'ಕಿಂಗ್​' ಕೊಹ್ಲಿ ಪಾದ ಸ್ಪರ್ಶಿಸಿದ ಅಭಿಮಾನಿ

350 ಟಾರ್ಗೆಟ್​ ನೀಡಿದ ಟೀಮ್ ಇಂಡಿಯಾ
350 ಟಾರ್ಗೆಟ್​ ನೀಡಿದ ಟೀಮ್ ಇಂಡಿಯಾ
Published on
Virat Kohli

350 ಟಾರ್ಗೆಟ್​ ನೀಡಿದ ಟೀಮ್ ಇಂಡಿಯಾ

ಇಂದು ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 'ರೋಕೊ' ಜೋಡಿ ಅಬ್ಬರದ ಬ್ಯಾಟಿಂಗ್​. 50 ಓವರ್​​ ಅಂತ್ಯಕ್ಕೆ ಟೀಮ್ ಇಂಡಿಯಾ 8 ವಿಕೆಟ್​ ಕಳೆದುಕೊಂಡು 349 ರನ್​ ಕಲೆಹಾಕಿತು.
rohit sharma

ರೋಹಿತ್ ಶರ್ಮ ದಾಖಲೆ

ಇಂದಿನ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ (57 ರನ್​) ಬಾರಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರ ಎಂಬ ದಾಖಲೆಗೆ ರೋಹಿತ್​ ತಮ್ಮ ಹೆಸರನ್ನು ಸೇರಿಸಿದ್ದಾರೆ.
rohit sharma

ರೋಹಿತ್ ಅವರ 352ನೇ ಸಿಕ್ಸರ್

ಇದು ಏಕದಿನ ಪಂದ್ಯಗಳಲ್ಲಿ ರೋಹಿತ್ ಅವರ 352ನೇ ಸಿಕ್ಸರ್ ಆಗಿದೆ. ಇದಕ್ಕೂ ಮೊದಲು ಪಾಕ್​ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿಯ ಹೆಸರಿನಲ್ಲಿ ಈ ದಾಖಲೆಯಿತ್ತು. ಅಫ್ರಿದಿ 398 ಪಂದ್ಯಗಳಲ್ಲಿ 351 ಸಿಕ್ಸರ್‌ಗಳನ್ನು ಬಾರಿಸಿದ್ದರೆ, ರೋಹಿತ್ ಕೇವಲ 277 ಪಂದ್ಯಗಳಲ್ಲಿ 352 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.
virat kohli

ದಾಖಲೆಗಳ ಸರದಾರ

ವಿರಾಟ್​ ಕೊಹ್ಲಿ ಅವರ ಶತಕದಾಟ (133* ರನ್​, 115 ಎಸೆತ) ಮೈದಾನದಲ್ಲಿದ್ದ ಕ್ರಿಕೆಟ್​ ಅಭಿಮಾನಿಗಳ ಉತ್ಸಾಹವನ್ನು ಹೆಚ್ಚಿಸಿತು. ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಅವರಿಂದ ಒಂದೇ ಒಂದು ಶತಕದ ಅಗತ್ಯವಿತ್ತು. ಕಡೆಗೂ ಮೊದಲ ಪಂದ್ಯದಲ್ಲಿಯೇ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ ಸಚಿನ್​ ತೆಂಡೂಲ್ಕರ್ ಅವರ​ ದಾಖಲೆಯನ್ನು ಮುರಿದಿದ್ದಾರೆ.
virat kohli

ಸಚಿನ್​ ತೆಂಡೂಲ್ಕರ್​ ದಾಖಲೆ ಬ್ರೇಕ್​

ಸಚಿನ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 200 ಪಂದ್ಯಗಳನ್ನಾಡಿದ್ದು, 53.8 ಸರಾಸರಿಯಲ್ಲಿ 15,921 ರನ್ ಗಳಿಸಿದ್ದಾರೆ. ಇದರಲ್ಲಿ 51 ಶತಕ ಮತ್ತು 68 ಅರ್ಧಶತಕಗಳು ಸೇರಿವೆ. ಇನ್ನು ವಿರಾಟ್ ಬಗ್ಗೆ ಹೇಳುವುದಾದರೆ, 306 ಏಕದಿನ ಪಂದ್ಯಗಳನ್ನಾಡಿದ್ದು​, 294 ಇನ್ನಿಂಗ್ಸ್‌ಗಳಲ್ಲಿ 57.7 ಸರಾಸರಿಯಲ್ಲಿ 14,255 ರನ್ ಗಳಿಸಿದ್ದಾರೆ. ಇದರಲ್ಲಿ 52 ಶತಕ, 76 ಅರ್ಧಶತಕ ಇವೆ
virat kohli

ಕೊಹ್ಲಿ ನೋಡಲು ಮೈದಾನದೊಳಗೆ ಓಡಿಬಂದ ಫ್ಯಾನ್​

ಏಕದಿನ ಪಂದ್ಯಕ್ಕೆ ತವರಿಗೆ ಬಂದ ವಿರಾಟ್​ರನ್ನು ನೋಡಲು ಅನೇಕ ಅಭಿಮಾನಿಗಳು ಮೈದಾನಕ್ಕೆ ಬಂದಿದ್ದರು. ಅಂತೆಯೇ, ಇಲ್ಲೊಬ್ಬ ಕೊಹ್ಲಿಯ ಅಪ್ಪಟ ಅಭಿಮಾನಿಯೊಬ್ಬ, ವಿರಾಟ್​ರನ್ನು ಜೀವನದಲ್ಲಿ ಒಮ್ಮೆಯಾದ್ರೂ ಮುಟ್ಟಬೇಕು ಎಂಬ ಹೆಬ್ಬಯಕೆಯಲ್ಲಿ ಮೈದಾನದೊಳಗೆ ಓಡಿಬಂದು, ಕೊಹ್ಲಿ ಕಾಲಿಗೆ ಬಿದ್ದಿದ್ದಾನೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net