ವಿಟಮಿನ್ ಡಿ ಹೆಚ್ಚಿಸಲು ಈ ಆಹಾರ ಸೇವಿಸಿ! Vitamin D

ವಿಟಮಿನ್ ಡಿ ಅಗತ್ಯ
ವಿಟಮಿನ್ ಡಿ ಅಗತ್ಯ
Published on
Vitamin D

ವಿಟಮಿನ್ ಡಿ ಅಗತ್ಯ

ವಿಟಮಿನ್ ಡಿ ದೇಹಕ್ಕೆ ಬಹಳ ಮುಖ್ಯ. ಇವು ಮೂಳೆಗಳು ಬಲವಾಗಿರಲು, ಕ್ಯಾಲ್ಸಿಯಂ ಹೀರಿಕೊಳ್ಳಲು, ರೋಗನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ಒಟ್ಟಾರೆ ಆರೋಗ್ಯಕ್ಕೆ ಸಹಾಯ ಮಾಡುತ್ತದೆ.
Vitamin D

ಕೊಬ್ಬಿನ ಮೀನುಗಳು

ಇವು ವಿಟಮಿನ್​ ಡಿ ಗೆ ಅತ್ಯುತ್ತಮ ಮೂಲವಾಗಿವೆ. 100g ಸಾಲ್ಮನ್‌ನಲ್ಲಿ 400-1000 IU+ ವಿಟಮಿನ್ ಡಿ ಇರುತ್ತದೆ. ಇದನ್ನು ಆಹಾರದಲ್ಲಿ ಬಳಸುವುದರಿಂದ ದೇಹಕ್ಕೆ ವಿಟಮಿನ್​ ಸುಲಭವಾಗಿ ಪಡೆಯಬಹುದು.
Vitamin D

ಮೊಟ್ಟೆಯ ಹಳದಿ ಭಾಗ

ಒಂದು ಮೊಟ್ಟೆಯ ಹಳದಿಯಲ್ಲಿ ಸುಮಾರು 40-50 IU. ದಿನಕ್ಕೆ 2-3 ಮೊಟ್ಟೆ ತಿಂದರೆ ಒಳ್ಳೆಯ ಪ್ರಮಾಣ ಸಿಗುತ್ತದೆ. ಸಸ್ಯಾಹಾರಿಗಳಿಗೆ ಇದು ಸುಲಭದ ಮೂಲವಾಗಿದೆ.
Vitamin D

ಅಣಬೆಗಳು

ಸೂರ್ಯನ ಬೆಳಕಿನಲ್ಲಿ ಇಟ್ಟರೆ ಅಥವಾ UV ಟ್ರೀಟ್ ಮಾಡಿದ ಅಣಬೆಗಳಲ್ಲಿ ಹೆಚ್ಚು ವಿಟಮಿನ್ ಡಿ ಇರುತ್ತದೆ – 100gಗೆ 400 IU+ ಸಾಧ್ಯ. ಭಾರತದಲ್ಲಿ ಬಟನ್ ಅಣಬೆ ಅಥವಾ ಒಯಿಸ್ಟರ್ ಮಷ್ರೂಮ್ ಸೇವನೆಯು ಕೂಡಾ ಉತ್ತಮವಾಗಿದೆ.
Vitamin D

ಡೈರಿ ಉತ್ಪನ್ನಗಳು

ಹಾಲು, ಮೊಸರು, ಚೀಸ್‌ಗಳಲ್ಲಿ ವಿಟಮಿನ್ ಡಿ ಸೇರಿರುತ್ತದೆ. ಒಂದು ಗ್ಲಾಸ್ ಹಾಲಿನಲ್ಲಿ 100-120 IU. ಇವುಗಳ ಸೇವನೆಯು ದೇಹಕ್ಕೆ ವಿಟಮಿನ್​ನ್ನು ಡಿ ಪೂರೈಕೆ ಮಾಡುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net