ರಾತ್ರಿ ಪದೇ ಪದೇ ಶೌಚಾಲಯಕ್ಕೆ ಓಡುವುದನ್ನು ತಪ್ಪಿಸಲು ಈ ಹಣ್ಣುಗಳನ್ನು ಸೇವಿಸಿ! night time urination

ಆರೋಗ್ಯಕ್ಕೆ ಉತ್ತಮ ಹಣ್ಣುಗಳು
ಆರೋಗ್ಯಕ್ಕೆ ಉತ್ತಮ ಹಣ್ಣುಗಳು
Published on
night time urination

ಆರೋಗ್ಯಕ್ಕೆ ಉತ್ತಮ ಹಣ್ಣುಗಳು

ಮಲಗಿದ ನಂತರ ಕೆಲವೊಂದು ಜನರಿಗೆ ಮೂತ್ರ ವಿಸರ್ಜನೆ ಮಾಡುವ ಅಭ್ಯಾಸ ಇರುತ್ತದೆ. ಈ ಅಭ್ಯಾಸವು ನಿದ್ದೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವುನ್ನು ಹಲವಾರು ಜನರು ಅನುಭವಿಸಿರುತ್ತಾರೆ. ಈ ಸಮಸ್ಯೆಯನ್ನು ನೋಕ್ಟುರಿಯಾ ಎಂದು ಕರೆಯಲಾಗುತ್ತದೆ.
night time urination

ಬಾಳೆಹಣ್ಣು

ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಹೇರಳವಾಗಿದೆ. ಇದರ ಸೇವನೆಯು ಮೂತ್ರನಾಳದ ಸ್ನಾಯುಗಳ ಕಾರ್ಯವನ್ನು ಸುಧಾರಿಸಿ, ಮೂತ್ರ ಕೋಶವನ್ನು ಸಂಕುಚಿತಗೊಳ್ಳದಂತೆ ತಡೆಯುತ್ತದೆ. ಇದರಿಂದ ನೀವು ಪದೇ ಪದೇ ಮೂತ್ರ ವಿಸರ್ಜಿಸುವುದನ್ನು ತಡೆಯಬಹುದು.
night time urination

ದಾಳಿಂಬೆ

ದಾಳಿಂಬೆಯಲ್ಲಿ ಆಂಟಿ-ಆಕ್ಸಿಡೆಂಟ್‌ಗಳು ಸಮೃದ್ಧವಾಗಿರುತ್ತವೆ. ಇದರ ಸೇವನೆಯು ಮೂತ್ರಪಿಂಡದ ಸೋಂಕನ್ನು ಕಡಿಮೆ ಮಾಡಲು ಮತ್ತು ಮೂತ್ರನಾಳದ ಉರಿಯೂತವನ್ನು ನಿವಾರಿಸಲು ಸಹಾಯ ಮಾಡುತ್ತದೆ.
night time urination

ಸೇಬು

ಸೇಬಿನಲ್ಲಿರುವ ಫೈಬರ್ ಮತ್ತು ಇತರ ಪೋಷಕಾಂಶಗಳು ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ. ಇದು ಮೂತ್ರಕೋಶದ ಮೇಲೆ ಒತ್ತಡ ಹೇರುತ್ತದೆ. ಆದರಿಂದ ಸೇಬು ಸೇವನೆಯು ಮೂತ್ರ ವಿಸರ್ಜನೆಯನ್ನು ಸಮತೋಲನಗೊಳಿಸುತ್ತದೆ.
night time urination

ಕ್ರ್ಯಾನ್ಬೆರಿ

ಈ ಹಣ್ಣುಗಳ ಸೇವನೆಯು ಮೂತ್ರನಾಳದ ಸೋಂಕಿಗೆ ಸಹಾಯ ಮಾಡುತ್ತದೆ. ಇದು ಮೂತ್ರಕೋಶದಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯದಂತೆ ತಡೆದು, ರಾತ್ರಿ ಹೊತ್ತು ಮೂತ್ರ ವಿಸರ್ಜನೆ ಸಮಸ್ಯೆಯನ್ನು ನಿವಾರಿಸುತ್ತದೆ.
night time urination

ಒಣ ದ್ರಾಕ್ಷಿ

ರಾತ್ರಿ ಮಲಗುವ ಮುನ್ನ ಒಣ ದ್ರಾಕ್ಷಿಗಳನ್ನು ಸೇವಿಸುವುದರಿಂದ ಇದು ದೇಹದಲ್ಲಿ ಸಮತೋಲನ ಕಾಪಾಡಲು ಸಹಾಯ ಮಾಡುತ್ತದೆ. ಹಾಗೆಯೇ ಮೂತ್ರಕೋಶದ ಸಾಮರ್ಥ್ಯವನ್ನು ಸುಧಾರಿಸಿ ಮಲಗಿದ ನಂತರ ಮೂತ್ರ ವಿಸರ್ಜನೆಯನ್ನು ತಡೆಯಲು ಸಹಾಯ ಮಾಡುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net