ದಾಳಿಂಬೆ ಚರ್ಮವು ಚರ್ಮ ರಕ್ಷಣೆಗೆ ಅದ್ಭುತವಾದಂತಹ ಆಹಾರವಾಗಿದೆ. ಇದರಲ್ಲಿರುವ ಪಾಲಿಫೆನಾಲ್‌ಗಳು, ಫ್ಲ್ಯಾವೊನಾಯ್ಡ್‌ಗಳು ಸೂರ್ಯನ ಕಿರಣಗಳಿಂದ ರಕ್ಷಣೆ ನೀಡುತ್ತದೆ.
ಎಳನೀರು
ತೆಂಗಿನ ನೀರು ನೈಸರ್ಗಿಕವಾಗಿ ಎಲೆಕ್ಟ್ರೋಲೈಟ್‌ಗಳ ಮೂಲವಾಗಿದೆ. ಇದರಲ್ಲಿರುವ ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ಗಳು ದೇಹ ಮತ್ತು ಚರ್ಮಕ್ಕೆ ಅಗತ್ಯವಾದ ತೇವಾಂಶವನ್ನು ಒದಗಿಸುತ್ತದೆ.
ಅಲೋವೆರಾ
ಅಲೋವೆರಾ ಚರ್ಮವನ್ನು ಶಾಂತಗೊಳಿಸುವಂತಹ ಶಕ್ತಿಯನ್ನು ಹೊಂದಿದೆ. ಇದರಲ್ಲಿರುವ ಅಸ್ಮನ್ನನ್ ಎಂಬ ಅಂಶವು ಚರ್ಮದ ರಕ್ಷಣಾತ್ಮಕ ತಡೆಗೋಡೆಯನ್ನು ಬಲಪಡಿಸುತ್ತದೆ.
ಪಿಸ್ತಾ
ಪ್ರತಿನಿತ್ಯ ಪಿಸ್ತವನ್ನು ಸೇವಿಸುವುದರಿಂದ ಇದು ಚರ್ಮ ರಕ್ಷಣೆಯನ್ನು ಮಾಡುತ್ತದೆ. ಇದರಲ್ಲಿರುವ ಆಂಟಿಆಕ್ಸಿಡೆಂಟ್‌ಗಳು, ವಿಟಮಿನ್ ಇ ಇರುವುದರಿಂದ ಫ್ರೀ ರಾಡಿಕಲ್‌ಗಳನ್ನು ನಿಯಂತ್ರಿಸಿ, ಮುಂಚಿತ ವಯಸ್ಸು, ಸುಕ್ಕುಗಟ್ಟುವುದನ್ನು ಕಡಿಮೆ ಮಾಡುತ್ತದೆ.
ಕೇಸರಿ
ಪ್ರಾಚೀನ ಕಾಲದಿಂದಲೂ ಕೇಸರಿಯನ್ನು ಸೌಂದರ್ಯದ ಸಂಗಾತಿ ಎಂದು ಕರೆಯಲಾಗುತ್ತದೆ. ಇದರಲ್ಲಿರುವ ಕ್ರೋಸಿನ್ ಮತ್ತು ಸಫ್ರನಲ್ ಎಂಬ ಉತ್ಕರ್ಷಣ ನಿರೋಧಕಗಳು ಚರ್ಮದಲ್ಲಿನ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ.