ಪಾಲಕ್ ಸೊಪ್ಪು, ಮೆಂತ್ಯ ಸೊಪ್ಪು, ಬಸಳೆ ಸೊಪ್ಪು ಮುಂತಾದ ಹಸಿರು ತರಕಾರಿಗಳನ್ನು ತಿನ್ನುವುದರಿಂದ ಕಡಿಮೆ ಕ್ಯಾಲೊರಿ, ಹೆಚ್ಚು ಫೈಬರ್ ಮತ್ತು ವಿಟಮಿನ್‌ಗಳನ್ನು ಹೊಂದಿರುತ್ತದೆ. ಇವು ರಕ್ತದಲ್ಲಿ ಸಕ್ಕರೆಯನ್ನು ನಿಯಂತ್ರಿಸುತ್ತದೆ.
ಸಿರಿಧಾನ್ಯಗಳು
ಓಟ್ಸ್, ಬ್ರೌನ್ ರೈಸ್, ರಾಗಿ, ಜೋಳ, ಬಾರ್ಲಿ ಇಂತಹ ಆಹಾರಗಳನ್ನು ಸೇವಿಸುವುದರಿಂದ ದೇಹದಲ್ಲಿ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.
ಹಾಗಲಕಾಯಿ
ಭಾರತೀಯ ಆಹಾರದಲ್ಲಿ ಹಾಗಲಕಾಯಿ ವಿಶೇಷವಾಗಿದೆ. ಇದರಲ್ಲಿ ಇನ್ಸುಲಿನ್‌ನಂತೆ ಕೆಲಸ ಮಾಡುವ ಪದಾರ್ಥಗಳಿವೆ. ಆದರಿಂದ ಜ್ಯೂಸ್ ಅಥವಾ ಪಲ್ಯವಾಗಿ ಸೇವಿಸಬಹುದು.
ದ್ವಿದಳ ದಾನ್ಯಗಳು
ತೊಗರಿ ಬೇಳೆ, ಉದ್ದಿನ ಬೇಳೆ, ಮೂಂಗ್ ಡಾಲ್, ಕಡ್ಲೆ ಬೇಳೆಗಳನ್ನು ಸೇವಿಸುವುದರಿಂದ ಇದು ಪ್ರೋಟೀನ್ ಮತ್ತು ಫೈಬರ್ನ್ನು ದೇಹಕ್ಕೆ ನೀಡುತ್ತದೆ. ಇದು ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.
ಬೆರ್ರಿ ಹಣ್ಣುಗಳು
ಸ್ಟ್ರಾಬೆರಿ, ಬ್ಲೂಬೆರ್ರಿ ಅಥವಾ ನೆಲ್ಲಿಕಾಯಿಗಳಲ್ಲಿ ಆಂಟಿ ಆಕ್ಸಿಡೆಂಟ್ಗಳು ಹೇರಳವಾಗಿರುವುದರಿಂದ ಇವು ದೇಹದಲ್ಲಿ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.