಿ, ಕಳಪೆ ಆಹಾರ ಪದ್ಧತಿ ಮತ್ತು ಹೆಚ್ಚಿದ ಒತ್ತಡದಿಂದಾಗಿ ತೂಕ ಹೆಚ್ಚಾಗುವುದು ಸಾಮಾನ್ಯವಾಗಿದೆ. ಒಮ್ಮೆ ತೂಕ ಹೆಚ್ಚಾದರೆ, ಅದನ್ನು ಕಳೆದುಕೊಳ್ಳುವುದು ಸಾಮಾನ್ಯವೇನಲ್ಲ.
Fitness Challenge

ಸಕ್ಕರೆ ಪಾನೀಯಗಳನ್ನು ತಪ್ಪಿಸಿ

ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ಮೊದಲು ನೀವು ಕುಡಿಯುವ ಸೋಡಾ, ಸಿಹಿಗೊಳಿಸಿದ ಪಾನೀಯಗಳು, ಆಲ್ಕೋಹಾಲ್‌ನಂತಹ ಸಕ್ಕರೆ ಪಾನೀಯಗಳನ್ನು ಸೇವಿಸುವ ಅಭ್ಯಾಸವನ್ನು ಇಂದೇ ನಿಲ್ಲಿಸಿ.
Fitness Challenge

ಕಾರ್ಬೋಹೈಡ್ರೇಟ್‌ಗಳನ್ನು ಕಡಿಮೆ ಮಾಡಿ

ಸಂಸ್ಕರಿಸಿದ ಆಹಾರಗಳಾದ ಬಿಳಿ ಬ್ರೆಡ್, ಪೇಸ್ಟ್ರಿ, ಕರಿದ ತಿಂಡಿಗಳು ಮತ್ತು ಹೆಚ್ಚು ಅನ್ನ ಸೇವಿಸುವುದರಿಂದ ತೂಕ ಹೆಚ್ಚಾಗುತ್ತದೆ. ಹಾಗಾಗಿ ಇಂತಹ ಆಹಾರಗಳನ್ನು ಸೇವಿಸುವುದನ್ನು ನಿಲ್ಲಿಸಿ.
Fitness Challenge

ತಡರಾತ್ರಿಯ ತಿಂಡಿಗಳನ್ನು ತಪ್ಪಿಸಿ

ನೀವೇನಾದರೂ ರಾತ್ರಿ ವೇಳೆ ಬಿಸ್ಕತ್ತು ಅಥವಾ ಜ್ಯೂಸ್ ಸೇವಿಸುವ ಅಭ್ಯಾಸವನ್ನು ಮಾಡಿಕೊಂಡರೆ, ಇದರಿಂದ ಹೊಟ್ಟೆಯ ಕೊಬ್ಬು ಹೆಚ್ಚಾಗಬಹುದು. ಇದು ನಿಮ್ಮ ತೂಕ ಮತ್ತು ಆಕಾರವನ್ನು ತಪ್ಪಿಸಬಹುದು.
Fitness Challenge

ಆಹಾರ ಸೇವನೆಯನ್ನು ಮಿತಿಗೊಳಿಸಿ

ಹೊರಗೆ ಲಭ್ಯವಿರುವ ಫಾಸ್ಟ್ ಫುಡ್ ನಿಮಗೆ ರುಚಿಕರವಾಗಿರಬಹುದು, ಆದರೆ ಅದನ್ನು ಅತಿಯಾಗಿ ಸೇವಿಸುವುದರಿಂದ ತೂಕ ಹೆಚ್ಚಾಗಬಹುದು. ಹಾಗಾಗಿ ನೀವೇನಾದರೂ, ಈ ರೀತಿಯ ಆಹಾರವನ್ನು ಸೇವಿಸುತ್ತಿದ್ದರೆ, ಇಂದೇ ನಿಲ್ಲಿಸಿ.
Fitness Challenge

ನಿಮ್ಮನ್ನು ನೀವು ಚಟುವಟಿಕೆಯಿಂದ ಇಟ್ಟುಕೊಳ್ಳಿ

ಊಟ ಆದ ನಂತರ ಕನಿಷ್ಟ 30 ನಿಮಿಷಗಳ ಕಾಲ ಓಡಾಡುಡುವುದು, ಮೆಟ್ಟಿಲುಗಳನ್ನು ಹತ್ತಿ, ನಡೆಯುವ ಅಭ್ಯಾಸವನ್ನು ಮಾಡಿಕೊಳ್ಳಿ. ಇದು ನಿಮ್ಮನ್ನು ಆರೋಗ್ಯವಾಗಿರಿಸುವುದರ ಜೊತೆಗೆ ನಿಮ್ಮ ತೂಕವನ್ನು ಹೆಚ್ಚಿಸದಂತೆ ತಡೆಯುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net